*ಹೊಲಿಗೆ ತರಬೇತಿ ನೀಡಲು ಆಸಕ್ತ ಸಂಸ್ಥೆಗಳಿಂದ ಅರ್ಜಿ ಆಹ್ವಾನ*
ಶಿವಮೊಗ್ಗ, ಆಗಸ್ಟ್ 22, :
2023-24 ನೇ ಸಾಲಿನ ಜಿಲ್ಲಾ ವಲಯದ ತರಬೇತಿ ಹಾಗೂ ತರಬೇತಿ ಪಡೆದ ಫಲಾನುಭವಿಗಳಿಗೆ ಸುಧಾರಿತ ಉಪಕರಣ ವಿತರಣೆ ಕಾರ್ಯಕ್ರಮದಡಿ ಬೇಸಿಕ್ ಹೊಲಿಗೆ ತರಬೇತಿಯನ್ನು ನೀಡಲು ಆಸಕ್ತ ಅರ್ಹ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಉಪನಿರ್ದೇಶಕರು(ಗ್ರಾಕೈ ರವರ ಕಚೇರಿ) ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಗ್ರಾಮೀಣ ಕೈಗಾರಿಕೆ ಇಲಾಖೆಯಿಂದ 120 ಫಲಾನುಭವಿಗಳಿಗೆ ಜಿಲ್ಲೆಯ ವ್ಯಾಪ್ತಿಗೊಳಪಡುವ ಗ್ರಾಮೀಣ ಪ್ರದೇಶದ 18 ವರ್ಷ ಮೇಲ್ಪಟ್ಟ ಅರ್ಹ ಫಲಾನುಭವಿಗಳಿಗೆ 270 ಗಂಟೆಗಳ ಅವಧಿಯ ಬೇಸಿಕ್ ಹೊಲಿಗೆ ತರಬೇತಿಯನ್ನು ಆಯಾ ತಾಲ್ಲೂಕಿನ ನಿರ್ದಿಷ್ಟಪಡಿಸಿದ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ.
ಆದ್ದರಿಂದ ನಿರ್ದಿಷ್ಟಪಡಿಸಿದ ಗ್ರಾ.ಪಂ ವ್ಯಾಪ್ತಿಯಲ್ಲಿ ತರಬೇತಿ ನೀಡಲು ಆಸಕ್ತ ಅರ್ಹ ಸಂಸ್ಥೆಗಳು ಷರತ್ತಗಳಿಗೆ ಒಳಪಟ್ಟು ದಿನಾಂಕ: 01-09-2023 ರೊಳಗೆ ಕೈಗಾರಿಕೆ ಮತತು ವಾಣಿಜ್ಯ ಇಲಾಖೆ, ಗ್ರಾಮೀಣ ಕೈಗಾರಿಕೆ ಕಚೇರಿಗೆ ಅಗತ್ಯ ದಾಖಲೆಗಳೊಂದಿಗೆ ಮುದ್ದಾಂ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಉಪನಿರ್ದೇಕರು(ಗ್ರಾಕೈ ರವರ ಕಚೇರಿ) ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಗ್ರಾಮೀಣ ಕೈಗಾರಿಕೆ ಇಲಾಖೆ, ಜಿಲ್ಲಾಪಂಚಾಯತ್, 3ನೇ ಮಹಡಿ, ಶಿವಪ್ಪನಾಯಕ ಕಚೇರಿ ಸಂಕೀರ್ಣ, ನೆಹರೂ ರಸ್ತೆ, ಶಿವಮೊಗ್ಗ, ದೂ.ಸಂ: 08182-223376 ನ್ನು ಸಂಪರ್ಕಿಸಬಹುದೆಂದು ಇಲಾಖೆಯ ಉಪನಿರ್ದೇಶಕರು(ಗ್ರಾಕೈ) ತಿಳಿಸಿದ್ದಾರೆ.
Leave a Comment