ಆಗಸ್ಟ್ 20 ರಂದು ಸಂಸ್ಕೃತ ಪ್ರತಿಭಾ ಪುರಸ್ಕಾರ ಸಮಾರಂಭ.

ಕರ್ನಾಟಕ ರಾಜ್ಯ ಪ್ರೌಢಶಾಲಾ ಸಂಸ್ಕೃತಾಧ್ಯಾಪಕ ಸಂಘ, ಶಿವಮೊಗ್ಗ ವಲಯದ ವತಿಯಿಂದ ಸಂಸ್ಕೃತ ವಿಷಯದಲ್ಲಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು 
ದಿ. 20.8.2023 ಭಾನುವಾರ ಬೆಳಿಗ್ಗೆ 10 ಗಂಟೆಗೆ ಶಿವಮೊಗ್ಗ ನಗರದ ಕೋಟೆ ರಸ್ತೆಯಲ್ಲಿ ಇರುವ ವಾಸವಿ ಪಬ್ಲಿಕ್ ಸ್ಕೂಲ್ ನಲ್ಲಿ  ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮವನ್ನು ಮಾನ್ಯ ಶಾಸಕರಾದ ಶ್ರೀ ಎಸ್ ಎನ್ ಚನ್ನಬಸಪ್ಪ ಅವರು ಉದ್ಘಾಟಿಸುವರು. 

ಅಭ್ಯಾಗತರಾಗಿ ಸಂಸ್ಕೃತ ವಿಷಯ ಪರಿವೀಕ್ಷಕರಾದ ಡಾ.ವೆಂಕಟರಮಣ ದೇವರು ಭಟ್ಟರು. 

ವಾಸವಿ ಪಬ್ಲಿಕ್ ಸ್ಕೂಲ್ ನ ಕಾರ್ಯದರ್ಶಿಗಳಾದ 
ಎಸ್ ಕೆ. ಶೇಷಾಚಲ.

ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅ ನಾ ವಿಜಯೇಂದ್ರ ರಾವ್, 

ಸಂಸ್ಕ್ರತ ಭಾರತೀ ವಿಭಾಗ ಸಂಯೋಜಕ ಗುರುಮೂರ್ತಿ ಯವರು ಭಾಗವಹಿಸುವರು.

ಸಾರ್ವಜನಿಕರು ಮತ್ತು ಸಂಸ್ಕೃತಾಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಸಂಘದ ಅಧ್ಯಕ್ಷರಾದ ಅರುಣಾ ವೆಂಕಟೇಶ್, 

ಕಾರ್ಯದರ್ಶಿ 
K S ಕುಮಾರ್ ಸ್ವಾಮಿ ಮತ್ತು ಸಂಘಟಕರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.