ಶಿವಮೊಗ್ಗ DAR ನಲ್ಲಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ *ಒತ್ತಡ ನಿರ್ವಹಣೆಯ ಕುರಿತು ಕಾರ್ಯಾಗಾರ

 ಶಿವಮೊಗ್ಗ: ಈ ದಿನ ದಿನಾಂಕ  27-07-2023 ರಂದು *ಶಿವಮೊಗ್ಗ ನಗರದ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ,* ಪೊಲೀಸ್ ಇಲಾಖಾ ವತಿಯಿಂದ ಶಿವಮೊಗ್ಗ ಟೌನ್ ನ  ಪೊಲೀಸ್ ಠಾಣೆ, ವೃತ್ತ ಕಛೇರಿ ಮತ್ತು ಉಪ ವಿಭಾಗ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ *ಒತ್ತಡ ನಿರ್ವಹಣೆಯ ಕುರಿತು ಕಾರ್ಯಾಗಾರವನ್ನು* ಹಮ್ಮಿಕೊಳ್ಳಲಾಗಿತ್ತು. 
*ಶ್ರೀಮತಿ ನಗ್ಮಾ ಬಾನು,  ಯೋಗಕ್ಷೇಮ ಅಧಿಕಾರಿ ಶಿವಮೊಗ್ಗ* ಜಿಲ್ಲೆರವರು ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂಧಿಗಳ ಕುರಿತು ಮಾತನಾಡಿ, *ಒತ್ತಡ ನಿರ್ವಹಣೆ ಮತ್ತು ಒತ್ತಡದ ನಿರ್ವಹಣೆಯ ಪ್ರಾಮುಖ್ಯತೆ* ಒತ್ತಡದ ಮೂಲ, ಒತ್ತಡದಿಂದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ವಿವಿಧ ಚಟುವಟಿಕೆಗಳ ಮೂಲಕ ತಿಳಿಸಿಕೊಟ್ಟಿರುತ್ತಾರೆ ಹಾಗೂ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗಳು *ಕೆಲಸದ ಸಂದರ್ಭದಲ್ಲಿ ಸಕಾರಾತ್ಮಕ ಮನೋಭಾವದಿಂದ ಕೆಲಸ ನಿರ್ವಹಿಸುವ ಬಗ್ಗೆ*  ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳುವ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿರುತ್ತಾರೆ.ಈ ಸಂದರ್ಭದಲ್ಲಿ ಶಿವಮೊಗ್ಗ ಗ್ರಾಮಾಂತರ, ಕುಂಸಿ ಮತ್ತು ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸ್ ಠಾಣೆಗಳ ಪೊಲೀಸ್ *ಉಪನಿರೀಕ್ಷಕರುಗಳು ಮತ್ತು ಅಧಿಕಾರಿ ಹಾಗೂ ಸಿಬ್ಬಂದಿಗಳು* ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.