ಶಿವಮೊಗ್ಗ: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಚರ್ಚ್ ಫಾದರ್ ಜೈಲುಪಾಲು
ಶಿವಮೊಗ್ಗ:ಅಪ್ರಾಪ್ತ ಬಾಲಕಿಗೆಗೆ ಲೈಂಗಿಕ ಕಿರುಕುಳದ ದೂರಿನ ಹಿನ್ನೆಲೆಯಲ್ಲಿ ಪೋಕ್ಸೋ ಕಾಯ್ದೆ ಅಡಿ ಕೇಸು ದಾಖಲಿಸಿ, ಶಿವಮೊಗ್ಗದ ಪ್ರತಿಷ್ಠಿತ ಚರ್ಚ್ ನ ಫಾದರ್ ನನ್ನು ಕೋಟೆ ಠಾಣೆ ಪೋಲಿಸರು ಬಂಧನ ಮಾಡಿದ್ದರು. ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಯಿತು.ನ್ಯಾಯಾಲಯ ಆರೋಪಿ ಚರ್ಚ್ ಫಾದರ್ ಫ್ರಾನ್ಸಿಸ್ ಫರ್ನಾಂಡಿಸ್ ಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೊಳಪಡಿಸಿದೆ.
ಶಿವಮೊಗ್ಗದ 1ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರು ಆರೋಪಿಗೆ ಮುಂದಿನ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ, ಆದೇಶಿಸಿದ್ದಾರೆ ಎಂದು ತಿಳಿದುಬಂದಿದೆ.
ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹಾಗೂ ಜಾತಿ ನಿಂದನೆ ಆರೋಪ ಎದುರಿಸುತ್ತಿರುವ ಫಾದರ್ ಫ್ರಾನ್ಸಿಸ್ ಫರ್ನಾಂಡಿಸ್ ನನ್ನ ಬಂಜಾರ ಸಂಘದ ಕಾರ್ಯಕರ್ತರ ತೀವ್ರ ವಿರೋಧದ ನಡುವೆಯೂ ಕೋಟೆ ಪೊಲೀಸ್ ಠಾಣೆಯಿಂದ ನ್ಯಾಯಾಲಯಕ್ಕೆ ಕರೆತಂದ ಹಾಜರ್ ಪಡಿಸಲಾಯಿತು.ಇದೀಗ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ.ಪೋಲಿಸ್ ತನಿಖೆ ಮುಂದುವರಿದೆ.
ಶಿವಮೊಗ್ಗದ ಪ್ರತಿಷ್ಠಿತ ಚರ್ಚ್ ಮುಂದೆ ಹಿಂದುಸಂಘಟನೆ ಕಾರ್ಯಕರ್ತರಿಂದ ಪ್ರತಿಭಟನೆ
ಶಿವಮೊಗ್ಗದ ಪ್ರತಿಷ್ಠಿತ ಚರ್ಚ್ ಮುಂದೆ ಹಿಂದುಸಂಘಟನೆ ಪ್ರತಿಭಟನೆ ನಡೆಸಿ, ಹಿಂದೂ ಮಕ್ಕಳನ್ನ ರಕ್ಷಿಸುವಂತೆ ಪ್ರತಿಭಟನೆ ನಡೆಸಿದೆ.
ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಮತ್ತು ಜಾತಿನಿಂದನೆ ಮಾಡಿ ಬಂಧನಕ್ಕೊಳಗಾದ ಪಾದ್ರಿಯನ್ನ ಗಲ್ಲಿ ಗೇರಿಸಬೇಕು. ಪೋಷಕರು ಜಾಗೃತರಾಗಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ
ಪೋಷಕರು ಮಕ್ಕಳನ್ನ ವಸತಿ ನಿಲಯಕ್ಕೆ ದಾಖಲಿಸಿ ಸುಮ್ಮನಿರಬಾರದು ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.
ಪ್ರತಿಭಟನೆಯಲ್ಲಿ ಅಂಕುಶ್, ನಾಗೇಶ್ , ಭಗತ್ ಸೇನೆ ಸಂತೋಷ್ ಕಿಟ್ಟಿ, ಸತೀಶ್ ಸೇಠ್ ಮೊದಲಾದ ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳ ಕಾರ್ಯಕರ್ತರು ಭಾಗಿಯಾಗಿದ್ದರು.
Leave a Comment