*ಮ್ಯಾನ್ ಪವರ್ ಏಜೆನ್ಸಿ ವಿರುದ್ಧ**ಸಿಮ್ಸ್ ಮಹಿಳಾ ಕಾಮಿ೯ಕರ ದೂರು*

ಶಿವಮೊಗ್ಗ, ಜು-13 ಶಿವಮೊಗ್ಗ ಮೆಡಿಕಲ್ ಕಾಲೇಜ್ ಮ್ಯಾನ್ ಪವರ್ ಏಜೆನ್ಸಿ ಶೋಷಣೆ ವಿರುದ್ಧ ಸಿಮ್ಸ್ ಕಾಲೇಜು ಸ್ವಚ್ಛತಾ ವಿಭಾಗದ ಮಹಿಳಾ ಕಾಮಿ೯ಕರು ಸಿಮ್ಸ್ ನಿದೇ೯ಶಕ ಹಾಗು ಜಿಲ್ಲಾ ಕಾಮಿ೯ಕ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.ಸಕಾಲಕ್ಕೆ ಸಂಬಳ ನೀಡದಿರುವುದು, ಕಳೆದ ಜೂನ್ ತಿಂಗಳ ಸಂಬಳ ಪಾವತಿಸದೆ ಇರುವುದು, ಹಾಲಿ ನೀಡಲಾಗುತ್ತಿರುವ ಸಂಬಳವನ್ನು ಸುಮಾರು ಐದು ಸಾವಿರ ರೂಪಾಯಿ ಕಡಿಮೆ ಮಾಡುವುದಾಗಿ ಬೆದರಿಕೆ ಹಾಕುವುದು, ಯೂನಿಫಾರ್ಮ್, ಗ್ಲೌಸ್, ವಿತರಿಸದೆ ಕಾಮಿ೯ಕ ಇಲಾಖೆ ಸೂಚನೆ ಧಿಕ್ಕರಿಸಿರುವುದು ಇನ್ನಿತರ ದೂರುಗಳನ್ನು ಮಹಿಳೆಯರು ಅಧಿಕಾರಿಗಳ ಮುಂದೆ ಹೇಳಿಕೊಂಡಿದ್ದಾರೆ.
   ನಿನ್ನೆ ಸಂಜೆ ಆರೂವರೆ ಗಂಟೆಯವರೆಗೆ ತಡವಾದರೂ ದೂರು ಆಲಿಸಿದ ಜಿಲ್ಲಾ ಕಾಮಿ೯ಕ ಅಧಿಕಾರಿ ಸುಮಾ ನಿರೀಕ್ಷಕ ಭೀಮೇಶ್ ತಕ್ಷಣ ಸಂಬಂಧಪಟ್ಟ ಮ್ಯಾನ್ ಪವರ್ ಏಜೆನ್ಸಿಯವರನ್ನು ಕರೆದು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
*ಸಿಮ್ಸ್ ನಿದೇ೯ಶಕರಿಂದ*
*ದೂರು ಕೇಳಲು ನಿರಾಕರಣೆ*
   ಇದಕ್ಕೆ ಮುನ್ನ ಮಧ್ಯಾಹ್ನ ಮಹಿಳಾ ಕಾಮಿ೯ಕರು ದೂರು ನೀಡಲು ಹೋದಾಗ ಸಿಮ್ಸ್ ನಿದೇ೯ಶಕ ಕಾಮಿ೯ಕರ ದೂರು ಕೇಳಲು ನಿರಾಕರಿಸಿದ ಪ್ರಸಂಗವೂ ನಡೆಯಿತು, ವಿಪರ್ಯಾಸ ಎಂಬಂತೆ ಮಹಿಳಾ ಕಾಮಿ೯ಕರ ದೂರುಗಳ ಕುರಿತು ಮ್ಯಾನ್ ಪವರ್ ಏಜೆನ್ಸಿ ಜೊತೆಗೆ ಚಚಿ೯ಸಲು ಮೊದಲಿಗೆ ಎರಡು ದಿನ ಕಾಲಾವಕಾಶ ಬೇಕೆಂದ ನಿದೇ೯ಶಕ ಮಹಿಳೆಯರ ಒತ್ತಾಯಕ್ಕೆ ಒಲಿಯದೆ ಒಂದು ವಾರ ಕಾಲಾವಕಾಶ ಕೇಳಿದ ಘಟನೆಯೂ ನಡೆಯಿತು.
   ಮಹಿಳಾ ಕಾಮಿ೯ಕರ ನಿಯೋಗದಲ್ಲಿ ಸಾಮಾಜಿಕ ಹೋರಾಟಗಾರ ತೀ.ನ. ಶ್ರೀನಿವಾಸ್, ಹಿಂದುಳಿದ ಜನ ಜಾಗೃತಿ ವೇದಿಕೆಯ ಆರ್. ಟಿ. ನಟರಾಜ್, ಉಮೇಶ್ ಯಾದವ್ ಹಾಗು ವೈ. ಹೆಚ್. ನಾಗರಾಜ್ ಇತರರು ಇದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.