ಪತ್ನಿಗೆ ಕೇಬಲ್ ವೈರ್ ನಿಂದ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ -ದಂಡ

ಶಿವಮೊಗ್ಗ:  *ಬೊಮ್ಮನಕಟ್ಟೆಯ ವಾಸಿ 27 ವರ್ಷದ ಮಹಿಳೆಗೆ ಆಕೆಯ ಗಂಡ ಅಲ್ಲಾಭಕ್ಷಿ ಈತನು* ಮದುವೆಯಾದಾಗಿನಿಂದಲೂ *ಕೌಟುಂಬಿಕ ಹಿಂಸೆ* ನೀಡುತ್ತಿದ್ದು, ದಿನಾಂಕಃ 05-01-2021  ರಂದು ಮಧ್ಯಾಹ್ನ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬೊಮ್ಮನಕಟ್ಟೆಯ ತನ್ನ ವಾಸದ ಮನೆಯಲ್ಲಿ *ಡಿಶ್ ಕೇಬಲ್ ವೈರ್ ನಿಂದ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ* ಮಾಡಿರುತ್ತಾನೆಂದು ಮೃತೆಯ ತಾಯಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ. 

            ಪ್ರಕರಣದಲ್ಲಿ ತನಿಖಾಧಿಕಾರಿಗಳಾದ *ಶ್ರೀ ರವಿ ಎನ್, ಎಸ್, ಪಿಐ, ವಿನೋಬನಗರ* ಪೊಲೀಸ್ ಠಾಣೆ ರವರು *ಆರೋಪಿತನನ್ನು ದಸ್ತಗಿರಿ ಮಾಡಿ,* ಪ್ರಕರಣದ ತನಿಖೆ ಕೈಗೊಂಡು  ಆರೋಪಿಯ ವಿರುದ್ಧ *ಘನ ನ್ಯಾಯಾಲಯಕ್ಕೆ ದೋಷಾರೋಪಣ* ಪತ್ರವನ್ನು ಸಲ್ಲಿಸಿರುತ್ತಾರೆ.  

         ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರಾದ *ಶ್ರೀಮತಿ ಮಮತ ಕೆ.ಎಸ್.* ರವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದು, *1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ  ನ್ಯಾಯಾಲಯ* ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದು ಆರೋಪಿತನ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ, *ಮಾನ್ಯ ನ್ಯಾಯಾಧೀಶರಾದ ಶ್ರೀ ಕೆ. ಮಾನು ರವರು* ದಿನಾಂಕ: 20-07-2023 ರಂದು ಆರೋಪಿತನಾದ *ಅಲ್ಲಾಭಕ್ಷಿ, 38 ವರ್ಷ, ಬೊಮ್ಮನಕಟ್ಟೆ ಈತನಿಗೆ ಜೀವಾವಧಿ ಶಿಕ್ಷೆ ಮತ್ತು 25,000 /- ರೂ ದಂಡ, ದಂಡಕಟ್ಟಲು ವಿಫಲನಾದಲ್ಲಿ ಹೆಚ್ಚುವರಿ 04 ತಿಂಗಳು ಸಾಧಾ ಕಾರಾವಾಸ ಶಿಕ್ಷೆ* ವಿಧಿಸಿ ಆದೇಶ ನೀಡಿರುತ್ತಾರೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.