ಜು.29 ರಂದು ಪತ್ರಿಕಾಭವನದಲ್ಲಿ ಪತ್ರಿಕಾ ದಿನಾಚರಣೆ ಮತ್ತು ಅಭಿನಂದನಾ ಸಮಾರಂಭ

ಶಿವಮೊಗ್ಗ,: ಶಿವಮೊಗ್ಗ ಪ್ರೆಸ್ ಟ್ರಸ್ಟ್ , ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ (ರಿ) ಶಿವಮೊಗ್ಗದ ಆಶ್ರಯದಲ್ಲಿ ಜು.29 ರಂದು ಬೆಳಗ್ಗೆ ೧೦ ಗಂಟೆಗೆ ಪತ್ರಿಕಾಭವನದಲ್ಲಿ ಪತ್ರಿಕಾ ದಿನಾಚರಣೆ ಮತ್ತು ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ.
ಸಂಸದ ಬಿ.ವೈ. ರಾಘವೇಂದ್ರ ಅವರು ಕಾರ್ಯಕ್ರಮ ಉದ್ಘಾಟಿಸುವರು.

ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ  ಎನ್. ಮಂಜುನಾಥ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಶಿವಮೊಗ್ಗ ಮಹಾನಗರ ಪಾಲಿಕೆ ಮಹಾಪೌರರಾದ ಶಿವಕುಮಾರ್, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಎಸ್. ರುದ್ರೇಗೌಡ,

 ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ  ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಆಗಮಿಸುವರು. ಶಿವಮೊಗ್ಗ ಜಿಲ್ಲಾಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ  
 ಗೋಪಾಲ್ ಎಸ್ ಯಡಗೆರೆ ಉಪಸ್ಥಿತರಿರುವರು. ಖಾದ್ರಿ ಶಾಮಣ್ಣ ಪ್ರಶಸ್ತಿ ಪುರಸ್ಕೃತರಾದ ಹೊನಕೆರೆ ನಂಜುಂಡೇಗೌಡ, ವಿಎಸ್‌ಕೆ ಮಾಧ್ಯಮ ಪ್ರಶಸ್ತಿ ಪುರಸ್ಕೃತರಾದ
ಎಂ. ಶ್ರೀನಿವಾಸನ್ ಅವರನ್ನು ಅಭಿನಂದಿಸಲಾಗುವುದು.

ಗೌರವ ಸನ್ಮಾನ :  
ಪತ್ರಿಕಾ ವಿತರಕರಾದ ಕೆ.ಎಸ್.ಕೃಷ್ಣಮೂರ್ತಿ,
ಆರ್.ರಾಮಚಂದ್ರ ಮುದ್ರಣ ವಿಭಾಗದ ದಿ.ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ ತವಮಣಿ ಸಿ., ವಿಜಯಕರ್ನಾಟಕದ  ಹೆಚ್. ಶ್ರೀನಿವಾಸಲು ಜಾಹಿರಾತು ವಿಭಾಗದಿಂದ ಎಚ್ಚರಿಕೆ ಪತ್ರಿಕೆಯ ಜೋಸೆಫ್ ಟೆಲ್ಲಿಸ್, ವಿಜಯ ಕರ್ನಾಟಕದ   ರಾಜಣ್ಣ ಜೆ.. ಪುಟವಿನ್ಯಾಸಕಾರರಾದ ಕ್ರಾಂತಿದೀಪ ಪತ್ರಿಕೆಯ  ಸರೋಜ ಎ., ಜನಹೋರಾಟದ ಉಷಾ ಹೆಚ್.ಕೆ., ಶಿವಮೊಗ್ಗ ಟೈಮ್ಸ್‌ನ   ಭಾವಿತಾ ಶೆಟ್ಟಿ ಅವರನ್ನು ಗೌರವಿಸಲಾಗುವುದು. ಕಾರ್ಯಕ್ರಮಕ್ಕೆ ಪತ್ರಕರ್ತರು, ಕುಟುಂಬವರ್ಗ ಹಾಗೂ ಪತ್ರಿಕಾ ಸಿಬ್ಬಂದಿಗಳು

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.