ಅಪ್ರಾಪ್ತ ಬಾಲಕನಿಗೆ ಚಾಲನೆ ಮಾಡಲು ವಾಹನ ನೀಡಿದ ಮಾಲೀಕನಿಗೆ 25 ಸಾವಿರ ದಂಡ!!

 .                 ‌‌‌‌‌ಸಾಂದರ್ಬಿಕ ಚಿತ್ರ
ಶಿವಮೊಗ್ಗ: ದಿನಾಂಕಃ-19-07-2023  ರಂದು *ಶ್ರೀ ರಮೇಶ್ ಪಿಎಸ್ಐ* ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆ ರವರು ಠಾಣಾ ವ್ಯಾಪ್ತಿಯ *ಹುತ್ತಾ ಕಾಲೋನಿಯ ಬಳಿ ವಾಹನ ತಪಾಸಣೆ* ಮಾಡುವಾಗ *16 ವರ್ಷದ ಅಪ್ರಾಪ್ತ ವಯ್ಯಸ್ಸಿನ ಬಾಲಕನೊಬ್ಬನು  ವಾಹನ ಚಾಲನಾ ಪರವಾನಿಗೆ ಇಲ್ಲದೆ ಕೆಎ-14 ಇಕೆ-2461 ನೋಂದಣಿ ಸಂಖ್ಯೆಯ ದ್ವಿ ಚಕ್ರ ವಾಹನವನ್ನು ಚಾಲನೆ* ಮಾಡಿ ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡಿದ್ದರು.
ಅಪ್ರಾಪ್ತ ವಯ್ಯಸ್ಸಿನ ಬಾಲಕನಿಗೆ ದ್ವಿ ಚಕ್ರ ವಾಹನವನ್ನು ಚಾಲನೆ ಮಾಡಲು ಅವಕಾಶ ನೀಡಿದ *ವಾಹನದ ಮಾಲೀಕರಾದ ಅಪ್ರಾಪ್ತ ವಯ್ಯಸ್ಸಿನ ಬಾಲಕನ ತಂದೆ ಶ್ರೀಕಾಂತ್, 45 ವರ್ಷ, ವಾಸ ಜನ್ನಾಪುರ ಭದ್ರಾವತಿ ಟೌನ್ ಈತನ* ವಿರುದ್ಧ ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ *ಲಘು ಪ್ರಕರಣವನ್ನು ದಾಖಲಿಸಿ* ಘನ ನ್ಯಾಯಾಲಯಕ್ಕೆ ದೋಷಾರೋಪಣಾ ವರದಿಯನ್ನು ಸಲ್ಲಿಸಿದ್ದರು.

ಜೆಎಂಎಫ್ಸಿ ನ್ಯಾಯಾಲಯ ಭದ್ರಾವತಿಯ ಮಾನ್ಯ ನ್ಯಾಯಾಧೀಶರು ದ್ವಿ ಚಕ್ರ ವಾಹನದ ಮಾಲೀಕರಾದ ಶ್ರೀಕಾಂತ್ ಈತನಿಗೆ ರೂ 25,000/- ದಂಡ* ವಿಧಿಸಿರುತ್ತಾರೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.