ಜುಲೈ 22 ರಂದು,ಕುವೆಂಪು ವಿಶ್ವವಿದ್ಯಾಲಯದ 33ನೇ ವಾರ್ಷಿಕ ಘಟಿಕೋತ್ಸವ ಸಮಾರಂಭ

 ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ  33ನೇ ವಾರ್ಷಿಕ ಘಟಿಕೋತ್ಸವ ಸಮಾರಂಭ ಶನಿವಾರ, ಜುಲೈ 22 ರಂದು  ಬೆಳಿಗ್ಗೆ 10-30 ಗಂಟೆಗೆ ಕುವೆಂಪು ವಿಶ್ವವಿದ್ಯಾಲಯ 
ಬಸವಾ ಸಭಾ ಭವನ, ಜ್ಞಾನಸಹ್ಯಾದ್ರಿ  ಶಂಕರಘಟ್ಟ ದಲ್ಲಿ ಜರುಗಲಿದೆ ಎಂದು ಕುವೆಂಪು ವಿಶ್ವವಿದ್ಯಾಲಯ ಕುಲಪತಿ ಪ್ರೋ.ಬಿ.ಪಿ.ವೀರಭದ್ರಪ್ಪ ಹೇಳಿದರು.
ಅವರು ಇಂದು ಬೆಳಿಗ್ಗೆ ಖಾಸಾಗಿ ಹೋಟೆಲ್ ಒಂದರಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.

ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮಕ್ಕೆ
ಶ್ರೀ ಥಾವರ್ ಚಂದ್ ಗೆಹೋಟ್ ಗೌರವಾನ್ವಿತ ರಾಜ್ಯಪಾಲರು, ಕರ್ನಾಟಕ ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿಗಳು ಅಗ್ರಾಹಸನ ವಹಿಸುವರು ಎಂದರು.

ಮುಖ್ಯ ಅತಿಥಿಗಳಾಗಿ 
ಪದ್ಮ ಭೂಷಣ, ಪದ್ಮಶ್ರೀ ಡಾ. ಸುರೇಶ್ ಬಿ. ಎನ್. 
ಕುಲಾಧಿಪತಿಗಳು, ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ, ತಿರುವನಂತಪುರಂ ಮತ್ತು ಗೌರವಾನ್ವಿತ ವಿಶಿಷ್ಟ ಪ್ರಾಧ್ಯಾಪಕರು, ಇಸ್ರೋ, ಬೆಂಗಳೂರು ಇವರು ಆಗಮಿಸುತ್ತಾರೆ .ಇವರು ಘಟಿಕೋತ್ಸವ ಭಾಷಣ ಮಾಡುವರು. ಎಂದರು.

ಎಂ. ಸಿ. ಸುಧಾಕರ್, ಸನ್ಮಾನ್ಯ ಉನ್ನತ ಶಿಕ್ಷಣ ಸಚಿವರು, ಕರ್ನಾಟಕ ಸರ್ಕಾರ ಸಮಕುಲಾಧಿಪತಿಗಳು, ಇವರು ಘಟಿಕೋತ್ಸವದಲ್ಲಿ ಉಪಸ್ಥಿತರಿರುವರು. 

*ಕುವೆಂಪು ವಿವಿ 33ನೇ ವಾರ್ಷಿಕ‌ ಘಟಿಕೋತ್ಸವ* 

*ಗೌರವ ಡಾಕ್ಟರೇಟ್ ಪುರಸ್ಕೃತರು* 
 
 *ಸದಾನಂದ ಶೆಟ್ಟಿ* 
 *ಶೈಕ್ಷಣಿಕ ಮತ್ತು ಕ್ರೀಡಾ ಕ್ಷೇತ್ರ* 

ಮೂಲತಃ ಉಡುಪಿ ಮೂಲದ ಸದಾನಂದ‌ಶೆಟ್ಟಿ, ಶಿಕ್ಷಣ ತಜ್ಞರು ಮತ್ತು ಕ್ರೀಡಾ‌ ಆಡಳಿತಗಾರರು. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಮತ್ತು ಮಂಗಳೂರು ವಿದ್ಯಾಲಯಕ್ಕೆ ಸಂಯೋಜಿಯವಾಗಿರುವ ಶ್ರಿದೇವಿ ಶಿಕ್ಷಣ ಟ್ರಸ್ಟ್ ಸ್ಥಾಪಕರು. ಕ್ರೀಡೆ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುತ್ತಿದೆ. 

 *ಪಂಡಿತ್ ರಾಜಗುರು ಗುರುಸ್ವಾಮಿ ಕಲಿಕೇರಿ* 
 *ಸಾಹಿತ್ಯ ಮತ್ತು ಸಂಗೀತ ಕ್ಷೇತ್ರ* 

ಮೂಲತಃ ಬಿಜಾಪುರ ಜಿಲ್ಲೆಯ ಕಲಿಕೇರಿ ಗ್ರಾಮದವರು. ಗಾನಭಾರತಿ, ಭಾವ ಭಗವದ್ಗೀತೆ ಮತ್ತಿತರ ಕವನ ಸಂಕಲನಗಳು, ಚಿನ್ಮಯ, ಮೌನ ತಪಸ್ವಿ ಕಾದಂಬರಿ, 21ಷಟ್ಪದಿ ಕಾವ್ಯಗಳನ್ನು ಪ್ರಕಟಿಸಿದ್ದಾರೆ. 

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಇವರು ಸುಮಾರು ಆರು ಸಾವಿರಕ್ಕೂ‌ಅಧಿಕ ಗೀತಗಾಯನ  ಕಛೇರಿ ನಡೆಸಿಕೊಟ್ಟಿದ್ದಾರೆ. ಇವರ ಸಾಹಿತ್ಯ, ಮತ್ತು ಸಂಗೀತ ಕ್ಷೇತ್ರದ  ಸಾಧನೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುತ್ತಿದೆ. 

 *ಶ್ರೀ ಎಂ. ಚಂದ್ರಪ್ಪ* 
 *ಗ್ರಾಮೀಣಾಭಿವೃದ್ಧಿ ಕ್ಷೇತ್ರ* 

ಮೂಲತಃ ದಾವಣಗೆರೆ ಜಿಲ್ಲೆಯ ಇವರು, ರಾಜಕಾರಣಿ ಮತ್ತು ಹಲವು ಶಿಕ್ಷಣ ಸಂಸ್ಥೆಗಳ ಸ್ಥಾಪಕರು. ಚಿತ್ರದುರ್ಗ ಜಿಲ್ಲೆಯ ದೇವರಾಜ್ ಅರಸ್ ಶಿಕ್ಷಣ ಸಮೂಹದ ಸ್ಥಾಪಕರು, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಶಾಸಕಾಂಗ ಸಮಿತಿ ಮತ್ತು ಕರ್ನಾಟಕ‌ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಜನಪ್ರತಿನಿಧಿಯಾಗಿ ಗ್ರಾಮೀಣ ಭಾಗದಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಿರುತ್ತಾರೆ. ಇವರ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಕೆಲಸಗಳನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ಪದವಿ ನೀಡಲಾಗುತ್ತಿದೆ.

# # #
ಪಿಹೆಚ್.ಡಿ. ಪದವಿ ಪಡೆಯಲು 98 ಶುರುಷರು ಹಾಗೂ 
61 ಮಹಿಳೆಯರು ಸೇರಿ ಒಟ್ಟು 159 ಅಭ್ಯರ್ಥಿಗಳು 
ಅರ್ಹರಾಗಿರುತ್ತಾರೆ ಎಂದರು.

ಈ ಘಟಿಕೋತ್ಸವದಲ್ಲಿ 5499 ಪುರುಷರು ಹಾಗೂ 9251 ಮಹಿಳೆಯರು ಸೇರಿ ಒಟ್ಟು 14750 ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹರಾಗಿರುತ್ತಾರೆ ಎಂದರು.

ಸದರಿ ಘಟಿಕೋತ್ಸವದಲ್ಲಿ 141 ಸ್ವರ್ಣಪದಕಗಳು ಇದ್ದು, ಅವುಗಳನ್ನು 16 ಪುರುಷರು ಹಾಗೂ 58 ಮಹಿಳೆಯರು ಸೇರಿ ಒಟ್ಟು 74 ವಿದ್ಯಾರ್ಥಿಗಳು ನಗರ ಇವನ್ನು. 

 ವಿಸ್ಮಿತಾ ವಿ., ಎಂ.ಎ (ಕನ್ನಡ), 
ಕನ್ನಡ ಭಾರತಿ, ಜ್ಞಾನಸಹ್ಯಾದ್ರಿ, ಶಂಕರಘಟ್ಟ, 
ಕುವೆಂಪು ವಿಶ್ವವಿದ್ಯಾಲಯ ಇವರು ಅತಿ ಹೆಚ್ಚು 12 ಸ್ವರ್ಣ ಪದಕ ಹಾಗೂ 02 ನಗದು ಬಹುಮಾನಗಳನ್ನು ಪಡೆದಿರುತ್ತಾರೆ. 

 18 ನಗದು ಬಹುಮಾನಗಳು ಇದ್ದು, ಅವುಗಳನ್ನು 03 ಪುರುಷರು ಹಾಗೂ 13 ಮಹಿಳೆಯರು ಸೇರಿ ಒಟ್ಟು 16 ವಿದ್ಯಾರ್ಥಿಗಳು ಹಂಚಿಕೊಂಡಿರುತ್ತಾರೆ ಎಂದರು.

ಆಶಾ ಆರ್., ಎಂ.ಎ.(ಸಮಾಜಶಾಸ್ತ್ರ), ಸಮಾಜಶಾಸ್ತ್ರ ಅಧ್ಯಯನ ವಿಭಾಗ, ಜ್ಞಾನಸಹ್ಯಾದ್ರಿ, ಶಂಕರಘಟ್ಟ ,ನೇಹಾ ಆರ್., ಎಂ.ಬಿ.ಎ., ಪರಿಸರ ವಿಜ್ಞಾನ ಅಧ್ಯಯನ ವಿಭಾಗ, ಜ್ಞಾನಸಹ್ಯಾದಿ, ಶಂಕರಘಟ್ಟ, ರೋಹಿಣಿ ಯು., ಎಂ.ಎಸ್ಸಿ.(ಪರಿಸರ ವಿಜ್ಞಾನ), ವ್ಯವಹಾರ ನಿರ್ವಹಣಾ ಅಧ್ಯಯನ ವಿಭಾಗ, ಜ್ಞಾನಸಹ್ಯಾದ್ರಿ, ಶಂಕರಘಟ್ಟ,
ತೃಪ್ತಿ `ಎ., ಎಂ.ಎಸ್ಸಿ.(ಜೈವಿಕ ತಂತ್ರಜ್ಞಾನ), ಸಹ್ಯಾದ್ರಿ ವಿಜ್ಞಾನ ಕಾಲೇಜು, ಶಿವಮೊಗ್ಗ, ರಮ್ಯ ಎಸ್., ಬಿ.ಕಾಂ., 
ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು, ಶಿವಮೊಗ್ಗ ಇವರುಗಳು ತಲಾ 5 ಸ್ವರ್ಣ ಪದಕಗಳನ್ನು ಪಡೆದಿರುತ್ತಾರೆ ಎಂದರು.

 ಧನುಷ್ ಚೌಹಾಣ್, ಎಂ., ಎಂ.ಎಸ್ಸಿ. (ಗಣಿತಶಾಸ್ತ್ರ), ಗಣಿತಶಾಸ್ತ್ರ ಅಧ್ಯಯನ ವಿಭಾಗ, ಚಾನಸಹ್ಯಾದಿ, ಶಂಕರಘಟ್ಟ 

ತರನುಮ್ ಬಾನು, ಎಂ.ಎ.(ಉರ್ದು),
ಶ್ರೀನಿವಾಸ ವಿ. ಎನ್., ಎಂ.ಎ.(ಇತಿಹಾಸ ಮತ್ತು ಪಾಕ್ತನಶಾಸ) 
ಪ್ರಿಯಾಂಕ ಪಿ. ಎಂ., ಎಂ.ಎಸ್ಸಿ (ರಸಾಯನಶಾಸ್ತ್ರ)
ಬಿಂದು ದಿನೇಶ್ ನಾಯಕ್, ಎಂ.ಎಸ್ಸಿ.(ಸಸ್ಯಶಾಸ್ತ್ರ) ಇವರುಗಳು ತಲಾ 4 ಸ್ವರ್ಣ ಪದಕಗಳನ್ನು ಪಡೆದಿರುತ್ತಾರೆ.

ಗಜಲಾ ಹಫೀಜ್ ಎ., ಬಿ.ಇಡಿ., ಇವರು 3 ಸ್ವರ್ಣಪದಕ ಮತ್ತು 1 ನಗದುಬಹುಮಾನ ಪಡೆದಿರುತ್ತಾರೆ.

 ಸೌಮ್ಯ ಎಂ. ಪಿ., ಎಂ.ಎ.(ಇಂಗ್ಲೀಷ್) ,
ರಾಕೇಶ್‌ ಆರ್‌. ಸುಣಗಾರ, ಎಂ.ಎ.(ರಾಜ್ಯಶಾಸ್ತ್ರ) ,
ರಮೇಶ್ ರಾಜಪ್ಪ ಗುಡ್ಡದಮತಿಹಳ್ಳಿ,ಎಂ.ಕಾಂ.,  ಅಂಕಿತ ಹೆಚ್. ಸಿ. ಎಂ.ಎಸ್ಸಿ.(ಔದ್ಯೋಗಿಕ ರಸಾಯನಶಾಸ್ತ್ರ) ,
ಸಿಂಚನಾ ಕೆ. ಏ.. ಎಂ.ಎಸ್ಸಿ.(ಪ್ರಾಣಿಶಾಸ್ತ್ರ) ಇವರುಗಳು ತಲಾ 3 ಸ್ವರ್ಣ ಪದಕಗಳನ್ನು ಪಡೆದಿರುತ್ತಾರೆ ಎಂದರು.

 ಸುದ್ದಿಗೋಷ್ಟಿ ಸಂದರ್ಭದಲ್ಲಿ ಕುಲಸಚಿವರಾದ ಪ್ರೊ.ಗೀತಾ.ಸಿ,  ಪ್ರೊ. ನವೀನ್‌ಕುಮಾರ್‌ ಎಸ್. ಕೆ. ಕುಲಸಚಿವರು (ಮೌಲ್ಯಮಾಪನ),ಮತ್ತಿತರರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.