ಜುಲೈ 14 ರಂದು ಐಲೆಟ್ಸ್ ಆಸ್ಪತ್ರೆ ಯಲ್ಲಿ ಬಂಜೆತನ ತಪಾಸಣಾ ಶಿಬಿರ: ಐಲೆಟ್ಸ್ ಆಸ್ಪತ್ರೆ ಮುಖ್ಯಸ್ಥ ಡಾ.ಪ್ರೀತಮ್

ಶಿವಮೊಗ್ಗ: ಐಲೆಟ್ಸ್ ಡಯಾಬಿಟಿಸ್ ಆಸ್ಪತ್ರೆ ಗರ್ಭಗುಡಿ IVF ಸೆಂಟರ್ ಬೆಂಗಳೂರು ಮಣಿಪಾಲ್ ಆಸ್ಪತ್ರೆ ಬೆಂಗಳೂರು ಇವರ ಸಹಯೋಗದೊಂದಿಗೆ ಜುಲೈ 14 ರಂದು ಬಂಜೆತನ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ಐಲೆಟ್ಸ್ ಆಸ್ಪತ್ರೆ ಮುಖ್ಯಸ್ಥ ರಾದ ಡಾ.ಪ್ರೀತಮ್ ಹೇಳಿದರು.
ಇಂದು ಮಥುರಾ ಪ್ಯಾರಡಸ್ ಸಭಾಂಗಣದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.

ಭಾರತದ ಜನಸಂಖ್ಯೆ ಹೆಚ್ಚಾಗಿದ್ದರೂ ಇದೀಗ ನೂರು ವರ್ಷದ ನಂತರ ಜನಸಂಖ್ಯೆ ಚಕ್ರದಲ್ಲಿ ಏರುಪೇರು ಆಗುತ್ತಿದೆ.ಇದು ಪ್ರಕೃತಿಯ ಸಹಜ ಕ್ರಿಯೆ ಎಂದರು. 

ಜುಲೈ 14 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ತಪಾಸಣಾ ಶಿಬಿರ ನಡೆಯಲಿದೆ ಎಂದರು.ಬಂಜೆತನ ತಪಾಸಣೆ ನೊಂದಣಿ ಶುಲ್ಕ  ಹೆಚ್ಚಾಗಿದ್ದರೂ ಕೂಡ ಇದೀಗ ಕಡಿಮೆ ದರದಲ್ಲಿ ಕೇವಲ 2000/- ರೂಗೆ ಮಾಡಲಾಗುತ್ತಿದೆ. IVF ಚಿಕಿತ್ಸೆ ಸಂದರ್ಭದಲ್ಲಿ ಉಚಿತ ವಸತಿ ಸೌಲಭ್ಯ ನೀಡಲಾಗುತ್ತದೆ ಎಂದರು.

ಗರ್ಭಗುಡಿ IVF ಸೆಂಟರ್ ಬೆಂಗಳೂರಿನ ಸುಪ್ರಸಿದ್ಧ ಸಂತಾನೋತ್ಪತ್ತಿ ತಜ್ಞ ರಾದ ಡಾ.ಆಶಾ.ಎಸ್.ವಿಜಯ್ ಮತ್ತು ತಂಡದವರಿಂದ ವೈದ್ಯಕೀಯ ಸಲಹೆ,ಸಮಾಲೋಚನೆ, ವೀರ್ಯ ವಿಶ್ಲೇಷಣೆ ನಡೆಯಲಿದೆ ಎಂದರು.

ಬಂಜೆತನ ಎನ್ನುವುದು ಆಹಾರದ ಕ್ರಮ, ತಡವಾದ ಮದುವೆ, ಮದ್ಯ ವ್ಯಸನ ಹೀಗೆ ಹಲವು ಕಾರಣಗಳಿಂದ ಆಗುತ್ತಿದೆ. ರಾಜ್ಯದಲ್ಲಿಯೂಕೂಡ ಈ ಸಮಸ್ಯೆ ಹೆಚ್ಚಾಗಿರುವುದರಿಂದ ಐವಿಎಫ್‌ಸೆಂಟರ್‌ಗಳು ಹೆಚ್ಚಾಗುತ್ತಿವೆ ಎಂದರು.

ಶಿವಮೊಗ್ಗದಲ್ಲಿಯೂ ಇಂತಹ ಆಸ್ಪತ್ರೆಯ ಅವಶ್ಯಕತೆಯನ್ನು ಮನಗಂಡು ಈಗಾಗಲೇ ಹೆಸರು ಮಾಡಿರುವ ಗರ್ಭಗುಡಿ ಐವಿಎಫ್ ಸೆಂಟರ್‌ನ ಸಹಯೋಗದೊಂದಿಗೆ ನಾವು ಈ ತಪಾಸಣಾ ಶಿಬಿರ ಹಮ್ಮಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಇಲ್ಲಿಯೇ ಆಸ್ಪತ್ರೆ ತೆರೆಯಲು ಉದ್ದೇಶಿಸಲಾಗಿದೆ ಎಂದರು.

ಐವಿಎಫ್ ಸೆಂಟರ್‌ನ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಸಂಜಯ್ ಮಾತನಾಡಿ, ಜು.೧೪ರಂದು ನಡೆಯುವ ತಪಾಸಣಾ ಶಿಬಿರದಲ್ಲಿ ನೊಂದಣೀ ಶುಲ್ಕವನ್ನು ನಾಲ್ಕು ಸಾವಿರದಿಂದ ಎರಡು ಸಾವಿರಕ್ಕೆ ಇಳಿಸಲಾಗಿದೆ ಎಂದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.