ಶಾಸಕ ಬೇಳೂರುರವರಿಂದ DHOಗೆ ಫುಲ್ ಕ್ಲಾಸ್
ಶಿವಮೊಗ್ಗ: ನಗರದಲ್ಲಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆದ ಅಧಿಕಾರಿಗಳ ಅನೌಪಚಾರಿಕ ಪ್ರಗತಿ ಪರಿಶೀಲನೆ ಸಭೆಯಲ್ಲಿ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಸಾಗರದಲ್ಲಿ 8 ಡಯಾಲಿಸಸ್ ಘಟಕ ಕೆಟ್ಟು ಹೋಗಿರುವ ಬಗ್ಗೆ ಬಡ ಡಯಾಲಿಸಿಸ್ ರೋಗಿಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ DHO ರವರಿಗೆ ಫುಲ್ ಕ್ಲಾಸ್ ತೆಗೆದುಕೊಂಡರು.
ಕೂಡಲೇ ಸರಿಪಡಿಸಲು ಸೂಚಿಸಿದರು. ಇಲ್ಲದಿದ್ದರೆ ಹೊಸ ಡಯಾಲಿಸಿಸ್ ಮೆಷಿನ್ ಖರೀದಿ ಮಾಡಿ, ಹಣ ಇದ್ದರೂ ಯಾಕೆ ಸರಿಪಡಿಸಿಲ್ಲ,ರೋಗಿಗಳಿಗೆ ತೊಂದರೆ ಆಗದಂತೆ ಎಚ್ಚರ ವಹಿಸಬೇಕು ಎಂದು DHO ಗೆ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮತ್ತು ಸಚಿವ ಮಧುಬಂಗಾರಪ್ಪ ,ಜಿಲ್ಲಾ ಪಂಚಾಯತ್ ಸಿಇಒ, ಗ್ರಾಮಾಂತರ ಶಾಸಕಿ ಶಾರದಪೂರ್ಯನಾಯ್ಕ, ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು
Leave a Comment