ನಾವೆಲ್ಲರೂ ಕಾಡನ್ನು ಸಂರಕ್ಷಿಸಿ-ಪರಿಸರ ಉಳಿಸಿ ಬೆಳೆಸಬೇಕು:ಶಿವಮೊಗ್ಗದ ಅಡಿಷನಲ್ ಎಸ್.ಪಿ. ಅನಿಲ್ ಕುಮಾರ್ ಭೂಮರೆಡ್ಡಿ ಕರೆ

ಶಿವಮೊಗ್ಗ: ನಾವೆಲ್ಲರೂ ಕಾಡನ್ನು ಸಂರಕ್ಷಿಸಿ ಪರಿಸರ ಉಳಿಸಿ ಬೆಳೆಸಬೇಕು, ಈಗಾಗಲೇ ಕಾಡನ್ನು ನಾಶಮಾಡಲಾಗಿದೆ.ನಾವು ಎಚ್ಚೆತ್ತುಕೊಳ್ಳದಿದ್ದರೇ ಭಾರಿ ಪರಿಣಾಮ ಎದುರಿಸಬೇಕಾಗುತ್ತದೆ. ಈಗಾಗಲೇ ಜಗತ್ತಿನಲ್ಲಿ ತಾಪಮಾನ ಜಾಸ್ತಿಯಾಗಿದೆ.ನಿಸರ್ಗನೇ ಮಾಲಿಕ ನಾವೆಲ್ಲರೂ ಬಾಡಿಗೆದಾರರು.ಮುಂದಿನ ಪೀಳಿಗೆಗಾಗಿ ಪರಿಸರ ಉಳಿಸಿ ಮರಗಿಡ ಬೆಳೆಸಬೇಕು.ನಗರವನ್ನು ಪ್ಲಾಸ್ಟಿಕ್ ಮುಕ್ತ ಮಾಡಬೇಕು ಪರಿಸರದ ಬಗ್ಗೆ ಜಾಗೃತಿಯನ್ನು ಸಾರ್ವಜನಿಕವಾಗಿ ಮೂಡಿಸಬೇಕಾಗಿದೆ ಎಂದು ಶಿವಮೊಗ್ಗದ ಅಡಿಷನಲ್ ಎಸ್.ಪಿ. ಅನಿಲ್ ಕುಮಾರ್ ಭೂಮರೆಡ್ಡಿ ಹೇಳಿದರು.ಅವರು ಇಂದು ಬೆಳಿಗ್ಗೆ ಶಿವಮೊಗ್ಗ ನಗರದ ಸರ್ಜಿ ಆಸ್ಪತ್ರೆ ಪಕ್ಕದಲ್ಲಿರುವ AGP City Gas ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಆವರಣದಲ್ಲಿ ಆಯೋಜಿಸಿದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ದಲ್ಲಿ  ಪಾಲ್ಗೊಂಡು ಸಾರ್ವಜನಿಕರಿಗೆ ಗಿಡಗಳನ್ನು ವಿತರಣೆ ಮಾಡಿ ಮಾತನಾಡಿದರು.ನಾನು ಈ ಹಿಂದೇ ಶಿವಮೊಗ್ಗದಲ್ಲಿ ಹೊಸನಗರ, ತೀರ್ಥಹಳ್ಳಿ ತಾಲ್ಲೂಕಿನ ಸುತ್ತಲೂ ಕೆಲಸ ನಿರ್ವಹಿಸುವ ಸಮಯದಲ್ಲಿ ಸಾಕಷ್ಟು ಕಾಡು ಮತ್ತು ಮರಗಿಡಗಳು ಇತ್ತು,ಇದೀಗ ಕ್ಷೀಣಿಸಿದೆ.ಶೆಟ್ಟಿಹಳ್ಳಿ ಅಭಯಾರಣ್ಯ ಕೂಡ ಸಹ ನಾಶವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ನಾವು ಜಗತ್ತನ್ನು ವಿನಾಶಕ್ಕೆ ಕೊಂಡುಯ್ಯುತ್ತಿದ್ದೆವೆ.ನಾವು ಒಂದು ದಿನ ಪರಿಸರ ದಿನಾಚರಣೆ ಮಾಡಿ, ಗಿಡಗಳನ್ನು ವಿತರಣೆ ಮಾಡಿ ಭಾಷಣ ಮಾಡಿದರೇ ಸಾಕಾಗುವುದಿಲ್ಲ. ಜಾಗೃತಿ ಮೂಡಿಸಬೇಕು.ಕಾಡುಪ್ರಾಣಿಗಳಿಗೂ ಜೀವಿಸುವ ಹಕ್ಕು ಇದೆ. ಅವುಗಳು ಉಳಿಯಬೇಕಾದರೇ ಕಾಡನ್ನು ಪರಿಸರವನ್ನು ಸಂರಕ್ಷಣೆ ಮಾಡುವುದು ಎಲ್ಲರ ಕರ್ತವ್ಯ AGP City Gas ಕಂಪನಿಯವರು ಪರಿಸರದ ಬಗ್ಗೆ ಜಾಗೃತಿಯನ್ನು ಮೂಡಿಸಲು ಈ ರೀತಿಯ ಕಾರ್ಯಕ್ರಮ ಆಯೋಜಿಸಿರುವುದು ಒಳ್ಳೆಯ ಕಾರ್ಯಕ್ರಮ ಎಂದು ಶುಭ ಹಾರೈಸಿದರು.ಕಾರ್ಯಕ್ರಮಕ್ಕೆ ಮುನ್ನ AGP City Gas ಕಂಪನಿಯ ಸಿಬ್ಬಂದಿ ಮತ್ತು ಆಡಳಿತವರ್ಗದವರು ಮುಖ್ಯವಾದ ರಸ್ತೆಯಲ್ಲಿ ಪರಿಸರದ ಬಗ್ಗೆ ಜಾಗೃತಿಯನ್ನು ಮೂಡಿಸಲು ಜಾಗೃತಿ ನಡಿಗೆ ಜಾಥಾ ಮಾಡಿದರು.ಈ ಸಂದರ್ಭದಲ್ಲಿ AGP City Gas ಕಂಪನಿಯ ರೀಜನಲ್ ಮುಖ್ಯಸ್ಥ ರಾದ ಗೌತಮ್ ಆನಂದ್, ಜಯನಗರ ಠಾಣೆಯ ಇನ್ಸ್ ಪೆಕ್ಟರ್ ಮಾದಪ್ಪ ಮತ್ತು ವಿಶೇಷ ಪೊಲೀಸ್ ಅಧಿಕಾರಿ ಕೆ.ಈ.ಮಂಜಪ್ಪ ಮತ್ತಿತರರು ಹಾಜರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.