ಶಿವಮೊಗ್ಗ:ಸುಗಮ ಸಂಚಾರ ದೃಷ್ಟಿಯಿಂದ ನಾಲ್ಕು ಗಸ್ತು ದ್ವಿ ಚಕ್ರ ವಾಹನಗಳಿಗೆ ಚಾಲನೆ*

ಶಿವಮೊಗ್ಗ ನಗರದಲ್ಲಿ *ಸಾರ್ವಜನಿಕ ಮತ್ತು ಸುಗಮ ಸಂಚಾರದ ಹಿತದೃಷ್ಠಿಯಿಂದ*  ಈ ದಿನ ದಿನಾಂಕಃ 07-06-2023 ರಂದು *ಶ್ರೀ ಮಿಥುನ್ ಕುಮಾರ್ ಜಿ.ಕೆ ಐಪಿಎಸ್* ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಮತ್ತು *ಶ್ರೀ ಅನಿಲ್ ಕುಮಾರ್ ಭೂಮರಡ್ಡಿ,*  ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆರವರು *04 ಭದ್ರಾ ಸಂಚಾರ ಗಸ್ತು ದ್ವಿ ಚಕ್ರ ವಾಹನಗಳಿಗೆ ಚಾಲನೆ* ನೀಡಿದರು. ಈ ಸಂದರ್ಭದಲ್ಲಿ *ಶ್ರೀಮತಿ ಜಯಶ್ರೀ ಮಾನೆ,* ಪೊಲೀಸ್ ವೃತ್ತ ನಿರೀಕ್ಷಕರು, ಸಂಚಾರ ವೃತ್ತ, ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯ ಪಿಎಸ್ಐ ರವರಾದ *ಶ್ರೀಮತಿ ಶೈಲಜಾ ಮತ್ತು ದೊಡ್ಡಮನಿ* ಹಾಗೂ ಪೊಲೀಸ್ ಅಧಿಕಾರಿ ಸಿಬ್ಬಂಧಿಗಳು ಉಪಸ್ಥಿತರಿದ್ದರು. ಸದರಿ ಸಂಚಾರ ಗಸ್ತು ವಾಹನಗಳು *ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಪಿಎಎಸ್ (ಪಬ್ಲಿಕ್ ಅಡ್ರೆಸ್ ಸಿಸ್ಟಮ್), ಸೈರನ್, ಲೈಟಿಂಗ್ಸ್, ವಾಕಿ-ಟಾಕಿ* ಮತ್ತು ಇತರೆ ಉಪಕರಣಗಳನ್ನು ಹೊಂದಿದ್ದು, ಸದರಿ ವಾಹನಗಳಿಗೆ ಕರ್ತವ್ಯಕ್ಕೆ ನೇಮಿಸಲಾದ ಸಿಬ್ಬಂಧಿಗಳಿಗೆ *ಪ್ರಥಮ ಚಿಕಿತ್ಸೆ ಮತ್ತು ಉಪಕರಣಗಳ ಬಳಕೆಯ ಕುರಿತಂತೆ ತರಬೇತಿಯನ್ನು* ನೀಡಲಾಗಿರುತ್ತದೆ. 

 ಭದ್ರಾ ಸಂಚಾರ ಗಸ್ತು ವಾಹನಗಳು ಬೆಳಗ್ಗೆ 08:00 ರಿಂದ ರಾತ್ರಿ 09:00 ಗಂಟೆಯ ವರೆಗೆ ಗಸ್ತು ಮಾಡಲಿದ್ದು,   ಅಫಘಾತ ನಡೆದ ಸ್ಥಳಕ್ಕೆ ತಕ್ಷಣ ಹೋಗಿ *ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆಯನ್ನು ನೀಡಿ, ಕೂಡಲೇ ಆಸ್ಪತ್ರೆಗೆ ಸ್ಥಳಾಂತರಿಸುವ* ಬಗ್ಗೆ ಕ್ರಮ ಕೈಗೊಳ್ಳುವುದು, ಸಂಚಾರ ದಟ್ಟಣೆ ಸಂದರ್ಭದಲ್ಲಿ ಕೂಡಲೇ ಸ್ಥಳಕ್ಕೆ ಹೋಗಿ *ಸುಗಮ ಸಂಚಾರಕ್ಕೆ ಅನುವು* ಮಾಡಿಕೊಡುವುದು, *ವಾಹನ ನಿಲುಗಡೆ ನಿಷೇಧ* ಪ್ರದೇಶಗಳಲ್ಲಿ ನಿಲ್ಲಿಸಿರುವ ವಾಹನಗಳನ್ನು ತೆರವುಗೊಳಿಸುವುದು, ಶಾಲಾ ಕಾಲೇಜು ಮತ್ತು ಶೈಕ್ಷಣಿಕ ಸಂಸ್ಥೆಗಳಿರುವ ಪ್ರದೇಶಗಳಲ್ಲಿ ಗಸ್ತು ಮಾಡಿ *ಸುಗಮ ಸಂಚಾರ ವ್ಯವಸ್ಥೆಗೆ* ಅನುವು ಮಾಡಿಕೊಡುವುದು ಗಸ್ತು ವಾಹನಗಳ ಕರ್ತವ್ಯಕ್ಕೆ ನೇಮಕವಾದ ಸಿಬ್ಬಂಧಿಗಳ ಪ್ರಮುಖ  ಕರ್ತವ್ಯವಾಗಿರುತ್ತದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.