ಮೊಬೈಲ್ ಕದ್ದು ಪರಾರಿಯಾಗುತ್ತಿದ್ದ ಮೂವರು ಬಾಲಕರ ಬಂಧನ:23 ಮೊಬೈಲ್ ವಶಕ್ಕೆ

ಶಿವಮೊಗ್ಗ:   ದಿನಾಂಕಃ 17-05-2023 ರಂದು ರಾತ್ರಿ ಶಿವಮೊಗ್ಗ *ಸ್ವಾಮಿವಿವೇಕಾನಂದ ಬಡಾವಣೆಯ ವಾಸಿ* 29 ವರ್ಷದ ವ್ಯಕ್ತಿಯೊಬ್ಬರು ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ *ಗೋಪಾಳ ಗೌಡ ಬಡಾವಣೆಯ ಚಂದನ ಪಾರ್ಕ್ ನ ಬಳಿ* ನಡೆದುಕೊಂಡು ಹೋಗುತ್ತಿದ್ದಾಗ ಒಂದೇ ಬೈಕಿನಲ್ಲಿ ಬಂದ *ಯಾರೋ 3 ಜನರು  ಆ ವ್ಯಕ್ತಿಯ ಬಳಿ ಇದ್ದ ಮೊಬೈಲ್ ಫೋನ್ ಅನ್ನು ಕಿತ್ತುಕೊಂಡು* ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 219/2023 ಕಲಂ 392 ಐಪಿಸಿ ರೀತ್ಯಾ *ಸುಲಿಗೆ ಪ್ರಕರಣವನ್ನು* ದಾಖಲಿಸಿಕೊಳ್ಳಲಾಗಿರುತ್ತದೆ.  ಪ್ರಕರಣದ ಆರೋಪಿತರ ಪತ್ತೆ ಬಗ್ಗೆ *ಶ್ರೀ ಮಿಥುನ್ ಕುಮಾರ್ ಜಿ.ಕೆ, ಐಪಿಎಸ್,* ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ  ಜಿಲ್ಲೆ ಮತ್ತು  *ಶ್ರೀ ಅನಿಲ್ ಕುಮಾರ್ ಭೂಮರಡ್ಡಿ,* ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ, *ಶ್ರೀ ಬಾಲರಾಜ್,* ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ ಎ ಉಪ ವಿಭಾಗ ರವರ ಮುಂದಾಳತ್ವದಲ್ಲಿ, *ಶ್ರೀ ಮಂಜುನಾಥ್ ಪಿ.ಐ* ತುಂಗಾನಗರ ಪೊಲೀಸ್ ಠಾಣೆ ರವರ ನೇತೃತ್ವದ, *ಶ್ರೀ ರಾಜುರೆಡ್ಡಿ ಬಿ, ಪಿಎಸ್ಐ,  ಶ್ರೀ ಕುಮಾರ್ ಕುರಗುಂದ, ಪಿಎಸ್ಐ,  ಶ್ರೀ ಮನೋಹರ್ ಎ.ಎಸ್.ಐ* ಹಾಗೂ ಸಿಬ್ಬಂದಿಯವರಾದ ಹೆಚ್ಸಿ ಕಿರಣ್ ಮೋರೆ, ಅರುಣ್ ಕುಮಾರ, ಮೋಹನ್ ಕುಮಾರ್, ಸಿಪಿಸಿ ನಾಗಪ್ಪ ಅಡಿವೆಪ್ಪನವರ್, ಹರೀಶ್ ನಾಯ್ಕ, ಲಂಕೇಶ್ ಕುಮಾರ್, ಕಾಂತರಾಜ್, ಅರಿಹಂತ ಶಿರಹಟ್ಟಿ, ಹರೀಶ್ ರವರುಗಳನ್ನೋಳಗೊಂಡ *ತನಿಖಾ ತಂಡವನ್ನು ರಚಿಸಲಾಗಿರುತ್ತದೆ.* 

        ಸದರಿ ತನಿಖಾ ತಂಡವು ದಿನಾಂಕಃ 02-06-2023 ರಂದು ಪ್ರಕರಣಕ್ಕೆ ಸಂಬಂಧಿಸಿದಂತೆ *03 ಜನ ಕಾನೂನು ಸಂಘರ್ಷಕ್ಕೊಳಗಾದ ಬಾಲಕರನ್ನು* ವಶಕ್ಕೆ ಪಡೆದು, ಅವರುಗಳಿಂದ ತುಂಗಾನಗರ ಪೊಲೀಸ್ ಠಾಣೆಯ 01, ದೊಡ್ಡಪೇಟೆ ಪೊಲೀಸ್ ಠಾಣೆಯ 01 ಮತ್ತು ವಿನೋಬನಗರ ಪೊಲೀಸ್ ಠಾಣೆಯ 01 ಪ್ರಕರಣ ಸೇರಿದಂತೆ *ಒಟ್ಟು 03 ಸುಲಿಗೆ ಪ್ರಕರಣಗಳಿಗೆ* ಸಂಬಂಧಿಸಿದ ಅಂದಾಜು ಮೌಲ್ಯ *3,25,000/- ರೂಗಳ ಒಟ್ಟು 23 ವಿವಿಧ ಕಂಪನಿಯ ಮೊಬೈಲ್ ಫೋನ್ ಗಳೂ ಮತ್ತು ಕೃತ್ಯಕ್ಕೆ ಬಳಸಿದ ದ್ವಿ ಚಕ್ರ ವಾಹನವನ್ನು* ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ. 

       ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು *ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆರವರು* ಅಭಿನಂದಿಸಿ ಪ್ರಶಂಸಿಸಿರುತ್ತಾರೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.