ಜುಲೈ 19 ರಂದು,ರೈತ ಸಂಘದ ಸಂಸ್ಥಾಪಕ ಹೆಚ್.ಎಸ್.ರುದ್ರಪ್ಪರವರ ನೆನಪಿನ‌ ಕಾರ್ಯಕ್ರಮ

ಶಿವಮೊಗ್ಗ;ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ  ಕರ್ನಾಟಕ ರಾಜ್ಯ ರೈತ ಸಂಘವನ್ನು ಸ್ಥಾಪಿಸಿದ ಹೆಚ್.ಎಸ್.ರುದ್ರಪ್ಪರವರ ಸವಿ ನೆನಪಿನ‌ ಕಾರ್ಯಕ್ರಮ ವನ್ನ ಜುಲೈ 19 ರಂದು ಶಿವಮೊಗ್ಗದ ಬೈಪಾಸ್ ಮತ್ತು ಮತ್ತೂರು ರಸ್ತೆಯ ಮದ್ಯೆ ತೋಟದಲ್ಲಿರುವ ಸಮಾಧಿ ಮುಂದೆ ರಾಜ್ಯದ ಎಲ್ಲಾ ಜಿಲ್ಲೆಯ  ರೈತರೊಂಧಿಗೆ ಮತ್ತು ಅವರ ಕುಟುಂಬದ ವರೋಂಧಿಗೆ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ ಎಂದು ರಾಜ್ಯ ಕಾರ್ಯಾದ್ಯಕ್ಷರಾದ ಎನ್.ಕೆ.ಮಂಜುನಾಥಗೌಡ  ಹೇಳಿದರು.

ಅವರು ಇಂದು ಪ್ರೆಸ್‌ ಟ್ರಸ್ಟ್ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.

ಹೆಚ್.ಎಸ್.ರುದ್ರಪ್ಪರವರು 11 ವರ್ಷಗಳ ಕಾಲ ರೈತ ಸಂಘವನ್ನು ಮುನ್ನೆಡೆಸಿ 1991 ರಲ್ಲಿ ಅಗಲಿದ್ದಾರೆ.70 ಮತ್ತು‌80 ರ ದಶಕದಲ್ಲಿ  ರಾಜ್ಯದ ರೈತರಿಗೆ ಆಗುತ್ತಿದ್ದ ಅನ್ಯಾಯದ ವಿರುದ್ದ, ಸರ್ಕಾರದ ವಿರುದ್ದವೇ ಹೋರಾಟ ಮಾಡುತ್ತಿದ್ದರು. ಹೆಚ್.ಎಸ್.ರುದ್ರಪ್ಪ ರವರ ಕಾರ್ಯಗಳನ್ನು ನೆನಪಿಸುವ ಸಲುವಾಗಿ ರಾಜ್ಯಸಮಿತಿಯಲ್ಲಿ ಚರ್ಚಿಸಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಹಲವಾರು ಗಣ್ಯರು ಮತ್ತು ರೈತ ಮುಖಂಡರು ಆಗಮಿಸಲಿದ್ದಾರೆ. ಎಲ್ಲಾ ರೈತ ಭಾಂದವರು ಆಗಮಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿ ಕೊಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾದ್ಯಕ್ಷರಾದ ಸೈಯ್ಯದ್ ಶಫೀಉಲ್ಲಾ, ಜಿಲ್ಲಾ ಕಾರ್ಯದರ್ಶಿ ಸತೀಶ್ ಹೆಚ್.ಪಿ,ವಸಂತ್ ಕುಮಾರ್ ಮತ್ತಿತರರು ಹಾಜರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.