ಗಾಂಜಾ ಮಾರಾಟ ಮಾಡುತ್ತಿದ್ದ 03 ಜನ ಆರೋಪಿಗಳ ಬಂಧನ :ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಮಾಹಿತಿ

 ಶಿವಮೊಗ್ಗ: ದಿನಾಂಕಃ 23-06-2023 ರಂದು ಸಂಜೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಾಪ್ತಿಯ ಸುಬ್ಬಯ್ಯ ಕಾಲೇಜ್ ಹತ್ತಿರದ ಶಿವಗಂಗಾ ಲೇಔಟ್ ನ ವಾಸದ ಮನೆಯೊಂದರಲ್ಲಿ ಅಕ್ರಮವಾಗಿ ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಶ್ರೀ ಮಿಥುನ್ ಕುಮಾರ್ ಜಿ. ಕೆ. ಐಪಿಎಸ್, ಮಾನ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲೆ, ಮತ್ತು ಶ್ರೀ ಅನಿಲ್ ಕುಮಾರ್ ಭುಮರಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ ಶ್ರೀ ಸುರೇಶ್ ಎಂ. ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ- ಬಿ ಉಪ ವಿಭಾಗ ರವರ ಮೇಲ್ವಿಚಾರಣೆಯಲ್ಲಿ, ಶ್ರೀ ಅಭಯ್ ಪ್ರಕಾಶ್ ಸೋಮನಾಳ್, ಪೊಲೀಸ್ ನಿರೀಕ್ಷಕರು ಮತ್ತು ಶ್ರೀ ರಮೇಶ್ ಟಿ, ಪೊಲೀಸ್ ಉಪ ನಿರೀಕ್ಷಕರು, ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ರವರ ನೇತೃತ್ವದ ಸಿಬ್ಬಂಧಿಗಳನ್ನೊಳಗೊಂಡ ತಂಡವು ಸ್ಥಳಕ್ಕೆ ಹೋಗಿ ದಾಳಿ ನಡೆಸಿ, ಸ್ಥಳದಲ್ಲಿದ್ದ 1) ವಿಘ್ನರಾಜ್, 28 ವರ್ಷ, ಜಕ್ಕಪ್ಪ ನಗರ, ಕೃಷ್ಣಗಿರಿ ತಮಿಳುನಾಡು ರಾಜ್ಯ ಹಾಲಿ ವಾಸ ಭದ್ರಗಿರಿ ನಿಲಯ ಶಿವಗಂಗಾ ಲೇಔಟ್, ಪುರಲೆ ಶಿವಮೊಗ್ಗ 2) ವಿನೋದ್ ಕುಮಾರ್, 27 ವರ್ಷ, ಅಡಿಮಲಿ ಟೌನ್, ಇಡುಕ್ಕಿ ಜಿಲ್ಮ ಕೇರಳ ರಾಜ್ಯ ಹಾಲಿ ವಾಸ ಪುರಲೆ ಗ್ರಾಮ, ಶಿವಮೊಗ ಮತ್ತು 3) ಪಾಂಡಿಯೂರ, 27 ವರ್ಷ, ಕಡಗತ್ತೂರು ಧರ್ಮಪುರಿ ಜಿಲ್ಲೆ ತಮಿಳುನಾಡು ರಾಜ್ಯ ಹಾಲಿ ವಾಸ ಪುರಲೆ ಗ್ರಾಮ ಶಿವಮೊಗ್ಗರವರುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಹೇಳಿದರು.

ಶನಿವಾರದಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು,ಬಂಧಿತ ಆರೋಪಿಗಳನ್ನವಿಚಾರಣೆ ಮಾಡಲಾಗಿ, ವಿಘ್ನರಾಜ್ ಈತನು ತನ್ನ ವಾಸ ಮನೆಯಲ್ಲಿ, ಪಾಟ್ ಗಳಲ್ಲಿ ಹಸಿ ಗಾಂಜಾಗಿಡಗಳನ್ನು ಬೆಳೆದು ಒಣಗಿಸಿ ಸಣ್ಣ-ಸಣ, ಪ್ಯಾಕೇಟ್ ಗಳಲ್ಲಿ ತುಂಬಿ ಮಾರಾಟ ಮಾಡುತ್ತಿದ್ದು ವಿನೋದ್ ಹಾಗೂ ಪಾಂಡಿದೊರೆ ರವರು ಈತನಿಂದ ಗಾಂಜಾವನ್ನು ಖರೀದಿಸಲು ಬಂದಿರುವುದು ಕಂಡು 
ಬಂದಿರುತ್ತದೆ ಎಂದರು

ನಂತರ ಆರೋಪಿತರಿಂದ 227 ಗ್ರಾಂ ಒಣ ಗಾಂಜಾ ಅಂದಾಜು ಮೌಲ: 5800/- ರೂ 1 ಕೆ.ಜಿ 530 ಗ್ರಾಂ ತೂಕದ ಹಸಿ ಗಾಂಜಾ, ಅಂದಾಜು ಮೌಲ: 30,000/- ರೂ, 10 ಗ್ರಾಂ ಚರಸ್ ಅಂದಾಜು ಮೌಲ 6,000/- ರ ಗಾಂಜಾ ಬೀಜಗಳಿದ್ದ 01 ಚಿಕ್ಕ ಬಾಟಲ್, 03 ಕೆನಾಬಿಸ್ ಆಯಿಲ್ ಸೀರಿಂಜ್ ರೀತಿಯ ವಸ್ತುಗಳು, 03 ಕಬ್ಬಿಣದ ರಾಡುಗಳ ಮೇಲೆ ಕಪ್ಪು ಬಣ್ಣದ ಕವರ್ ಸುತ್ತಿದ ಸಾಂಡ್ ಗಳು, ಗಾಂಜಾ ಪುಡಿ ಮಾಡಲು ಬಳಸುವ 2 ಡಬ್ಬಿಗಳು, 01 ಎಲೆಕ್ಟ್ರಾನಿಕ್ ತೂಕದ ಯಂತ್ರ, 1 EXIT ಫ್ರಾನ್, 6 ಟೇಬಲ್ ಫಾನ್ ಗಳು, 2 ಸೈಬಸರ್ ಗಳು, 3 LED ಲೈಟ್, ರೋಲಿಂಗ್ ಪೇಪರ್, 2 ಹುಕಾ ಕೊಳವೆ ಮತ್ತು 4 ಹುಕಾ ಕಾಪ್‌ಗಳು, ಗಾಂಜಾ ಗಿಡದ ಕಾಂಡಗಳು, ಮತ್ತು ನಗದು ಹಣ 19,000/-ರೂ ಹಾಗೂ ಇತರೆ ವಸ್ತುಗಳನ್ನು ಅಮಾನತ್ತು ಪಡಿಸಿಕೊಂಡು, ಆರೋಪಿತರನ್ನು ದಸ್ತಗಿರಿ ಮಾಡಿ, ಗುನೆ ಸಂಖ್ಯೆ: 0195/2023 ಕಲಂ NDPS ಕಾಯ್ದೆ ರೀತಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ ಎಂದರು.

ಸದರಿ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.