ಶಿವಮೊಗ್ಗದ ಅಭಿವೃದ್ಧಿ, ಶಾಂತಿ ಬಾಳ್ವೆಗಾಗಿ ಜೆಡಿಎಸ್ ಪಕ್ಷದ ಅಭ್ಯರ್ಥಿಗೆ ಮತನೀಡಿ:ಆಯನೂರು ಮಂಜುನಾಥ್ ಮನವಿ

ಶಿವಮೊಗ್ಗ:ಶಿವಮೊಗ್ಗದ ಅಭಿವೃದ್ಧಿ, ಶಾಂತಿ ಬಾಳ್ವೆಗಾಗಿ ಜೆಡಿಎಸ್ ಪಕ್ಷದ ಅಭ್ಯರ್ಥಿಗೆ ಮತನೀಡಿ ಬೆಂಬಲಿಸಿ ಎಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಯನೂರು ಮಂಜುನಾಥ್ ಮತದಾರರಲ್ಲಿ ಮನವಿ ಮಾಡಿಕೊಂಡರು.

ಇಂದು ಬೆಳಿಗ್ಗೆ  ಸುದ್ದಿ ಗೋಷ್ಟಿ ನಡೆಸಿ ಮಾತನಾಡಿದರು.

 ಜಿಲ್ಲೆಯಲ್ಲಿ ಮತ್ತು ರಾಜ್ಯದಲ್ಲಿ ಇಂದು ಸಂಜೆ ವಿಧಾನಸಭಾ ಚುನಾವಣಾ ಪ್ರಚಾರದ ಕಾರ್ಯ ಅಂತ್ಯವಾಗುತ್ತದೆ. ಎಲ್ಲಾ ವಾರ್ಡ್ ಮತದಾರರನ್ನು ಸಂಪರ್ಕಿಸಿ ಮತ ಕೇಳಲಾಗುತ್ತಿದೆ.ನಾವು ಗೆಲ್ತೇವೆ ಎಂಬ ಉತ್ಸಾಹದಿಂದ ನಮ್ಮ ಜೆಡಿಎಸ್ ಪಕ್ಷದ ಕಾರ್ಯಕರ್ತರು ಮುಖಂಡರು ಕೆಲಸ ಮಾಡುತ್ತಿದ್ದಾರೆ ಎಂದರು.

ಬೇರೆ ಬೇರೆ ಪಕ್ಷಗಳು ಜಾತಿವಾರು ಮತ ಕೇಳುತ್ತಿದ್ದಾರೆ. ಜಾತಿ ಧರ್ಮದ ಹೆಸರಿನಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ಮತಯಾಚನೆ ಮಾಡುತ್ತಿದ್ದಾರೆ ಎಂದರು.

ಅಲ್ಪಸಂಖ್ಯಾತ ಸಮುದಾಯ ಮತ್ತು ಮುಖಂಡರು ನಮಗೆ ಬೆಂಬಲಿಸುತ್ತಿದ್ದಾರೆ. ತಮಿಳು ಸಮುದಾಯ, ಇತರೇ ಎಲ್ಲಾ ಜಾತಿಯ ಸಮುದಾಯದ ಮುಖಂಡರು ನಮ್ಮ ಜೊತೆಯಲ್ಲಿ ಇದ್ದಾರೆ ಎಂದರು.

 ಜೆಡಿ ಎಸ್ ಪಕ್ಷದ ಮುಖಂಡ ಮತ್ತು ಶಿವಮೊಗ್ಗ ಮಾಜಿ ಶಾಸಕ  ಕೆ.ಬಿ.ಪ್ರಸನ್ನಕುಮಾರ್ ಮಾತನಾಡಿ,ಗೆಲುವಿನ ಕಡೆ ಶಿವಮೊಗ್ಗ ನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜಣ್ಣ ಸಾಗುತ್ತಿದ್ದಾರೆ. ಮತದಾರರ ಉತ್ಸಾಹ ಕಂಡು ಬರುತ್ತಿದೆ. ಆಯನೂರು ಮಂಜುನಾಥ್ ಅವರ ಹೆಸರೇ ಒಂದು ಶಕ್ತಿ. ಕಾರ್ಮಿಕರು ಮತ್ತು ಬಡವರು ಇವರ ಬೆಂಬಲಕ್ಕೆ ನಿಂತಿದ್ದಾರೆ ಎಂದರು.

ಮತದಾನ ದಿವಸ ಹತ್ತಿರ ಬರುತ್ತಿದ್ದಂತೆ  ಹಣ,ಹೆಂಡ  ಹಂಚುವ ಕೆಲಸವನ್ನ ಎರಡು ರಾಷ್ಟ್ರೀಯ ಪಕ್ಷಗಳು ಮಾಡುತ್ತಾ ಇವೆ. ಪೊಲೀಸ್ ಇಲಾಖೆ, ಮತ್ತು ಚುನಾವಣಾ ಆಯೋಗ ಗಮನಿಸಬೇಕು. ಕಣ್ಣು ಕಾಣಿಸುತ್ತಿಲ್ಲವೇ ಎಂದು ಪ್ರಶ್ನಿಸಿದರು.

2013 ರ ನನ್ನ ಗೆಲುವಿಗೆ ಕಾರಣ ಮುಕ್ತಿಯಾರ್ ಅಹಮದ್ ಒಬ್ಬರು ಕಾರಣಕರ್ತರಾಗಿದ್ದರು. ಇದೀಗ ಅವರು ಜೆಡಿಎಸ್ ಪಕ್ಷವನ್ನು ಸೇರಿರುವುದು ನಮಗೆ ಶಕ್ತಿಯನ್ನು  ತಂದಿದೆ ಎಂದರು.

   ಜೆಡಿಎಸ್ ಪಕ್ಷದ  ಜಿಲ್ಲಾದ್ಯಕ್ಷ ಮತ್ತು ರಾಜ್ಯ ಪ್ರದಾನ ಕಾರ್ಯದರ್ಶಿ ಎಂ. ಶ್ರೀಕಾಂತ್ ಮಾತನಾಡಿ
ಎಲ್ಲಾ ಸಮುದಾಯದವರು ಮಂಜಣ್ಣ ರವರ ಪರವಾಗಿದ್ದಾರೆ. ನಗರಕ್ಕೆ ಶಾಂತಿ ನೆಮ್ಮದಿಗಾಗಿ ಅವರನ್ನು ಬೆಂಬಲಿಸಿ, ಪ್ರಚಾರಕ್ಕೆ ಹೋದ ಕಡೆಗಳಲ್ಲಿ ಮತದಾರರು ಅತ್ಯುತ್ತಮ ವಾಗಿ ಸ್ಪಂದಿಸಿ ಜೆಡಿಎಸ್ ಪಕ್ಷವನ್ನು ಮತ್ತು ಅಬ್ಯರ್ಥಿಯನ್ನ ಬೆಂಬಲಿಸುತ್ತಿದ್ದಾರೆ ಎಂದರು.

   ಸ್ಮಾರ್ಟ್ ಸಿಟಿಯಲ್ಲಿ ಎಲ್ಲಾ ಏರಿಯಾ ಅಭಿವೃದ್ಧಿ ಆಗಿಲ್ಲ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಜೆಡಿಎಸ್ ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲಿಸಬೇಕು. ಶಿವಮೊಗ್ಗ ಮತ್ತು ಜಿಲ್ಲೆಯ ಮತದಾರರು ಜೆಡಿಎಸ್ ಪಕ್ಷದ ಅಭ್ಯರ್ಥಿ ಗಳಿಗೆ ಮತಹಾಕಿ ಎಂದು ಮನವಿ ಮಾಡಿದರು.ಹೆಚ್ಚಿನ ಮತ ಅಂತರದಲ್ಲಿ ಶಿವಮೊಗ್ಗ ನಗರ ಅಭ್ಯರ್ಥಿ ಆಯನೂರು ಮಂಜಣ್ಣ ಗೆಲುವು ಸಾಧಿಸಲಿದ್ದಾರೆ ಎಂದರು.

ಇಂದು ಮಧ್ಯಾಹ್ನ. ‌ಆಟೋಚಾಲಕರ ಕಾರ್ಮಿಕರ ಮತ್ತು ಜೆಡಿಎಸ್ ಪಕ್ಷದ ಕಾರ್ಯಕರ್ತರ ಬೃಹತ್ ರ್ಯಾಲಿ ನಗರದ ಮುಖ್ಯ ರಸ್ತೆಯಲ್ಲಿ ನಡೆಯಲಿದೆ. ಆಯನೂರು ಮಂಜುನಾಥ್ ಮತಯಾಚನೆ ಮಾಡಲಿದ್ದಾರೆ ಎಂದರು.

ಈ ಸಂದರ್ಬದಲ್ಲಿ ಜೆಡಿಎಸ್ ಪಕ್ಷದ ಹಲವಾರು ಮುಖಂಡರು ಹಾಜರಿದ್ದರು.


ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.