ಶಿಕಾರಿಪುರದಲ್ಲಿ ಈ ಬಾರಿ ದುಡ್ಡು ಮಾನ ದಂಡ ಆಗಲ್ಲ. ಕ್ಷೇತ್ರದ ಜನರ ಸಹಕಾರದಿಂದ ಗೆಲುವು ಸಾಧಿಸುತ್ತೆನೆ: ಪಕ್ಷೇತರ ಅಭ್ಯರ್ಥಿ ನಾಗರಾಜ್ ಗೌಡ

ಶಿಕಾರಿಪುರ: ಶಿಕಾರಿಪುರ ತಾಲೂಕಿನ ವಿಧಾನಸಭಾ ಕ್ಷೇತ್ರದಿಂದ ನಾನು ಸ್ಪರ್ದೆ ಮಾಡಬೇಕು ಅಂದು ಕೊಂಡಿರಲಿಲ್ಲ. ಜನರ ಜೊತೆ ನಾನು ಬೆರೆತು ಕೆಲಸ ಮಾಡುತ್ತಿರುವುದರಿಂದ ಜನ ನನಗೆ ಚುನಾವಣೆಗೆ ನಿಂತು ಕೊಳ್ಳಲು  ಒತ್ತಾಯ ಮಾಡಿದ್ದರಿಂದ ನಾನು ಚುನಾವಣೆಗೆ ಸ್ಪರ್ದಿಸಿದ್ದೆನೆ.ಶಿಕಾರಿಪುರದಲ್ಲಿ  ಈ ಬಾರಿ ದುಡ್ಡು ಮಾನ ದಂಡ ಆಗಲ್ಲ. ಕ್ಷೇತ್ರದ ಜನರ ಸಹಕಾರದಿಂದ  ಗೆಲುವು ಸಾಧಿಸುತ್ತೆನೆ ಎಂದು ಶಿಕಾರಿಪುರ ತಾಲ್ಲೂಕಿನ  ಪಕ್ಷೇತರ ಅಭ್ಯರ್ಥಿ ನಾಗರಾಜ್ ಗೌಡ ಹೇಳಿದರು.

ಇಂದು ಬೆಳಿಗ್ಗೆ ಶಿವಮೊಗ್ಗ ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಿದ ಪತ್ರಿಕಾ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಶಾಂತವೀರಪ್ಪಗೌಡರು ಮತ್ತು ಶಿಕಾರಿಪುರ ತಾಲ್ಲೂಕಿನ ಎಲ್ಲಾ ಸಮಾಜದ ಜನರು ನನ್ನ ಪರವಾಗಿದ್ದಾರೆ.ರಾಜ್ಯನಾಯಕರು ಮತ್ತು ಹಲವಾರು ಸರ್ವೆ ರಿಪೋರ್ಟ್ ನನ್ನ ಪರವಾಗಿತ್ತು. ಕಾಂಗ್ರೆಸ್ ಪಕ್ಷದಿಂದ ನನಗೆ ಟಿಕೇಟ್ ಸಿಗುತ್ತದೆ ಎಂಬ ಭರವಸೆ ಇತ್ತು. ಕೊನೆ ಕ್ಷಣದಲ್ಲಿ ನನಗೆ ಟಿಕೇಟ್ ಕೈತಪ್ಪಿದೆ ಎಂದರು.

    ಜನರ ಅಭಿಪ್ರಾಯದಂತೆ ಯಡಿಯೂರಪ್ಪ ರವರು ಶಿಕಾರಿಪುರದಲ್ಲಿ ಜನರ ಆಶಯದಂತೆ ಕಾಮಗಾರಿ ಕೆಲಸ ಅಭಿವೃದ್ಧಿ ಮಾಡಿಲ್ಲ. ಬಿಜೆಪಿ ಪಕ್ಷದವರು ದ್ವೇಷ ರಾಜಕಾರಣ ಮಾಡುತ್ತಾರೆ.ಈಗಿನ ಬಿಜೆಪಿ ವಿಜೇಂದ್ರ ಮತ್ತೆ ಗೆದ್ದರೇ ಇನ್ನು 10 ವರ್ಷ ಅಧಿಕಾರ ಅವರ ಕೈಯಲ್ಲಿ ಇರುತ್ತದೆ.ಆಗಾಗಿ ಜನರು ಈ ಬಾರಿ ಬದಲಾವಣೆ ಬಯಸಿದ್ದಾರೆ ಎಂದರು.

ಸುಮಾರು 20 ರಿಂದ 25 ಸಾವಿರ ಜನ ನಾನು ನಾಮಪತ್ರ ಸಲ್ಲಿಸುವ ಸಮಯದಲ್ಲಿ ಜನರು ಹಾಜರಿದ್ದರು. ನಾನು ಒಂದು ರೂಪಾಯಿ ಖರ್ಚು ಮಾಡಿಲ್ಲ.ಕಾಂಗ್ರೆಸ್ ಟಿಕೇಟ್ ಸಿಗದಂತೆ ನನಗೆ ಮೋಸ ಮಾಡಿದ್ದಾರೆ ಎಂದು ನನಗೆ ಎಲ್ಲಾ ಜಾತಿಯ ಜನರು ಬೆಂಬಲ ಸೂಚಿಸಿದ್ದಾರೆ ಎಂದರು.
     
ಬಗರ್ ಹುಕುಂ ರೈತರಿಗೆ ಹಕ್ಕು ಪತ್ರ ಕೊಟ್ಟಿಲ್ಲ. ಬಗರ್ ಹುಕುಂ ರೈತರಿಗೆ ಭೂಗಳ್ಳರು ಎಂದು ಕೇಸ್ ಹಾಕಿದ್ದಾರೆ. ಇದೀಗ ಕೇಸ್ ಗಾಗಿ ಓಡಾಟ ಮಾಡಿ ಸುಸ್ತಾಗಿದ್ದಾರೆ ಅದು ಜನರಿಗೆ ಬೇಸರವಿದೆ.

ಒಳಮೀಸಲಾತಿಯಿಂದ ಬಣಜಾರ್ ಸಮುದಾಯ ನಮ್ಮ ಒಟ್ಟಿಗೆ ಇದೆ.ಏತ‌ನೀರಾವರಿ ಯೋಜನೆ  ಜಾರಿ ತಂದಿಲ್ಲ.1500 ಕೋಟಿ ಬಿಡುಗಡೆ ಮಾಡಿ. ಕೆರೆಗಳಿಗೆ ನೀರು ತುಂಬಲಿಲ್ಲ. ಇದರಿಂದಾಗಿ ಬೋರ್ ನಲ್ಲಿ ನೀರಿಲ್ಲದೆ ಅಂತರ್ ಜಲ ಕುಸಿತ ಕಂಡು. ತೋಟ ಹಾಳು ಆಗುತ್ತಿದೆ  ಎಂದರು.

ನಾನು ಶಾಸಕನಾದರೇ ಜನರ ಜೊತೆಯಲ್ಲಿ ಇರುತ್ತೆನೆ. ಜನರ ಆಶಯದಂತೆ ಕೆಲಸ ಮಾಡುತ್ತೆನೆ.ಜನರು ನನಗೆ ಎಲೆಕ್ಷನ್ ಗೋಸ್ಕರ ದೇಣಿಗೆ ಕೊಡುತ್ತಿದ್ದಾರೆ. ದಿನ ದಿನಕ್ಕೆ ಎಲ್ಲಾ ಗ್ರಾಮದಲ್ಲಿ ಜನರ ಬೆಂಬಲ ಜಾಸ್ತಿಯಾಗುತ್ತಿದೆ.
 ದುಡ್ಡಿನ ಹಬ್ಬರ ಜನರು ನೋಡಿದ್ದಾರೆ. ಜನರಿಗೆ ಅರಿವು ಮೂಡಿದೆ. ಈ ಬಾರಿ ಚುನಾವಣೆ ಯಲ್ಲಿ ಹಣ ಹೆಂಡ ಆಟ ನಡೆಯಲ್ಲ ಎಂದರು.

ಇದೀಗ ವಿಜೇಂದ್ರ ಇಲ್ಲೆ ಟಿಕಾಣಿ ಹೂಡಿದ್ದಾರೆ. ವಿಜೇಂದ್ರ ಯಾವತ್ತೂ ಶಿಕಾರಿಪುರ ದಲ್ಲಿ ಇಲ್ಲ. ಈಗ ಎಲೆಕ್ಷನ್ ಸಲುವಾಗಿ ಬಂದಿದ್ದಾರೆ. ಈ ಬಾರಿ ದುಡ್ಡು ಮಾನ ದಂಡ ಆಗಲ್ಲ. ಕ್ಷೇತ್ರದ ಜನರ ಸಹಕಾರದಿಂದ ನಾನು ಈ ಬಾರಿ ಗೆಲುವು ಸಾಧಿಸುತ್ತೆನೆ.

ನನಗೆ ಚಿಹ್ನೆ ಟ್ರಾಕ್ಟರ್ ಸಿಕ್ಕಿದೆ. ಈ ಚಿಹ್ನೆ ಗೆ ಶಿಕಾರಿಪುರದ  ಜನರು ಮತ ಹಾಕಿ ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಲು ಆಶಿರ್ವದಿಸ ಬೇಕೆಂದು ಶಿಕಾರಿಪುರ ತಾಲೂಕಿನ ಜನರಲ್ಲಿ ವಿನಂತಿಸಿದರು.

ಈ ಸಂದರ್ಭದಲ್ಲಿ ಪ್ರೆಸ್‌ ಟ್ರಸ್ಟ್ ಅದ್ಯಕ್ಷ ಮಂಜುನಾಥ್, ಕಾರ್ಯದರ್ಶಿ ನಾಗರಾಜ್ ನೇರಿಗೆ, ಕಾರ್ಯನಿರತ ಪತ್ರಕರ್ತರ ಸಂಘದ ಅದ್ಯಕ್ಷ ಗೋಪಾಲ್ ಯಡಗೇರೆ,ಕಾರ್ಯದರ್ಶಿ ಸಂತೋಷ್ ಕಾಚಿನಕಟ್ಟೆ ಹಾಜರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.