ಕೊಲೆ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ ಪ್ರಕಟ

ಶಿವಮೊಗ್ಗ: *ಶ್ರೀ ರೇವಣಪ್ಪ, 51 ವರ್ಷ, ಶರಾವತಿ ನಗರ ಶಿವಮೊಗ್ಗ ಟೌನ್ ಮತ್ತು ಅವರ ಸಹೋದರರ ಮದ್ಯೆ ಜಮೀನಿನ ವಿಚಾರವಾಗಿ ವೈಮನಸ್ಸಿದ್ದು,* ದಿನಾಂಕಃ 26-12-2018 ರಂದು ಆರೋಪಿತರಾದ ಪ್ರಕಾಶ, ಮಂಜಪ್ಪ, ಶಂಕ್ರಪ್ಪ. ಮೌನೇಶ್ವರಪ್ಪ, ಆಶಾ ಹಾಗೂ ಇತರರು ಸೇರಿಕೊಂಡು *ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ರೇವಣ್ಣಪ್ಪ ರವರನ್ನು ಕೊಲೆ* ಮಾಡಿರುತ್ತಾರೆಂದು ಮೃತನ ಪತ್ನಿ ಶ್ರೀಮತಿ ಕಮಲಮ್ಮ ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 622/2018  ಕಲಂ 143, 147, 148, 302, 114 ಸಹಿತ 149 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ. ಆಗಿನ ತನಿಖಾಧಿಕಾರಿಗಳಾದ *ಶ್ರೀ ಜೆ. ಲೋಕೇಶ್ ಪೊಲೀಸ್ ವೃತ್ತ ನಿರೀಕ್ಷಕರು,* ಶಿವಮೊಗ್ಗ ಗ್ರಾಮಾಂತರ ವೃತ್ತ ರವರು ಪ್ರಕರಣದ ತನಿಖೆ ಕೈಗೊಂಡು ಸದರಿ ಆರೋಪಿತರ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿರುತ್ತಾರೆ. 

               ಪ್ರಕರಣದಲ್ಲಿ ಸರ್ಕಾರದ ಪರವಾಗಿ *ಶ್ರೀ ಸುರೇಶ ಕುಮಾರ್, ಸರ್ಕಾರಿ ಅಭಿಯೋಜಕರವರು* ವಾದ ಮಂಡಿಸಿದ್ದು, *ಘನ ಪ್ರದಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ* ಪ್ರಕರಣದ ವಿಚಾರಣೆ ನಡೆದು *ಆರೋಪಿ ಪ್ರಕಾಶ್, 45 ವರ್ಷ, ಹೊಳಲೂರು ಗ್ರಾಮ ಶಿವಮೊಗ್ಗ* ಈತನ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ, *ಮಾನ್ಯ ನ್ಯಾಯಾಧೀಶರು* ದಿನಾಂಕ:23-05-2023 ರಂದು *ಆರೋಪಿತನಿಗೆ ಜೀವಾವಧಿ ಶಿಕ್ಷೆ ಮತ್ತು ರೂ 1,00,000/- ದಂಡ, ದಂಡ ಕಟ್ಟಲು ವಿಫಲನಾದರೆ ಹೆಚ್ಚುವರಿ 2 ವರ್ಷ ಸಾಧಾ ಕಾರಾವಾಸ ಶಿಕ್ಷೆ* ವಿಧಿಸಿ ಆದೇಶ ನೀಡಿರುತ್ತಾರೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.