ಶಿವಮೊಗ್ಗ ನಗರ ಮತ್ತು ಜಿಲ್ಲೆಯ ಅಭಿವೃದ್ಧಿಗಾಗಿ ಜೆಡಿಎಸ್ ಅಭ್ಯರ್ಥಿಗಳಿಗೆ ಮತ ನೀಡಿ ಆಶೀರ್ವದಿಸಿ: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ

ಶಿವಮೊಗ್ಗ: ರಾಷ್ಟ್ರ ಕವಿ ಕುವೆಂಪುರವರ ಆಶಯದಂತೆ ಶಿವಮೊಗ್ಗದಲ್ಲಿ ಸರ್ವಜನಾಂಗದ ಶಾಂತಿ ತೋಟವನ್ನು ನಿರ್ಮಿಸುವ ಸಲುವಾಗಿ ನಾಡಿನ ಜನತೆಯ ಬದುಕಿಗಾಗಿ, 5 ವರ್ಷದ ಆಡಳಿತಕ್ಕಾಗಿ ಶಿವಮೊಗ್ಗ ನಗರ ಮತ್ತು ಜಿಲ್ಲೆಯ ಅಭಿವೃದ್ಧಿಗಾಗಿ ಜೆಡಿಎಸ್ ಅಭ್ಯರ್ಥಿಗಳಿಗೆ ಮತ ನೀಡಿ  ಜನತೆ ಆಶೀರ್ವದಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

ಅವರು ಬುಧವಾರ ಸಂಜೆ NES ಮೈದಾನದಲ್ಲಿ ಶಿವಮೊಗ್ಗ ನಗರ ವಿಧಾನಸಭಾ ಚುನಾವಣೆಯ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ  ಸಾರ್ವಜನಿಕ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಚುನಾವಣಾ  ಸರ್ವೆ ರಿಪೋರ್ಟ್ ನಂಬಬೇಡಿ... ನಾನೇ ಮುಂದಿನ ಮುಖ್ಯಮಂತ್ರಿ
ಚುನಾವಣಾ  ಸರ್ವೆ ರಿಪೋರ್ಟ್ ನಂಬಬೇಡಿ... ನಾನೇ ಮುಂದಿನ ಮುಖ್ಯಮಂತ್ರಿ ನನ್ನನ್ನು ಬಿಟ್ಟು ಯಾರು ಅಧಿಕಾರಕ್ಕೆ ಬರಲು ಸಾದ್ಯವಿಲ್ಲ, ಜನರು ನಮ್ಮ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲಿದ್ದಾರೆ. ಇದನ್ನ ಯಾರು ತಪ್ಪಿಸುವುದಕ್ಕೆ ಸಾದ್ಯವಿಲ್ಲ ಎಂದರು. ಎರಡು ರಾಷ್ಟ್ರೀಯ ಪಕ್ಷಗಳು ಮಾಡಿಕೊಂಡ ಸ್ವಯಕೃತ ಅಪರಾದದಿಂದ ಅಧಿಕಾರ ಕಳೆದುಕೊಂಡು ಮನೆಗೆ ಹೋಗಲಿದ್ದಾರೆ ಎಂದರು.

ನಮ್ಮ ಪಕ್ಷದ ಅಭ್ಯರ್ಥಿಯಾಗಿರುವ ಆಯನೂರು ಮಂಜುನಾಥ್ ರವರು ಕಾರ್ಮಿಕ ರ ಏಳುಬಿಳುಗಳ ನಡುವೆ ಬಂದಿದ್ದಾರೆ.ಜಾತ್ಯಾತೀತ ನಿಲುವು ಹೊಂದಿದ ವ್ಯಕ್ತಿ ಯಾಗಿದ್ದಾರೆ.ಶಿವಮೊಗ್ಗದಲ್ಲಿ ಖಾಸಗಿ ಬಸ್ ನಿಲ್ದಾಣ ಕ್ಕೆ ಫೌಂಡೇಶನ್ ಹಾಕಿದ್ದು ನಾನು... ಶಿವಮೊಗ್ಗದಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಆಸ್ತಿಮಾಡಿ,ಶಿಕ್ಷಣ ಸಂಸ್ಥೆ ಸ್ಥಾಪನೆ ಮಾಡಿ ಯಾವ ರೀತಿಯಲ್ಲಿ ಮೆಷಿನ್ ಇಟ್ಟುಕೊಂಡು ಹಣ ಎನಿಸಿದರು ಎಂಬುದು ಗೊತ್ತು ಎಂದರು.

ಯಡಿಯೂರಪ್ಪ ರವರು ಚೀಟಿ ಕಳಿಸಿ ಮಂತ್ರಿ ಸ್ಥಾನ ಕೊಟ್ಟರೆ ಬಿಜೆಪಿ ಬಿಟ್ಟು ಬರುತ್ತೆನೆ ಎಂದಿದ್ದರು.

 ನಮ್ಮ ಸರ್ಕಾರ ಬಂದರೆ,   VISL,MPM ಪುನರುಜ್ಜೀವನ ಕ್ಕೆ  ಒತ್ತು ಕೊಡಲಾಗುವುದು. ರೈತರ ಸಾಲಮನ್ನಾ ಮಾಡಿದ್ದೆನೆ. ನಾನು ಸರ್ಕಾರದ ಖಜಾನೆ ಲೂಟಿ ಹೊಡೆಯುವ ಕೆಲಸ ಮಾಡಿಲ್ಲ ಎಂದರು.

 ನಮ್ಮ ಸರ್ಕಾರ ಇದ್ದಾಗ ಆನ್ ಲೈನ್ ಲಾಟರಿ ನಿಷೇಧ ಮಾಡಿದ್ದೆ.ಆದರೆ ಇದೀಗ ರಾಜ್ಯ ಸರ್ಕಾರಕ್ಕೆ ಯಾವುದು ನಿಯಂತ್ರಣ ಇಲ್ಲ. ಆನ್ ಲೈನ್ ರಮ್ಮಿಯಾಟ ಆಡಿ ರೈತರ ಮಕ್ಕಳು ಮತ್ತು ವಿದ್ಯಾರ್ಥಿಗಳು ಹಾಳಾಗುತ್ತಿದ್ದಾರೆ ಎಂದರು.

ಒಕ್ಕಲಿಗ ಲಿಂಗಾಯತರಿಗಾಗಿ ಮುಸ್ಲಿಮ್ ಮೀಸಲಾತಿ ರದ್ದು

ಒಕ್ಕಲಿಗ ಮತ್ತು ಲಿಂಗಾಯಿತರ ಮತಬ್ಯಾಂಕ್ ಗಾಗಿ ಮುಸ್ಲೀಂ ಮೀಸಲಾತಿಯನ್ನ ತೆಗೆಯುವ ಕೆಲಸವನ್ನು  ಬಿಜೆಪಿ ಮಾಡಿದೆ. ಆದರೆ ಸುಪ್ರೀಂ‌ಕೋರ್ಟ್ ನಲ್ಲಿ ನಾವು ಇದನ್ನ ಜಾರಿಗೆ ತರಲೇ ಇಲ್ಲ ಎಂದು ಅಫಿಡೆವಿಟ್ ಹಾಕಿ ಜನರ ಕಣ್ಣಿಗೆ ಮಣ್ಣು ಎರಚಿವೆ ಎಂದರು.

ಬ್ರಾಹ್ಮಣ ಅಭಿವೃದ್ಧಿ ನಿಗಮಕ್ಕೆ 100 ಕೋಟಿ

ಜೆಡಿಎಸ್​ ಅಧಿಕಾರಕ್ಕೆ ಬಂದರೆ ಬ್ರಾಹ್ಮಣ ಅಭಿವೃದ್ಧಿ ನಿಗಮಕ್ಕೆ 100 ಕೋಟಿ ಹಣ ಅನುದಾನ ನೀಡುವುದಾಗಿ ಮಾಜಿ ಸಿಎಂ  ಘೋಷಿಸಿದ್ದಾರೆ. ನಾನು ಮೊದಲ ಬಾರಿಗೆ ಮುಖ್ಯಮಂತ್ರಿ ಆಗಿದ್ದಾಗ ಬೆಂಗಳೂರಿನಲ್ಲಿ ಸಮುದಾಯಕ್ಕೆ ಜಾಗ ನೀಡಿದ್ದೆ ಎಂದರು.

ಎರಡನೇ ಬಾರಿ ಸಿಎಂ ಆಗಿದ್ದಾಗ ಬ್ರಾಹ್ಮಣ ಅಭಿವೃದ್ಧಿ ನಿಗಮ ಆರಂಭಿಸಿದೆ. ಆದರೆ ಬಿಜೆಪಿ ನಿಗಮಕ್ಕೆ ಹಣವೇ ಬಿಡುಗಡೆ ಮಾಡಲಿಲ್ಲ. ನಾನು ನಾಳೆ ಸ್ವಂತಬಲದಿಂದ ಸಿಎಂ ಆದರೆ 100 ಕೋಟಿ ಹಣ ತೆಗೆದಿಡುವುದಾಗಿ ಘೋಷಿಸಿದರು.

ಇಬ್ಬರು ಜಿಲ್ಲೆಯಿಂದ ಮಂತ್ರಿಗಳು

ಜೆಡಿಎಸ್ ಅಧಿಕಾರಕ್ಕೆ ಬಂದರೆ ಜಿಲ್ಲೆಯಲ್ಲಿ ಇಬ್ಬರು ಮಂತ್ರಿಗಳಾಗಲಿದ್ದಾರೆ ಎಂದು ಮಾಜಿಮುಖ್ಯಮಂತ್ರಿ ಹೇಳಿದ್ದಾರೆ. ಆದರೆ ಆ ಇಬ್ಬರು ಯಾರು ಎಂಬುದನ್ನ ಹೇಳದ ಕುಮಾರಸ್ವಾಮಿ,  ಆಯನೂರು ಮಂಜುನಾಥ್ ಮತ್ತು ಶಾರದಾ ಪೂರ್ಯನಾಯ್ಕ್ ಮುಖವನ್ನ ನೋಡಿ ನಕ್ಕರು

 ಶಿವಮೊಗ್ಗದ ಜನ ಬದಲಾವಣೆ ಬಯಸುತ್ತಿದ್ದಾರೆ: ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್

ಶಿವಮೊಗ್ಗದ ಜನ ಬದಲಾವಣೆ ಬಯಸುತ್ತಿದ್ದಾರೆ. 33 ವರ್ಷದ ಏಕಾಧಿಪತ್ಯದ ಆಡಳಿತವಿತ್ತು. ಇದೀಗ ಶಿವಮೊಗ್ಗ ತನ್ನ ತನವನ್ನ ಕಳೆದುಕೊಂಡಿದೆ ಎಂದರು.ರಾತ್ರಿ ಮುಸ್ಲೀಂಮರ ಮನೆಯಲ್ಲಿ ನಲ್ಲಿ ಮೂಳೆ ತಿಂದು ಬೆಳಿಗ್ಗೆ ಜಟ್ಕಾ ಕಟ್ ಮಾತನಾಡುತ್ತಿದ್ದರು ಎಂದು ಶಿವಮೊಗ್ಗ ಶಾಸಕ ಕೆ.ಎಸ್. ಈಶ್ವರಪ್ಪನವರ ವಿರುದ್ಧ ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್ ವಾಗ್ದಾಳಿ ಮುಂದುವರೆಸಿದರು.

ಈಶ್ವರಪ್ಪನವರಿಂದಲೇ ಶಿವಮೊಗ್ಗ ಹೊತ್ತಿ ಉರಿದಿತ್ತು. ಮಂಗಳೂರಿನ ಕಾವೂರಿನಲ್ಲಿ ಈಶ್ವರಪ್ಪ ಮಾತನಾಡುತ್ತಿದ್ದ ವೇಳೆ ಆಜಾನ್ ಕೂಗಲಾಯಿತು. ಆಜಾನ್ ಕೂಗಿದರೆ ಈಶ್ವರಪ್ಪ ದೇವರಿಗೆ ಕಿವಿ ಕೇಳೊಲ್ವಾ ಎಂಬ ಹೇಳಿಕೆ ಕೊಟ್ರು.ಅದು ಶಿವಮೊಗ್ಗದ ಮುಸ್ಲೀಂರನ್ನ ಕೆರಳಿಸಿತು.ಎಸ್ಪಿ ಡಿಸಿ ಚಾಣಾಕ್ಷತನದ ನಡೆಯಿಂದ ಗಲಾಟೆ ತಣ್ಣಗಾಯಿತು.ಶಾಂತಿ ಕದಡಲಿಲ್ಲ ಎಂದರು.

ಹಾಗಾಗಿಯೇ ನಾನು ಶಿವಮೊಗ್ಗ ನಗರದಲ್ಲಿ ಫ್ಲೆಕ್ಸ್ ಹಾಕಿಸಿದಾಗ ಹರಕುಬಾಯಿಗೆ ಹೊಲಿಗೆ ಬೀಳಲಿ ಎಂಬ ಫ್ಲೆಕ್ಸ್ ಹಾಕಿಸಿದ್ದೆ ಎಂದ ಆಯನೂರು ಮಂಜುನಾಥ್ ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಲ್ ಸಂತೋಷ್ ವಿರುದ್ಧವೂ ವಾಗ್ದಾಳಿ ಮುಂದುವರೆಸಿದರು. 40 ವರ್ಷದ ರಾಜಕೀಯ ಜೀವನದಲ್ಲಿ ನನ್ನ ವಿರುದ್ದ ಒಂದೂ ಕಪ್ಪು ಚುಕ್ಕೆ ಇರಲಿಲ್ಲ. ಅಂತಹವನನ್ನ ಚರಂಡಿ ನೀರಿಗೆ ಹೋಲಿಸಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಶಿವಮೊಗ್ಗದಲ್ಲಿ ಜನ ಬದಲಾವಣೆ ಬಯಸಿದ್ದಾರೆ.   ಶಿವಮೊಗ್ಗ ಒಂದೇ ವ್ಯಕ್ತಿಯ ಹಿಡಿತದಲ್ಲಿ 30 ವರ್ಷದಿಂದ   ಇತ್ತು. ನಾನು ಕಾರ್ಮಿಕ ಕ್ಷೇತ್ರದಲ್ಲಿ ದ್ದು 52-53 ಕಾರ್ಮಿಕ ಸಂಟನೆಯೊಂದಿಗೆ ಗುರುತಿಸಿಕೊಂಡು ಅವರ ನಷ್ಟ ಕಷ್ಟಗಳ ಸಂದರ್ಭದಲ್ಲಿ ಅವರಿಗೆ ಸ್ಪಂದಿಸಿ ಹೋರಾಟ ಮಾಡಿಕೊಂಡು ಬಂದವನು.ಕಾಲೇಜು ಓದುವ ಸಮಯಕ್ಕೆ ವಿದ್ಯಾರ್ಥಿ ಹೋರಾಟದಲ್ಲಿ ಭಾಗವಹಿಸಿ ನಾನು ಕಾರಾಗೃಹ ವಾಸ ಕಂಡಿದ್ದೆನೆ. ನಾನು ಆಟೋಡ್ರೈವರ್ ಆಗಿ ಕೆಲಸ ಮಾಡಿದ್ದೆನೆ. ನನ್ನ ಜೋತೆ ಆಟೋ ಓಡಿಸಿದವರು ಈಗಲೂ ಇದ್ದಾರೆ. ನನಗೆ mla, mp ಆದೇ ಎಂಬ ಅಂಬುಬಿಂಬು ಇಲ್ಲ ಎಂದರು.

ಕೊರಾನ ಸಮಯದಲ್ಲಿ 6000 ಆಟೋಗಳು ಬಂದ್ ಆಗಿದ್ದವು. ಹಲವಾರು ಹೋಟೆಲ್, ತಳ್ಳುವ ಗಾಡಿಗಳು ಬಂದ್ ಆಗಿದ್ದವು. ಆ ಸಮಯದಲ್ಲಿ ಅವರ ಕಷ್ಟಪಟ್ಟಿದ್ದು ಕಣ್ಣೀರು ಹಾಕಿದ್ದನ್ನ ನೋಡಿದ್ದೆನೆ ಎಂದರು.
.
40% ಭ್ರಷ್ಠಾಚಾರ ನಡೆಸಿದವರು, ಬ್ಯಾರಿ ಮಾಲ್ ಗೆ 99 ವರ್ಷ ಲೀಜ್ ನೀಡಲು ಮುಂದಾದವರು ಇವರಿಗೆ ಶುದ್ಧ ಹಸ್ತರಾಗಿ ಕಾಣ್ತಾರಾ ಎಂದು ಪ್ರಶ್ನಿಸಿದರು‌

ಇಷ್ಟಕ್ಕೆ ಸುಮ್ಮನಾಗದ ಆಯನೂರು ಮಂಜುನಾಥ್ ಹುಬ್ಬಳ್ಳಿಯಲ್ಲಿ ಪತ್ರಕರ್ತರು ಹರ್ಷನ ಸಹೋದರಿಗೆ ಶಿವಮೊಗ್ಗದಲ್ಲಿ ಬಿಜೆಪಿ ಸ್ಪರ್ಧಿಸಲು ಅವಕಾಶ ಮಾಡಿಕೊಡಬೇಕಿತ್ತು ಎಂಬ ಪ್ರಶ್ನಿಸಿದಾಗ ಅವರ ಅಮ್ಮನಿಗೂ ಟಿಕೇಟ್ ಕೊಡ್ತೀವಿ ಎಂದು ಹಗುರವಾಗಿ ಮಾತನಾಡಿದರು. ಆದರೆ ಹರ್ಷ ಸತ್ತಾಗ ರಾಜಕೀಯ ಲಾಭ ಪಡೆದವರು ಯಾರು? ಹರ್ಷನ ಹೆಸರಿನಲ್ಲಿ ಟ್ರಸ್ಟ್ ರಚಿಸಿದಾಗ ಹಣದ ಹೊಳೆಯೇ ಹರಿಯಿತಲ್ಲ ಟ್ರಸ್ಟ್ ಗೆ ಅಧ್ಯಕ್ಷರಾದವರು ಯಾರು ಎಂದು ಪ್ರಶ್ನಿಸಿದರು.

ರಾಜ್ಯದ ರಾಯಚೂರು, ಗುಲ್ಬರ್ಗಗಳಿಗೆ ಬಂಡವಾಳ ಹರಿದು ಬಂದು ಕಾರ್ಖಾನೆಗಳಿಗೆ ಅನುಕೂಲವಾಗಿತ್ತು. 10 ಲಕ್ಷ ಕೋಟಿ ಬಂಡವಾಳ ಹರಿದುಬಂದ ಪರಿಣಾಮ ರಾಜ್ಯದಲ್ಲೆಡೆ ಬಂಡವಾಳದಾರರು ಬಂಡವಾಳ ಹೂಡಲು ಮುಂದಾದರು. ಆದರೆ ಶಿವಮೊಗ್ಗದಲ್ಲಿ ಹೈವೆ, ರೈಲ್ವೆ, ಏರ್ ವೇ ಇದ್ದರೂ ಸಹ ಒಂದು ರೂ. ಬಂಡವಾಳ ಬರಲಿಲ್ಲ. ಹಾಗಾಗಿ ಕುಮಾರ ಸ್ವಾಮಿಯವರು ಸಿಎಂ ಆದರೆ ಶಿವಮೊಗ್ಗಕ್ಕೆ ಅನುಕೂಲ ಮಾಡಿಕೊಡಬೇಕು. ಉತ್ತಮ ಕಾರ್ಖಾನೆಗಳು ಬರುವಂತೆ ಮಾಡಬೇಕೆಂದು ಕುಮಾರಸ್ವಾಮಿಯವರನ್ನ ವಿನಂತಿಸಿದರು.

ಶಿವಮೊಗ್ಗದಲ್ಲಿನ ಜನರ ಹಿತ-ಶಾಂತಿ ಕಾಪಾಡುವುದಕ್ಕಾಗಿ ಜೆಡಿಎಸ್ ಆಶೀರ್ವದಿಸಬೇಕು:ಕೆ.ಬಿ.ಪ್ರಸನ್ನ ಕುಮಾರ್

ಕೆಬಿಪಿ ಮತ್ತು ಆಯನೂರು ಮಂಜುನಾಥ್ ಯಾಕೇ ಪಕ್ಷವನ್ನು ಬಿಟ್ಟು ಬಂದ್ರು ಅಂತಾ ಜನ ಕೇಳ್ತಾರೆ, ಕಾಂಗ್ರೆಸ್ ಪಕ್ಷ  ಮತ್ತು ಬಿಜೆಪಿ ಪಕ್ಷ ಜಾತ್ಯಾತೀತ ನಿಲುವಿಲ್ಲದ ವ್ಯಕ್ತಿ ಆಯ್ಕೆ ಮಾಡಿದ್ದರಿಂದ ಹಾಗೂ ಶಿವಮೊಗ್ಗದಲ್ಲಿ ಶಾಂತಿ ನಿರ್ಮಾಣಮಾಡುವುದಕ್ಕೋಸ್ಕರ ಹಾಗೂ ಎಲ್ಲಾ ಜನಾಂಗದವರು ನೆಮ್ಮದಿಯಿಂದ ಜೀವಿಸಬೇಕು, ಅಶಾಂತಿ ಸೃಷ್ಟಿ ಮಾಡುವವರು ಬೆಂಕಿ ಹಚ್ಚುವವರು ಬೇಡವೆಂದು   ನಾವು ಪಕ್ಷ ಬಿಟ್ಟು ಬರುವಂತಾಯಿತು.ಶಿವಮೊಗ್ಗದಲ್ಲಿನ ಜನರ ಹಿತ-ಶಾಂತಿ ಕಾಪಾಡುವುದಕ್ಕಾಗಿ ಜೆಡಿಎಸ್ ಆಶೀರ್ವದಿಸಬೇಕು ಎಂದರು.

 ಶಿವಮೊಗ್ಗ ನಗರದಲ್ಲಿ   ಯಾವಾಗ ಕರ್ಪ್ಯೂ ಮತ್ತು 144 ಸೆಕ್ಷನ್ ಜಾರಿಯಾಗುತ್ತೆ ಅಂತಾ ಗೊತ್ತಿಲ್ಲ.ಜಾತ್ಯಾತೀತ ನಿಲುವನ್ನು ಹೊಂದಿರುವುದುಜಾತ್ಯಾತೀತ ಜನತಾದಳ ಮಾತ್ರ  ಆಯನೂರು ಮಂಜುನಾಥ್ ರವರನ್ನ ಗುರುತಿಸಿ ಆಯ್ಕೆ ಮಾಡಿದಕ್ಕೆ ಧನ್ಯವಾದಗಳನ್ನು ತಿಳಿಸಿದರು.
ಶಿವಮೊಗ್ಗದಲ್ಲಿ ಶಾಂತಿಯನ್ನು ಮೂಡಿಸುವಂತ ವಾತಾವರಣ ಸೃಷ್ಟಿ ಮಾಡುವುದಕ್ಕೆ   ರಾಜ್ಯದ ಎಲ್ಲಾ ಜನರ ಹಿತ ಕಾಪಾಡುವುದಕ್ಕಾಗಿ ಜೆಡಿಎಸ್ ಆಶೀರ್ವದಿಸಬೇಕು. ಮುಂದಿನ ಮುಖ್ಯಮಂತ್ರಿ ಯಾಗುವ ಹೆಚ್.ಡಿ.ಕುಮಾರ್ ಸ್ವಾಮಿ ಗೊಸ್ಕರ ಆಯನೂರು ಮಂಜುನಾಥ್ ರವರನ್ನ ಬೆಂಬಲಿಸಬೇಕು ಎಂದರು.


ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.