ವಿಶ್ವ ತಂಬಾಕು ರಹಿತ ದಿನ *ಯಾವ ಪ್ರಾಣಿಯೂ ತಿನ್ನದಂತಹ ವಸ್ತು ತಂಬಾಕು : ನ್ಯಾ.ಮಲ್ಲಿಕಾರ್ಜುನಗೌಡ*

ಶಿವಮೊಗ್ಗ, ಮೇ 31,;
     ಯಾವ ಪ್ರಾಣಿಯೂ ತಿನ್ನದಂತಹ ವಸ್ತು ತಂಬಾಕು. ಅಂತಹ ತಂಬಾಕನ್ನು ಮನುಷ್ಯರು ತಿನ್ನುತ್ತಿದ್ದೇವೆಂದರೆ ನಾವು ಪ್ರಾಣಿಗಳಿಗಿಂತಲೂ ಕೀಳು ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ ಅಭಿಪ್ರಾಯಪಟ್ಟರು.
     ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸುಬ್ಬಯ್ಯ ವೈದ್ಯಕೀಯ ಮತ್ತು ದಂತ ವೈದ್ಯಕೀಯ & ನಸಿರ್ಂಗ್ ಕಾಲೇಜು, ಶರಾವತಿ ದಂತ ವೈದ್ಯಕೀಯ ಕಾಲೇಜು, ಜಿಲ್ಲಾ ಮೆಗ್ಗಾನ್ ಬೋಧನಾ ಆಸ್ಪತ್ರೆ, ಕಿ.ಮ.ಆ.ಸ ತರಬೇತಿ ಶಾಲೆ, ಜಿಲ್ಲಾ ವಕೀಲರ ಸಂಘ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಭಾರತೀಯ ವೈದ್ಯಕೀಯ ಸಂಘ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆಯ ಅಂಗವಾಗಿ ಇಂದು ಜಿಲ್ಲಾ ನ್ಯಾಯಾಲಯದ ಆವರಣದಿಂದ ಆಯೋಜಿಸಲಾಗಿದ್ದ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು  ಮಾತನಾಡಿದರು.
      ತಂಬಾಕು ಸೇವನೆಯಿಂದಾಗುವ ತೊಂದರೆಯನ್ನು ತಡೆಗಟ್ಟುವುದು ಹಾಗೂ ಇದರ ದುಷ್ಪರಿಣಾಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಜೂಜು, ಹವ್ಯಾಸಗಳು ಬಹಳ ಕೆಟ್ಟದ್ದು. ನಾವು ಮೋಜಿಗಾಗಿ ಅದನ್ನು ತಿನ್ನುತ್ತೇವೆ. ಆದರೆ ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮವೇ ಹೆಚ್ಚು. ಅಂದಾದ ಮೇಲೆ ಮನುಷ್ಯನ ಜೀವಕ್ಕೆ ಹಾನಿ ಉಂಟು ಮಾಡುವ ತಂಬಾಕು ಸೇವನೆಯನ್ನು ಪ್ರತಿಯೊಬ್ಬರು ತ್ಯಜಿಸಬೇಕೆಂದು ಹೇಳಿದರು.
     ಜಿಲ್ಲಾಧಿಕಾರಿಗಳಾದ ಡಾ. ಸೆಲ್ವಮಣಿ.ಆರ್ ಮಾತನಾಡಿ, ತಂಬಾಕು ಮುಕ್ತ ಶಿವಮೊಗ್ಗ ಮಾಡಬೇಕು ಎಂಬ ನಿಟ್ಟಿನಲ್ಲಿ ಈ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಮಾಧ್ಯಮಗಳಲ್ಲಿ  ಜಾಹೀರಾತುಗಳ  ಮುಖಾಂತರ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಆದರೂ ಕೂಡ ನಮ್ಮ ಸಮುದಾಯದಲ್ಲಿ ತಂಬಾಕು ಉಪಯೋಗ ಕಡಿಮೆ ಆಗಿಲ್ಲ. ತಂಬಾಕು ಸೇವನೆ ಕೇವಲ ಹಾನಿಕಾರಕ ಮಾತ್ರ, ಅದರಿಂದ ಯಾವುದೇ ಉಪಯೋಗವಿಲ್ಲ. ಹಾಗಾಗಿ ಈ ತಂಬಾಕು ಸೇವನೆ ಮತ್ತು ತಂಬಾಕು ಉಪಯೋಗದಿಂದ ಹೊರ ಬರಬೇಕು ಎಂದು ಹೇಳಿದರು.
         ಜಿಲ್ಲಾ ಪೆÇಲೀಸ್ ವರಿಷ್ಟಾಧಿಕಾರಿ ಜಿ.ಕೆ.ಮಿಥುನ್‍ಕುಮಾರ್ ಮಾತನಾಡಿ, ಜಿಲ್ಲೆಯಾದ್ಯಂತ ಪ್ರತಿ ಪೊಲೀಸ್ ಠಾಣೆಯಲ್ಲಿ 100 ಕ್ಕೂ ಹೆಚ್ಚು ಕೋಟ್ಪಾ ಕೇಸ್‍ಗಳನ್ನು ಮಾಡಬೇಕು ಎಂದು ಈಗಾಗಲೇ ಆದೇಶ ಮಾಡಲಾಗಿದೆ. ಪಿಯುಸಿ ಮತ್ತು ಕಾಲೇಜ್ ಮಕ್ಕಳು ತಂಬಾಕಿನಿಂದ ದೂರ ಇರಬೇಕು. ಶಾಲಾ-ಕಾಲೇಜ್‍ಗಳ ಸುತ್ತಮುತ್ತ ಇರುವ ಪಾನ್ ಶಾಪ್, ಬೀಡಾ ಅಂಗಡಿ, ಟೀ ಅಂಗಡಿ ಇಂತಹ ಕಡೆ ಗಮನ ನೀಡಿ ಕೋಟ್ಪಾ ಕೇಸ್‍ಗಳನ್ನು ಹೆಚ್ಚು ದಾಖಲಿಸಬೇಕು ಎಂದು ತಿಳಿಸಿದರು.
     ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಬಿ.ಜಿ.ಶಿವಮೂರ್ತಿ ಮಾತನಾಡಿ, ತಂಬಾಕು ಉತ್ಪನ್ನದ ಮೇಲೆ ಹಾನಿಕಾರಕ ಎಂದು ಬರೆದಿದ್ದರೂ ಸಹ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಅದನ್ನು ಬೇರೆ ಬೇರೆ ವಿಧಗಳಲ್ಲಿ ಉಪಯೋಗಿಸುತ್ತಿರುವುದು ಒಳ್ಳೆಯದಲ್ಲ. ತಂಬಾಕು ಮುಕ್ತವನ್ನಾಗಿ ಮಾಡುವ ನಿಟ್ಟಿನಲ್ಲಿ  ಈ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
    ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್ ಸುರಗಿಹಳ್ಳಿ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎನ್ ಚಂದನ್, ಜಿ.ಪಂ ಸಿಇಓ ಸ್ನೇಹಲ್ ಸುಧಾಕರ್ ಲೋಖಂಡೆ, ನ್ಯಾಯಾಧೀಶರುಗಳು, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸಿದ್ದನಗೌಡ ಪಾಟೀಲ್, ವೈದ್ಯಕೀಯ ಅಧೀಕ್ಷಕರಾದ ಶ್ರೀಧರ್, ಆರೋಗ್ಯ ಇಲಾಖೆಯ ಕಾರ್ಯಕ್ರಮ ಅನುμÁ್ಠನಾಧಿಕಾರಿಗಳು, ಇತರೆ ಅಧಿಕಾರಿ, ಸಿಬ್ಬಂದಿಗಳು ಹಾಜರಿದ್ದರು.
(ಫೆÇೀಟೋ ಇದೆ)

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.