ಮನೆಯ ಬೀರುವಿನಲ್ಲಿಟ್ಟಿದ್ದ ಬಂಗಾರದ ಆಭರಣ ಕಳ್ಳತನ ಮಾಡಿದ್ದ ಆರೋಪಿಗಳಿಬ್ಬರ ಸೆರೆ: ಬಂಗಾರ-ನಗದು ವಶ

ಶಿವಮೊಗ್ಗ: ದಿನಾಂಕಃ 13-05-2023  ರಂದು ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಳಲಕೊಪ್ಪ ಗ್ರಾಮದ ವಾಸಿಯಾದ ಶ್ರೀಮತಿ ರೇಣುಕಮ್ಮ 50 ವರ್ಷ ರವರು ತಮ್ಮ ವಾಸದ *ಮನೆಯ ಬೀರುವಿನಲ್ಲಿ ಇಟ್ಟಿದ್ದ ಬಂಗಾರದ ಆಭರಣಗಳು ಮತ್ತು ನಗದು ಹಣವನ್ನು, ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು* ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 210/2023  ಕಲಂ 380 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ. 
 ಪ್ರಕರಣದ ಆರೋಪಿತರು  ಮತ್ತು ಕಳುವಾದ ಮಾಲಿನ ಪತ್ತೆ ಬಗ್ಗೆ *ಶ್ರೀ ಮಿಥುನ್ ಕುಮಾರ್ ಜಿ.ಕೆ ಐಪಿಎಸ್,* ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ಮತ್ತು *ಶ್ರೀ ಅನಿಲ್ ಕುಮಾರ್ ಭೂಮರಡ್ಡಿ,* ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, ರವರ ಮಾರ್ಗ ದರ್ಶನದಲ್ಲಿ, *ಶ್ರೀ ಬಾಲರಾಜ್,*  ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ ಎ ಉಪ ವಿಭಾಗ, ರವರ ಮೇಲ್ವಿಚಾರಣೆಯಲ್ಲಿ, *ಶ್ರೀ ಮಂಜುನಾಥ್ ಬಿ,* ಪೊಲೀಸ್ ನಿರೀಕ್ಷಕರು, ತುಂಗಾನಗರ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ *ಶ್ರೀ ರಾಜುರೆಡ್ಡಿ ಬೆನ್ನೂರು,* ಪೊಲೀಸ್ ಉಪ ನಿರೀಕ್ಷಕರು, *ಶ್ರೀ ಕುಮಾರ್ ಕುರಗುಂದ,* ಪೊಲೀಸ್ ಉಪ ನಿರೀಕ್ಷಕರು, *ಶ್ರೀ ಮನೋಹರ್,* ಎಎಸ್ಐ ಮತ್ತು  ತುಂಗಾನಗರ ಪೊಲೀಸ್ ಠಾಣೆಯ ಸಿಬ್ಬಂಧಿಗಳಾದ ಹೆಚ್.ಸಿ ಕಿರಣ್ ಮೋರೆ, ಅರುಣ್ ಕುಮಾರ್, ಮೋಹನ್ ಕುಮಾರ್, ಪಿಸಿ ನಾಗಪ್ಪ, ಹರೀಶ್ ನಾಯ್ಕ, ಲಂಕೇಶ್, ಕಾಂತರಾಜ್, ಅರಿಹಂತ, ಹರೀಶ್, ಸಂತೋಷ್,ರಮೇಶ್, ಶಿವಕುಮಾರ್, ರಾಘವೇಂಧ್ರ, ಜಯ್ಯಪ್ಪ ರವರುಗಳನ್ನೊಳಗೊಂಡ *ತನಿಖಾ ತಂಡವನ್ನು* ರಚಿಸಲಾಗಿರುತ್ತದೆ. 

       ಸದರಿ ತನಿಖಾ ತಂಡವು ದಿನಾಂಕಃ 30-05-2023  ರಂದು ಪ್ರಕರಣದ *ಆರೋಪಿತರಾದ 1) ಹೇಮಾವತಿ ಆರ್, 23 ವರ್ಷ, ಮಳಲಕೊಪ್ಪ ಗ್ರಾಮ ಶಿವಮೊಗ್ಗ  ಮತ್ತು 2) ಸತೀಶ್, 22 ವರ್ಷ, ಮಳಲಕೊಪ್ಪ ಗ್ರಾಮ ಶಿವಮೊಗ್ಗ* ರವರುಗಳನ್ನು ದಸ್ತಗಿರಿ ಮಾಡಿ, ಆರೋಪಿತರಿಂದ *ಅಂದಾಜು ಮೌಲ್ಯ ರೂ 4,30,000/- ಗಳ 90 ಗ್ರಾಂ ಬಂಗಾರದ ಆಭರಣಗಳು ಮತ್ತು ರೂ 2050/- ನಗದು ಹಣವನ್ನು* ಅಮಾನತ್ತು ಪಡಿಸಿಕೊಂಡಿರುತ್ತಾರೆ.

      ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು *ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆರವರು ಅಭಿನಂದಿಸಿ* ಪ್ರಶಂಸಿಸಿರುತ್ತಾರೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.