ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ಭಜರಂಗದಳ ನಿಷೇದದ ಪ್ರಸ್ತಾಪ: ಭಜರಂಗದಳ ಸಂಯೋಜಕರಿಂದ ಖಂಡನೆ-ಆಕ್ರೋಶ
ಶಿವಮೊಗ್ಗ: 2023ರ ಕರ್ನಾಟಕ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ಬಜರಂಗದಳವನ್ನು ಕರ್ನಾಟಕ ರಾಜ್ಯದಲ್ಲಿ ನಿಷೇಧ ಮಾಡುವ ಬಗ್ಗೆ ಕಾಂಗ್ರೆಸ್ ಪ್ರಸ್ತಾಪ ಮಾಡಿರುವಂತದ್ದು ಅತ್ಯಂತ ಖಂಡನೀಯ, ರಾಷ್ಟ್ರೀಯತೇ ತೋರುವ ಅದರ ಪರ ನಿಲ್ಲುವ ಪಕ್ಷದ ಅಭ್ಯರ್ಥಿಗಳಿಗೆ ತಮ್ಮ ಮತ ಚಲಾಯಿಸಿ ಎಂದು ಭಜರಂಗದಳ ವಿಭಾಗ ಸಂಯೋಜಕ ರಾಜೇಶ್ ಗೌಡ ಹೇಳಿದರು.
ಇಂದು ಬೆಳಿಗ್ಗೆ ಶಿವಮೊಗ್ಗ ನಗರದ ಖಾಸಾಗಿ ಹೋಟೆಲ್ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ಹಿಂದುಗಳ ಆರಾಧ್ಯಮೂರ್ತಿಯಾಗಿರುವಂತಹ ಗೋಮಾತೆಯನ್ನು ಇಡೀ ದೇಶದಲ್ಲಿ ರಕ್ಷಣೆ ಮಾಡಿದ್ದು ಇದೇ ಬಜರಂಗದಳ, ರಕ್ಷಣೆ ಮಾಡಿದ ಲಕ್ಷಾಂತರಗೋವುಗಳ ಶಾಪವೇ ಕಾಂಗ್ರೆಸ್ ಪಕ್ಷಕ್ಕೆ ತಟ್ಟಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಹಾದಿ ಮಾನಸಿಕತೆಯದಂತಹ ಭೂತದಿಂದ ತಾಯಂದಿರ ಮಾನ ಪ್ರಾಣ ರಕ್ಷಣೆ ಮಾಡಿದ ಕಣ್ಣೀರು ಒರೆಸಿದ ಸಂಘಟನೆಯ ಬಜರಂಗದಳದ ವಿಷಯಕ್ಕೆ ಬಂದರೆ ರಾಜ್ಯದ ಮಾತೆಯಂದಿರೆ ತಮಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಜಗತ್ತಿನ ಮಹಾಮಾರಿ ಯಾದ ಕೋವಿಡ್ ನಂತಹ ಸಂದರ್ಭದಲ್ಲಿ ಸಾವಿರಾರು ಶವಗಳನ್ನು ದಹನ ಮಾಡಿ ಲಕ್ಷಾಂತರ ಮನೆಗಳಿಗೆ ಕಿಟ್ಟುಕೊಟ್ಟು ಜನತೆಗೆ ಧೈರ್ಯ ತುಂಬಿ, ಸಮಾಜದ ರಕ್ಷಣೆ ಮಾಡಿದ ಸಂಘಟನೆ ವಿರುದ್ಧ ಮಾತನಾಡುವ ಹಾಗೂ ನಿಷೇಧ ಮಾಡುವ ವಿಚಾರ ತೆಗೆಯುವ ತಾಕತ್ತು ಇದೆಯೋ? ಎಂದು ಪ್ರಶ್ನಿಸಿದರು.
ಜಿಹಾದಿಗಳ ಗೌರವಕ್ಕೆ ಉತ್ತರ ಕೊಟ್ಟು ಹಿಂದುಗಳ ಆತ್ಮಸ್ಥೆರ್ಯ ಕಾಪಾಡಿದ ಹೆಮ್ಮೆಯ ಸಂಘಟನೆ ಬಜರಂಗದಳ ಸಂಘಟನೆ ಯಾಗಿದೆ ಎಂದರು.
ಈ ಪ್ರಣಾಳಿಕೆ ಮುಖಾಂತರ ಬೆಂಕಿಗೆ ಕೈ ಹಾಕುವ ಕೆಲಸ ಮಾಡಿದ ಕಾಂಗ್ರೆಸ್ ರಾಜ್ಯದಲ್ಲಿ ಸರ್ವನಾಶ ಅಗಲಿದೆ ಎಂದರು.
ಜೇನುಗೂಡಿಗೆ ಕೈ ಹಾಕಿದ ಕಾಂಗ್ರೆಸ್ ಈ ರಾಜ್ಯದಲ್ಲಿ ಮಹಿಳೆಯರೇ ಮನೆಗೆ ಮತ ಕೇಳಲು ಬಂದಾಗ ಹೊರಕ್ಕೆ ಇಳಿದು ವಾಪಸ್ ಕಳಿಸುವ ಸಂದರ್ಭ ಬಂದಿದೆ ಎಂದರು.
ಭಾರತೀಯ ಜನತಾ ಪಕ್ಷದ ಕೇಂದ್ರ ಸರ್ಕಾರ ಪಿಎಫ್ಐ ನಂತಹ ಜಿಹಾದಿ ಸಂಘಟನೆ ನಿಷೇಧ ಮಾಡಿದಾಗ ಮಾತನಾಡದ ಕಾಂಗ್ರೆಸ್ಸನ್ನು ಸೋಲಿಸಿ ಎಂದರು.
ಬಿಜೆಪಿ ಸರ್ಕಾರ ಬಹುಮತದಿಂದ ಆರಿಸಿ, ಗೋಹತ್ಯೆ ನಿಷೇಧ ಕಾನೂನು ಮತಾಂತರ ನಿಷೇಧ ಕಾನೂನು ಇವುಗಳನ್ನು ಗಟ್ಟಿ ಮಾಡುವಂತೆ ಹಾಗೂ ಕೂಡಲೇ ಸಮಾನ ನಾಗರಿಕ ಸಮಿತಿ ಜಾರಿಗೆ ತರುವಂತೆ ಮಾಡಲು ಈ ರಾಜ್ಯದ ಹಿಂದುಗಳು ದೇಶಭಕ್ತರು ಸಂಕಲ್ಪ ಮಾಡಬೇಕಾಗಿದೆ ಎಂದರು.
ಕಾಂಗ್ರೆಸ್ ಪಕ್ಷದ ಈ ಕೆಟ್ಟ ಷಡ್ಯಂತರದ ವಿರುದ್ಧ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆಗಳನ್ನು ವಿಶ್ವ ಹಿಂದೂ ಪರಿಷತ್ ಬಜರಂಗಗಳ ಕಾರ್ಯಕರ್ತರು ನಡೆಸಲಿದ್ದಾರೆ ಎಂದರು.
ಈ ಸುದ್ದಿ ಗೋಷ್ಟಿ ಯಲ್ಲಿ ಅಂಕುಶ್,ಶಿವಮೊಗ್ಗ ಜಿಲ್ಲಾ ಬಜರಂಗದಳ ಸಹ ಸಂಯೋಜಕ, ನಾಗೇಶ್ ಶಿವಮೊಗ್ಗ ನಗರ ಸಂಯೋಜಕ,ವೇಣು,ಅರ್ಜುನ್, ಆನಂದ್,ಲಿಖಿತ್, ಹಾಜರಿದ್ದರು.

Leave a Comment