ಶಿವಮೊಗ್ಗ ಪೋಲಿಸರ ವಿಶೇಷ ಕಾರ್ಯಾಚರಣೆ :ಮೀಟರ್ ಅಳವಡಿಸಿಕೊಳ್ಳದೇ ಇರುವ ಆಟೋಗಳ ಸೀಜ್- ದಂಡ ವಸೂಲಿ
ಶಿವಮೊಗ್ಗ: ಈ ದಿನ ದಿನಾಂಕಃ 23-05-2023 ರಂದು ಸಂಜೆ *ಶ್ರೀಮತಿ ಜಯಶ್ರೀ ಮಾನೆ, ಸಿಪಿಐ* ಶಿವಮೊಗ್ಗ ಸಂಚಾರ ವೃತ್ತ ರವರ ನೇತೃತ್ವದಲ್ಲಿ *ಶ್ರೀಮತಿ ಶೈಲಜಾ, ಪಿಎಸ್ಐ ಮತ್ತು ಶ್ರೀ ದೊಡ್ಡಮನಿ, ಪಿಎಸ್ಐ* ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸ್ ಠಾಣೆ ಹಾಗೂ ಸಿಬ್ಬಂಧಿಗಳ ತಂಡವು ವಿಶೇಷ ಕಾರ್ಯಾಚರಣೆ ನಡೆಸಿ *ಶಿವಮೊಗ್ಗ ನಗರದಲ್ಲಿ ಮೀಟರ್ ಅಳವಡಿಸಿಕೊಳ್ಳದೇ, ಎಸ್.ಎಮ್.ಜಿ ನಂಬರ್ ಪಡೆಯದೇ ಮತ್ತು ಸೂಕ್ತ ದಾಖಲಾತಿಗಳಿಲ್ಲದೇ ಚಾಲನೆ ಮಾಡುತ್ತಿದ್ದ ಒಟ್ಟು 50 ಆಟೋಗಳನ್ನು* ವಶಕ್ಕೆ ಪಡೆದು, ದಾಖಲಾತಿಗಳು ಸರಿ ಇದ್ದ ಒಟ್ಟು *08 ಆಟೋಗಳಿಗೆ ಎಸ್.ಎಮ್.ಜಿ ನಂಬರ್ ನೀಡಿದ್ದು, ಸೂಕ್ತ ದಾಖಲಾತಿಗಳು ಇಲ್ಲದ ಒಟ್ಟು 42 ಆಟೋ ಚಾಲಕರು / ಮಾಲೀಕರ ವಿರುದ್ಧ ಐಎಂವಿ ಕಾಯ್ದೆಯಡಿಯಲ್ಲಿ 42 ಪ್ರಕರಣಗಳನ್ನು ದಾಖಲಿಸಿ, ಒಟ್ಟು ರೂ 21,000/- ದಂಡ* ವಿಧಿಸಲಾಗಿರುತ್ತದೆ. *ಆಟೋ ಮೀಟರ್ ಅಳವಡಿಸಿಕೊಳ್ಳದೇ ಇದ್ದ ಮತ್ತು ಎಸ್.ಎಮ್.ಜಿ ನಂಬರ್ ಪಡೆಯದೇ* ಇದ್ದ ಆಟೋ ಚಾಲಕರುಗಳಿಗೆ ಇನ್ನು 01 ವಾರದ ಒಳಗಾಗಿ ಕಡ್ಡಾಯವಾಗಿ ಮೀಟರ್ ಅಳವಡಿಸಿಕೊಳ್ಳುವಂತೆ ಮತ್ತು ಎಸ್.ಎಮ್.ಜಿ ನಂಬರ್ ಅನ್ನು ಪಡೆದು ಅಳವಡಿಸಿಕೊಳ್ಳುವಂತೆ *ಸೂಚನೆ ನೀಡಿದ್ದು, ತಪ್ಪಿದ್ದಲ್ಲಿ ಅಂತಹವರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ* ನೀಡಲಾಗಿರುತ್ತದೆ.
Leave a Comment