ಎಸ್.ಟಿ.ಘಟಕದ ವಾಲ್ಮೀಕಿ ಸಮಾಜದ ಬೆಂಬಲ ಜೆಡಿಎಸ್ ಪಕ್ಷ ದ ಅಭ್ಯರ್ಥಿಗಳಿಗೆ: ಮುಖಂಡ ಹೆಚ್.ಆರ್.ಹನುಮಂತಪ್ಪ
ಶಿವಮೊಗ್ಗ: ಎಸ್.ಟಿ.ಘಟಕದ ವಾಲ್ಮೀಕಿ ಸಮಾಜದ ಬೆಂಬಲ ಜೆಡಿಎಸ್ ಪಕ್ಷ ದ ಅಭ್ಯರ್ಥಿಗಳಿಗೆ ನೀಡಲು ನಿರ್ಧರಿಸಲಾಗಿದೆ. ನಮ್ಮ ವಾಲ್ಮೀಕಿ ಸಮಾಜಕ್ಕೆ ಹೆಚ್.ಡಿ. ಕುಮಾರ್ ಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದು ವಾಲ್ಮೀಕಿ ಸಮಾಜದ ಮುಖಂಡರಾದ ಹೆಚ್.ಆರ್.ಹನುಮಂತಪ್ಪ ಹೇಳಿದರು.
ಅವರು ಇಂದು ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ಅದರಲ್ಲೂ ವಿಶೇಷವಾಗಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಶಾರದಾಪೂರ್ಯನಾಯ್ಕ ರವರಿಗೆ ವಾಲ್ಮೀಕಿ ಸಮಾಜ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಅವರ ಜೋತೆಗೆ ನಿಂತು ಕೆಲಸ ಮಾಡುತ್ತಿದೆ. ಶಾರದಾ ಪೂರ್ಯನಾಯ್ಕರವರ ವ್ಯಕ್ತಿತ್ವ ಮತ್ತು ಅವರ ಕಾರ್ಯವನ್ನು ಮೆಚ್ಚಿ ವಾಲ್ಮೀಕಿ ಸಮಾಜದ ಎಲ್ಲಾ ಮುಖಂಡರು ಮತ್ತು ಕಾರ್ಯಕರ್ತರು ಒಟ್ಟಾಗಿ ಅವರ ಗೆಲುವಿಗೆ ವಾಲ್ಮೀಕಿ ಸಮಾಜ ಒಂದಾಗಿ ಕೆಲಸ ಮಾಡುತ್ತಿದೆ.ಅವರ ಗೆಲುವು ನಿಶ್ಚಿತ ಎಂದರು.
ಅದೇ ರೀತಿಯಲ್ಲಿ ಶಿವಮೊಗ್ಗ ಕ್ಷೇತ್ರದ ಎಲ್ಲಾ ಜೆಡಿಎಸ್ ಅಭ್ಯರ್ಥಿಗಳಿಗೆ ನಮ್ಮ ವಾಲ್ಮೀಕಿ ಸಮಾಜದ ಬೆಂಬಲ ಸೂಚಿಸಲಾಗಿದೆ ಆಗಾಗಿ ವಾಲ್ಮೀಕಿ ಸಮಾಜ ಭಾಂದವರು ಜೆಡಿಎಸ್ ಪಕ್ಷದ ಅಭ್ಯರ್ಥಿಗಳಿಗೆ ಮತಹಾಕುವುದರ ಮೂಲಕ ಅವರುಗಳನ್ನು ಗೆಲ್ಲಿಸಬೇಕೆಂದು ವಿನಂತಿಸಿದರು.
ಈ ಸುದ್ದಿ ಗೋಷ್ಠಿಯ ಸಂದರ್ಭದಲ್ಲಿ ಕರಿಎಲ್ಲಪ್ಪ,ಬಸವರಾಜ್,ರಘು,ರವಿಕುಮಾರ್,ಪುರುಷೋತ್ತಮ, ಗಣೇಶ್, ವೆಂಕಟೇಶ ಮತ್ತಿತರರು ಹಾಜರಿದ್ದರು.
Leave a Comment