ಸಂಘಟಿತ ಹೋರಾಟದಿಂದ ನಮಗೆ ಗೆಲುವು ಆಗಿದೆ- ಸಂತೋಷ ತಂದಿದೆ: ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ನೂತನ ಬಿಜೆಪಿ ಶಾಸಕ ಚನ್ನಬಸಪ್ಪ
ಶಿವಮೊಗ್ಗ: ಕೇವಲ 21 ದಿನಗಳಲ್ಲಿ ಚುನಾವಣೆ ಮುಗಿಸಿ ಶಾಸಕನಾಗಿ ಆಯ್ಕೆಯಾಗಿದ್ದೆನೆ. ಮತದಾರ ಪ್ರಭುಗಳು ಭಾರತೀಯ ಜನತಾಪಾರ್ಟಿಗೆ ಮತದಾನ ಕೊಟ್ಟು ನನ್ನನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲುವು ತಂದು ಕೊಟ್ಟಿದ್ದಾರೆ. ಅವರಿಗೆ ಧನ್ಯವಾದಗಳನ್ನು ತಿಳಿಸಿದರು.ಸಂಘಟಿತ ಹೋರಾಟದಿಂದ ನಮಗೆ ಗೆಲುವು ಆಗಿದೆ ಎಂದು ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ನೂತನ ಬಿಜೆಪಿ ಶಾಸಕ ಚನ್ನಬಸಪ್ಪ ಹೇಳಿದರು.
ನಮ್ಮದು ಅಭಿವೃದ್ಧಿ ಯೇ ಮಂತ್ರ.27 ವಿಭಾಗದಲ್ಲಿನ ಎಲ್ಲಾ ಕಾರ್ಯಕರ್ತರು ಮತ್ತು ನಾಯಕರು ವಿಶೇಷವಾಗಿ ಕೆಲಸ ಮಾಡಿದ್ದರಿಂದ ಚುನಾವಣೆಗೆ ಶಕ್ತಿ ತುಂಬಿದ್ದಾರೆ. ಎಂ.ಪಿ.ರವರು ಸಹ ವಿಶೇಷವಾಗಿ ಸಲಹೆ ಸೂಚನೆಗಳನ್ನು ನೀಡುವುದರ ಮೂಲಕ ನನ್ನ ಗೆಲುವಿಗೆ ಕಾರಣ ಕರ್ತರಾಗಿದ್ದಾರೆ ಎಂದರು.
ಶಿವಮೊಗ್ಗ ಕ್ಷೇತ್ರದ ಜನರು ಏನು ಸಮಸ್ಯೆಗಳನ್ನು ನಾನು ಆಲಿಸಿದ್ದೆನೆ. ಅವರ ಸಲಹೆ ಸಹಕಾರ ಪಡೆದು ನಾನು ಸ್ವಯಂ ಸೇವಕನಾಗಿ ಕೆಲಸ ಮಾಡುತ್ತೆನೆ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಶ್ರಮಿಸುವುದಾಗಿ ಹೇಳಿದರು.
ಒಟ್ಟಾರ ಗೆಲುವು ಸಂತೋಷ ತಂದಿದೆ. ಶಿವಮೊಗ್ಗ ವನ್ನು ಸಾಂಸ್ಕೃತಿಕ ಕೇಂದ್ರವಾಗಿ ಅಭಿವೃದ್ಧಿ ಮಾಡಲಾಗುವುದು ಎಂದರು.
ಇಡೀ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದ ಬಿಜೆಪಿ ಇದೀಗ ಇಲ್ಲ.ಅಧಿಕಾರ ಕಳೆದು ಕೊಂಡಿದ್ದೆವೆ. ಮತದಾರರು ಕೊಟ್ಟ ತೀರ್ಪನ್ನು ನಾವು ಸ್ವಾಗತಿಸುತ್ತೆವೆ. ನಾವು ನಮ್ಮ ತಪ್ಪುಗಳನ್ನು ಪರಾಮರ್ಶಿಸಿ ಮುಂದೆ ಹೋಗುತ್ತೆವೆ. ಕಾರ್ಯಕರ್ತರು ಯಾರು ಧೃತಿಗೆಡುವ ಅಗತ್ಯವಿಲ್ಲ ಎಂದರು.
ಕೆಲವರು ಸಂಘಟನೆ ಗೆ ಮತ್ತು ಮುಖಂಡರಿಗೆ ಕೆಟ್ಟ ಹೆಸರು ತರುವ ಕೆಲಸ ಸೋಷಿಯಲ್ ಮೀಡಿಯಾ ಗಳು ಮಾಡುತ್ತಿವೆ. ಸಂತೋಷ್ ಜೀ ಮಾಡುತ್ತಿರುವ ಕಾರ್ಯ ಶ್ಲಾಘನೀಯ. ಅವರು ಪಕ್ಷ ದ್ರೋಹ ಕೆಲಸ ಮಾಡಿಲ್ಲ.ಸಂತೋಷ್ ಜೀ ಸಾವಿರಾರು ಕಾರ್ಯಕರ್ತರನ್ನು ಬೆಳೆಸಿದ್ದಾರೆ. ನಮ್ಮ ಪಕ್ಷದವರು ಸಹ ಟೀಕೆ ಮಾಡಬಾರದು. ಪಕ್ಷದ ಸೋಲಿಗೆ ಸಂತೋಷಜೀ ಕಾರಣಕರ್ತರಲ್ಲ.ಮತದಾರರು ನಮ್ಮನ್ನು ತಿರಸ್ಕರಿಸಿದ್ದಾರೆಯೇ ಹೊರತು ಸಂತೋಷ್ ಜೀ ಅಲ್ಲ. ಸಂಘಟನೆಯ ಪ್ರಮುಖರನ್ನ ಪ್ತಶ್ನೆ ಮಾಡುವ ಅವಶ್ಯಕತೆ ಇಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಗರಾಧ್ಯಕ್ಷ ಜಗದೀಶ್, ಪ್ರಮುಖರಾದ ನಾಗರಾಜ್, ಚಂದ್ರಶೇಖರ್, ಕೆ.ವಿ. ಅಣ್ಣಪ್ಪ,. ಬಾಲು, ಮೋಹನ್ ರೆಡ್ಡಿ,ನಾವಿಕ ಮಂಜುನಾಥ್ ಇದ್ದರು.
Leave a Comment