ದೇವಾಂಗ ಸಮಾಜದ ಬೆಂಬಲ ಬಿಜೆಪಿ ಅಭ್ಯರ್ಥಿಗಳಿಗೆ: ಸಮಾಜದ ಮುಖಂಡರಾದ ಟಿ.ರಾಜೇಶ್

ಶಿವಮೊಗ್ಗ:  ದೇವಾಂಗ ಸಮಾಜದ ಬೆಂಬಲ ಬಿಜೆಪಿ ಪಕ್ಷದ ಅಭ್ಯರ್ಥಿ ಗೆ ನೀಡಲಾಗುತ್ತದೆ. ಬಿಜೆಪಿ ಸರ್ಕಾರ ದೇವಾಂಗ ಸಮಾಜಕ್ಕೆ ಹಲವಾರು ಕೊಡುಗೆ ನೀಡಿದೆ.ಆಗಾಗಿ ಶಿವಮೊಗ್ಗ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ ರವರಿಗೆ ಮತ ಹಾಕಲು ನಿರ್ಧರಿಸಲಾಗಿದೆ. ಅವರ ಗೆಲುವಿಗೆ ಶ್ರಮಿಸಲಾಗುವುದು ಎಂದು ದೇವಾಂಗ ಸಮಾಜದ ಮುಖಂಡರಾದ ಟಿ.ರಾಜೇಶ್ ಹೇಳಿದರು.

ಇಂದು ಬೆಳಿಗ್ಗೆ ನಗರದ ಹೊಟೆಲ್ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ನೋಂದಣಿಯಾದ  ನೇಕಾರರಿಗೆ ಸಮ್ಮಾನ್ ಯೋಜನೆ ಯಲ್ಲಿ ವರ್ಷಕ್ಕೆ ರೂ. 5000/- ಕೊಟ್ಟಿದೆ.ಬಡ್ಡಿರಹಿತ ಸಾಲ ಕೂಡ ಕೊಡಲಾಗಿದೆ. ಬಿಜೆಪಿ ಸರ್ಕಾರ ನೇಕಾರರ ಸಮಸ್ಯೆ ಗಳಿಗೆ ಸ್ಪಂದಿಸಿದೆ ಎಂದರು‌

ಶಿವಮೊಗ್ಗದಲ್ಲಿ ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳಿಗೆ ಹಾಸ್ಟೆಲ್ ನಿರ್ಮಾಣ ಮಾಡಲಾಗಿದೆ. ಸಮುದಾಯಭವನಕ್ಕೆ 2 ಕೋಟಿ ಮಂಜೂರು ಮಾಡಲಾಗಿದೆ. ವೃದ್ದಾಶ್ರಮ ಕಟ್ಟಲಾಗಿದೆ ಎಂದರು.

 ರಾಜ್ಯದಲ್ಲಿ 35 ಲಕ್ಷ ಜನಸಂಖ್ಯೆ ಹೊಂದಿರುವ ಸಮಾಜ ,ನಮ್ಮ ಸಮಾಜದ ಬೆಂಬಲ ಶಿವಮೊಗ್ಗ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ ರವರಿಗೆ ದೇವಾಂಗ ಸಮಾಜ ಭಾಂದವರು ಎಲ್ಲರೂ  ಬಿಜೆಪಿಗೆ ಮತ ಹಾಕಬೇಕು ಎಂದು ವಿನಂತಿಮಾಡಿದರು.

ಸುದ್ದಿ ಗೋಷ್ಟಿ ಸಂದರ್ಭದಲ್ಲಿ ಪರಶುರಾಮಪ್ಪ,ನರಸಿಂಹಪ್ಪ,ಜಯಮ್ಮ,ಪಾರ್ತಿಪನ್ ಮತ್ತಿತರರು ಹಾಜರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.