ಪರಿಸರ ಮತ್ತು ಜನಸ್ನೇಹಿ, ಅಭಿವೃದ್ಧಿ ಪರ ಕಾರ್ಯಕ್ಕೆ ಒತ್ತು: ಶಿವಮೊಗ್ಗ ನಗರದ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ

ಶಿವಮೊಗ್ಗ:ಪರಿಸರ ಮತ್ತು ಜನಸ್ನೇಹಿ, ಅಭಿವೃದ್ಧಿ ಪರ ಆಡಳಿತಕ್ಕೆ,ತುಂಗಾ ನದಿ ಮಲೀನದ ಬಗ್ಗೆ, ಶುದ್ದ ತುಂಗಾ ನದಿ ಮಾಡುವ ಪ್ರಯತ್ನಕ್ಕೆ ಒತ್ತು ನೀಡಲಾಗುತ್ತದೆ ಎಂದು ಶಿವಮೊಗ್ಗ ನಗರದ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ ಹೇಳಿದರು.

ಇಂದು ಶಿವಮೊಗ್ಗ ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಿದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಭಾರತೀಯ  ಜನಸಂಘ ಒಂದು ಉದ್ದೇಶಕ್ಕಾಗಿ ಶುರುವಾಯಿತು. ಬೇರೆ ಪಕ್ಷಕ್ಕೂ ನಮ್ಮ ಪಕ್ಷಕ್ಕೂ ಬಹಳ ವ್ಯತ್ಯಾಸ ಇದೆ.ನಮ್ಮ ಪಕ್ಷಕ್ಕೆ  ದೇಶ ಮೊದಲು. ನಮ್ಮದು ಕಾರ್ಯಕರ್ತರ ಆಧಾರಿತವಾದ ಪಕ್ಷ ಎಂದರು.

 ಪಕ್ಷ  ಮತ್ತು ಸಂಘಟನೆಯ ಪ್ರಮುಖ ಕಾರ್ಯಕರ್ತರಿಗೆ ಸುಮಾರು 76 ಹೊಸ ಮುಖಗಳಿಗೆ ಈ ಬಾರಿಯ ಚುನಾವಣೆಗೆ  ನಿಲ್ಲಲು ಅಭ್ಯರ್ಥಿ ಗಳಿಗೆ ಅವಕಾಶ ಮಾಡಿಕೊಟ್ಟಿದೆ. 

ಶಿವಮೊಗ್ಗ ಸಾಂಸ್ಕೃತಿಕ ನಗರ ಶಿವಮೊಗ್ಗದ ಜನರು ಶಾಂತಿ ಪ್ರಿಯರು,ಗಣೇಶೋತ್ಸವ ಸಂದರ್ಭದಲ್ಲಿ ಅನೇಕ ಗಲಾಟೆಯಾಗಿದ್ದು, ಅದು ಕೋಮು ಗಲಭೆ  ಅಲ್ಲ.ಯಾರದು ಬೇಳೆ ಬೇಯಿಸಿ ಕೊಳ್ಳುವ ಸಲುವಾಗಿ ಗಲಾಟೆ ನಡೆದಿದೆ.

ಹಿಂದೂ ಸಮಾಜೋತ್ಸವದ ಸಂದರ್ಭದಲ್ಲಿ ಮಾತ್ರ ಕೋಮು ಗಲಭೆ ನಡೆದಿದೆ.ಕಾಂಗ್ರೆಸ್ ಸುಳ್ಳು ಪ್ರಚಾರ ಮಾಡುತ್ತಿದೆ.

ಬಿಜೆಪಿ ಮತ್ತು ಸಂಘಟನೆಯ ಜೊತೆಗೆ ಅನೇಕ ಮುಸ್ಲಿಂ ಭಾಂದವರು ಇದ್ದಾರೆ. ಎಲ್ಲಾ ಮುಸ್ಲಿಮರು ಭಯೋತ್ಪಾದಕರು ಅಲ್ಲ.ಎಲ್ಲರೂ ಭಾರತೀಯರೇ..

 ಶಿವಮೊಗ್ಗದಲ್ಲಿನ ಎಲ್ಲಾ ನಾಗರೀಕರ ಸಲಹೆ ಸಹಕಾರ ಪಡೆದು ಶಿವಮೊಗ್ಗ ಅಭಿವೃದ್ಧಿ ಮಾಡಲು ಏನು ಕೆಲಸ ಆಗಬೇಕು ಅದಕ್ಕೆ ಪೂರಕವಾಗಿ ಪ್ರಯತ್ನಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಪ್ರೆಸ್‌ ಟ್ರಸ್ಟ್ ಅದ್ಯಕ್ಷ ಮಂಜುನಾಥ್, ಕಾರ್ಯದರ್ಶಿ ನಾಗರಾಜ್ ನೇರಿಗೆ, ಕಾರ್ಯನಿರತ ಪತ್ರಕರ್ತರ ಸಂಘದ ಅದ್ಯಕ್ಷ ಗೋಪಾಲ್ ಯಡಗೇರೆ,ಕಾರ್ಯದರ್ಶಿ ಸಂತೋಷ್ ಕಾಚಿನಕಟ್ಟೆ ಹಾಜರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.