ಅಭಿವೃದ್ಧಿ ಯೇ ಮೂಲ ಮಂತ್ರ ಮಾದರಿ ಹಳ್ಳಿಯಾಗಿ ಪರಿವರ್ತನೆ ಮಾಡಲು ಬಿಜೆಪಿಗೆ ಮತ ನೀಡಿ:ಶಿ.ಗ್ರಾ.ಬಿಜೆಪಿ ಅಭ್ಯರ್ಥಿ ಅಶೋಕನಾಯ್ಕ

ಶಿವಮೊಗ್ಗ:  5 ವರ್ಷಗಳಲ್ಲಿ ಪಾರದರ್ಶಕವಾದ ಕೆಲಸವನ್ನು ಗ್ರಾಮಾಂತರ ಕ್ಷೇತ್ರದಲ್ಲಿ ಮಾಡಿದ್ದೆನೆ. ಪ್ರತಿ ಹಳ್ಳಿಗೂ 30 ಕೋಟಿಗೂ ಅಧಿಕ ಅನುದಾನ ಬಿಡುಗಡೆ ಮಾಡು ಅಭಿವೃದ್ಧಿ ಕೆಲಸ ಮಾಡಿದ್ದೆನೆ. ಅಭಿವೃದ್ಧಿ ಯೇ ಮೂಲ ಮಂತ್ರ, ಮಾದರಿ ಹಳ್ಳಿ ಯಾಗಿ ಪರಿವರ್ತನೆ ಮಾಡಲು ಬಿಜೆಪಿ ಗೆ ಮತ ನೀಡಿ ಎಂದು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಶೋಕನಾಯ್ಜ ಹೇಳಿದರು.ಇಂದು ಬೆಳಿಗ್ಗೆ ಪ್ರೆಸ್ ಟ್ರಸ್ಟ್ ಮತ್ತು ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಪತ್ರಿಕಾ ಭವನದಲ್ಲಿ ಆಯೋಜಿಸಿದ ಪತ್ರಿಕಾ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಪ್ರತಿಹಳ್ಳಿಯಲ್ಲಿ ನನಗೆ ಅಭೂತಪೂರ್ವ ಬೆಂಬಲ ಸಿಗುತ್ತಾ ಇದೆ.ಪ್ರದಾನಿ ಮೋದಿಯವರು ದೇಶಕ್ಕಾಗಿ ಮಾಡಿರುವ ಕಾರ್ಯವನ್ನು ಅಭಿವೃದ್ಧಿ ಕಾರ್ಯಕ್ರಮ ವನ್ನು ಜನರು ಮೆಚ್ಚಿದ್ದಾರೆ. ಅದೇ ರೀತಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರವರು ರಾಜ್ಯದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯವನ್ನು ಜನರು ನೋಡಿದ್ದಾರೆ.

ಆಗಾಗಿ ಒಟ್ಟಾರೆ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತ್ತೊಮ್ಮೆ ಬಿಜೆಪಿ ಪಕ್ಷಕ್ಕೆ ಜನರು ಆಶೀರ್ವಾದ ಮಾಡಲಿದ್ದಾರೆ. ನಾನು 25 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದೆನೆ ಎಂದರು.

ಬಣಜಾರ್ ಸಮುದಾಯದ ಒಳ ಮೀಸಲಾತಿ ಗೊಂದಲ ಏನು ಇಲ್ಲ. ಕೆಲವು ವ್ಯಕ್ತಿ ಗಳು ಮೀಸಲಾತಿ ಗೊಂದಲವಿದೆ ಎಂದು ಷಡ್ಯಂತ್ರ ಮಾಡಿದ್ದರಿಂದ, ಗೊಂದಲ ಸೃಷ್ಟಿಯಾಗಿದೆ. ಬಣಜಾರ್ ಸಮುದಾಯ ಬಿಜೆಪಿ ಜೊತೆಯಲ್ಲಿ ಇದೆ ಎಂದರು.

ಈ ಸಂದರ್ಭದಲ್ಲಿ ಪ್ರೆಸ್‌ ಟ್ರಸ್ಟ್ ಅದ್ಯಕ್ಷ ಮಂಜುನಾಥ್, ಕಾರ್ಯದರ್ಶಿ ನಾಗರಾಜ್ ನೇರಿಗೆ, ಕಾರ್ಯನಿರತ ಪತ್ರಕರ್ತರ ಸಂಘದ ಅದ್ಯಕ್ಷ ಗೋಪಾಲ್ ಯಡಗೇರೆ,ಕಾರ್ಯದರ್ಶಿ ಸಂತೋಷ್ ಕಾಚಿನಕಟ್ಟೆ ಹಾಜರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.