ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತಗಟ್ಟೆ ಸಂಖ್ಯೆ 242 ಕ್ಕೆ ಶೃಂಗಾರ...
ಹೊಸನಗರ: " ಮಲೆನಾಡು ಅಂದರೆ ಸದಾ ಹಚ್ಚ ಹಸಿರು ದಟ್ಟ ಕಾನನ" ನಾಳೆ ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಹೊಸನಗರ ತಾಲೂಕಿನ ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ ಸಂಖ್ಯೆ 242 ಕ್ಕೆ ಸ್ಥಳಿಯ ಆಡಳಿತದಿಂದ ಮಲೆನಾಡಿನ ಭಾಗದಲ್ಲಿ ಶುಭ ಸಮಾರಂಭಗಳಲ್ಲಿ ಮನೆಯ ಅಂಗಳದಲ್ಲಿ ಮಾಡಲಾಗುವ ತೆಂಗಿನ ಗರಿ ಮಾವಿನ ಎಲೆಗಳಿಂದ ತೋರಣ, ಮಾವಿನ ಕಾಯಿ, ಬಾಳೆ ಮರ ಮೊದಲಾದವುಗಳಿಂದ ಶೃಂಗಾರಗೊಳಿಸಲಾಗಿದೆ.
ಇದೇ ರೀತಿಯಾಗಿ ಹೊಸನಗರ ತಾಲೂಕಿನ ನಿಟ್ಟೂರು ಗ್ರಾಮ ಪಂಚಾಯತಿಯ ಹಿರಿಯ ಪ್ರಾಥಮಿಕ ಶಾಲೆಯ 242ನೇ ಮತಗಟ್ಟೆಯಲ್ಲಿ ಶಿವಮೊಗ್ಗ ಜಿಲ್ಲೆಯ ಮಲೆನಾಡಿನ ಸಂಪ್ರದಾಯದ ಮತಗಟ್ಟೆ ನಿರ್ಮಾಣ ಮಾಡಲಾಗಿದೆ.
ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಸ್ವೀಪ್ ಸಮಿತಿವತಿಯಿಂದ ಕೆಲ ಊರಿಗಳಲ್ಲಿ ಊರಿನ ಸಂಪ್ರದಾಯದ ಪ್ರಕಾರ ಮತಗಟ್ಟೆ ನಿರ್ಮಾಣ ಹಾಗೂ ಸಖಿ ಮತಗಟ್ಟೆ ನಿರ್ಮಾಣ ಮಾಡಲಾಗಿದೆ,
Leave a Comment