ಶಿವಮೊಗ್ಗದ ಉಪ ವಿಭಾಗಕ್ಕೆ ನೂತನ 10 ಹವಾ ನಿಯಂತ್ರಿತ ಇ-ಬಸ್ಸುಗಳ ಹಂಚಿಕೆ- ಸಂಚಾರ ಪ್ರಾರಂಭ
ಶಿವಮೊಗ್ಗ:
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಸುಸಜ್ಜಿತವಾದ ನೂತನ ಹವಾ ನಿಯಂತ್ರಿತ 10 ಇ-ಬಸ್ಸುಗಳನ್ನು ಶಿವಮೊಗ್ಗ ಉಪ ವಿಭಾಗಕ್ಕೆ ಹಂಚಿಕೆ ಮಾಡಲಾಗಿದೆ.
ದಿನಾಂಕ:27.05.2023ರಂದು ಒಂದು ನೂತನ ಹವಾ ನಿಯಂತ್ರಿತ ಇ-ಬಸ್ಸನ್ನು ಶಿವಮೊಗ್ಗ-ಬೆಂಗಳೂರು ಮಾರ್ಗದಲ್ಲಿ ಪ್ರಾರಂಭಿಸಲಾಗಿದೆ.
“ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಸುಸರ್ಜಿತವಾದ ನೂತನ ಹವಾ ನಿಯಂತ್ರಿತ 10 ಇ-ಬಸ್ಸುಗಳನ್ನು ಶಿವಮೊಗ್ಗ ವಿಭಾಗಕ್ಕೆ ಹಂಚಿಕೆ ಮಾಡಲಾಗಿದೆ.
ದಿನಾಂಕ:27.05.2023 ರಂದು ಒಂದು ನೂತನ ಹವಾ ನಿಯಂತ್ರಿತ ಇ-ಬಸ್ಸನ್ನು ಶಿವಮೊಗ್ಗ-ಬೆಂಗಳೂರು ಮಾರ್ಗದಲ್ಲಿ ಪ್ರಾರಂಭಿಸಲಾಗಿದೆ.
ಮುಂದಿನ ದಿನಗಳಲ್ಲಿ ಉಳಿದ 9 ಹವಾ ನಿಯಂತ್ರಿತ ಇ-ಬಸ್ಸುಗಳನ್ನು ಶಿವಮೊಗ್ಗ-ಬೆಂಗಳೂರು ಮಾರ್ಗದಲ್ಲಿ ಶೀಘ್ರದಲ್ಲಿ ಪ್ರಾರಂಭಿಸಲಾಗುವುದು.
ಶಿವಮೊಗ್ಗ-ಬೆಂಗಳೂರು ಮಾರ್ಗದಲ್ಲಿ ಇ-ಬಸ್ಸಿನಲ್ಲಿ ಪ್ರಯಾಣ ದರ ರೂ.600/-ಇರುತ್ತದೆ. ಪ್ರಯಾಣಿಕರಿಗೆ ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆ ಲಭ್ಯವಿದ್ದು, ನಿಗಮದ ಅವತಾರ್ ವೆಬ್‌ಸೈಟ್‌ನಲ್ಲ (https://awatar.ksrtc.in)ಲಭ್ಯವಿದ್ದು, ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಲು ವಿಭಾಗೀಯ ನಿಯಂತ್ರಣಾಧಿಕಾರಿ, ಕ.ರಾ.ರ.ಸಾ.ನಿಗಮ, ಶಿವಮೊಗ್ಗ ವಿಭಾಗ ಇವರು ಕೋರಿದ್ದಾರೆ.
Leave a Comment