ಬಿಜೆಪಿಗೆ ಗುಡ್ ಬೈ ಹೇಳಿದ ಆಯನೂರು ಮಂಜುನಾಥ್ ಇಂದು MLC ಸ್ಥಾನಕ್ಕೆ ರಾಜಿನಾಮೆ, ನಾಳೆ ನಾಮಪತ್ರ ಸಲ್ಲಿಕೆ

ಶಿವಮೊಗ್ಗ ಏ.19: ಬಹು ದಿನಗಳಿಂದ  ಆಯನೂರು ಮಂಜುನಾಥ್ ನಡೆ ಬಗ್ಗೆ ಕಾತುರರಾಗಿದ್ದ ಶಿವಮೊಗ್ಗ ಜನತೆಗೆ ಇಂದು ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡಿ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಸೂಚನೆ ನೀಡಿದ್ದಾರೆ. ಬಿಜೆಪಿಗೆ ಗುಡ್ ಬೈ ಹೇಳಿದ್ದಾರೆ.

ಅವರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಯನೂರು ಮಂಜುನಾಥ್ ಅವರು, ಇಂದೇ  ಹುಬ್ಬಳ್ಳಿಗೆ ತೆರಳಿ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ. ಅಲ್ಲದೆ ಚುನಾವಣೆಗೂ ಸ್ಪರ್ಧಿಸುವುದಾಗಿ ಘೋಷಿಸಿದ್ದು ಯಾವ ಪಕ್ಷ ಎಂಬ ಗುಟ್ಟು ಬಿಟ್ಟು ಕೊಟ್ಟಿಲ್ಲ… ಇಂದೇ ಯಾವ ಪಕ್ಷ ಎಂಬುದು ತಿಳಿಸುವುದಾಗಿ ಹೇಳಿದರು.

ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದೇನೆ. ಇವತ್ತು ಮಧ್ಯಾಹ್ನ ಸಭಾಪತಿ ಬಸವರಾಜ ಹೊರಟ್ಟಿ ಅವರು ಸಮಯ ನೀಡಿದ್ದಾರೆ. ಹುಬ್ಬಳ್ಳಿಗೆ ತೆರಳಿ ರಾಜೀನಾಮೆ ನೀಡಲಿದ್ದೇನೆ ಎಂದರು ತಿಳಿಸಿದರು.

ರಾಜೀನಾಮೆ ಸಲ್ಲಿಸಲು ಪದವೀಧರ ಕ್ಷೇತ್ರದ ಮತದಾರರ ಸಹಮತಿಯನ್ನು  ಪಡೆದಿದ್ದೇನೆ. ಅವರೆಲ್ಲರೂ ಮುಂದಿನ ದಿನಗಳಲ್ಲಿ ನನ್ನೊಡನೆ ನಿಲ್ಲುವ ವಿಶ್ವಾಸವಿದೆ ಎಂದರು.

ಈ ಹಿಂದೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದೆ.  ಆ ಮಾತಿಗೆ  ಬದ್ಧನಾಗಿದ್ದೇನೆ. ಕಾರ್ಮಿಕ,ಶಿಕ್ಷಕರು, ಎನ್ ಪಿ ಎಸ್,  ಒಪಿಎಸ್ ವಿಷಯದಲ್ಲಿ ಶಕ್ತಿ ಮೀರಿ ಮೇಲ್ಮನೆಗೆ ಪ್ರಸ್ತಾವನೆ ಮಾಡಿದ್ದೇನೆ. ಫಲಿತಾಂಶ ಮಾತ್ರ ಶೂನ್ಯ ಎಂದರು.
ಆದರೆ ಬಿಜೆಪಿ  ಹೈಕಮಾಂಡ್ ಇದುವರೆಗೂ ಯಾರಿಗೂ ಶಿವಮೊಗ್ಗ ಕ್ಷೇತ್ರದಿಂದ ಟಿಕೆಟ್ ಘೋಷಣೆ ಮಾಡದೇ ಕುತೂಹಲದಲ್ಲಿ ಇರಿಸಿದೆ. ಹೀಗಾಗಿ ಅಂತಿಮವಾಗಿ ಚುನಾವಣಾ ಅಖಾಡಕ್ಕೆ  ಮುಂದಾಗಿರುವ ಆಯನೂರು ಮಂಜುನಾಥ್ ಬಿಜೆಪಿಗೆ ಗುಡ್ ಬೈ ಹೇಳಿ, ಮತ್ತೆ ಕೆ.ಎಸ್. ಈಶ್ವರಪ್ಪ ವಿರುದ್ದ ಗುಡುಗಿ ನಾಳೆ ಬಹುತೇಕ ಜೆಡಿಎಸ್ ಅಭ್ಯರ್ಥಿ ಯಾಗಿ ನಾಮಪತ್ರ ಸಲ್ಲಿಸುವುದಾಗಿ ತಿಳಿದುಬಂದಿದೆ.
 ಶಿವಮೊಗ್ಗ ಜಿಲ್ಲಾ  ಜೆಡಿಎಸ್ ನಾಯಕರ ದೌಡು...
ಆಯನೂರು ಮಂಜುನಾಥ್ ಬಿಜೆಪಿಗೆ ಗುಡ್ ಬೈ ಹೇಳುತ್ತಿದ್ದಂತೆ, ಶಿವಮೊಗ್ಗ ಜಿಲ್ಲಾ ಜೆಡಿಎಸ್ ಮುಖಂಡರಾದ ಕಡಿದಾಳ್ ಗೋಪಾಲ್ ಮತ್ತು ಅವರ ತಂಡ ಬೇಟಿಯಾಗಿ ಮಾತುಕತೆ ನಡೆಸಿದರು. ಅದೇ ರೀತಿ ಕಾಂಗ್ರೆಸ್ ನ ಮುಖಂಡರಾದ ವೈ.ಹೆಚ್.ನಾಗರಾಜ್ ಮತ್ತು ಅವರ ಬೆಂಬಲಿಗರು ಹಾಗು ಕೆಲವು ಲಿಂಗಾಯತ ನಾಯಕರು ಆಯನೂರು ಬೇಟಿ ಮಾಡಲು ಬಂದಿದ್ದು ವಿಶೇಷ ಎನ್ನಿಸಿದೆ.ಒಟ್ಟಿನಲ್ಲಿ ಆಯನೂರು ಕಚೇರಿಗೆ ಇದೀಗ ಜನಸಂದಣಿ ಜಾಸ್ತಿಯಾಗಿದೆ.

ಇದುವರೆಗೂ ಶಿವಮೊಗ್ಗ ಕ್ಷೇತ್ರದಿಂದ ಬಿಜೆಪಿ ಯಿಂದ ಯಾರು ಅಭ್ಯರ್ಥಿ ಎಂಬುದು ನಿಗೂಡವಾಗಿದೆ.ಇಂದು ಮಧ್ಯಾಹ್ನದ ಒಳಗೆ ಬಿಜೆಪಿ ಅಭ್ಯರ್ಥಿ ಹೆಸರು ಪ್ರಕಟವಾಗುವ ಸಾದ್ಯತೆ ಇದೆ.

ಒಟ್ಟಿನಲ್ಲಿ ದಿನದಿಂದ ದಿನಕ್ಕೆ ಶಿವಮೊಗ್ಗ ಕ್ಷೇತ್ರದ ಆಕಾಂಕ್ಷಿಗಳು ಅಭ್ಯರ್ಥಿ ಗಳ ನಡೆ ಕುತೂಹಲ ಕೆರಳಿಸಿದೆ.ಮುಂದೇನಾಗುವುದು ಕಾದು ನೋಡಬೇಕು...

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.