ಚುನಾವಣೆ ಹಿನ್ನೆಲೆ ,ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸ್ ಅಧಿಕಾರಿ, ಸಿಬ್ಬಂದಿ ಮತ್ತು CISF, KSRP ರೂಟ್ ಮಾರ್ಚ್
ಶಿವಮೊಗ್ಗ: ಕರ್ನಾಟಕ ರಾಜ್ಯ ವಿಧಾನ ಸಭಾ ಸಾರ್ವತ್ರಿಕ ಚುನಾವಣೆ – 2023ರ ಹಿನ್ನೆಲೆಯಲ್ಲಿ, ಈ ದಿನ ದಿನಾಂಕಃ 21-04-2023 ರಂದು *ಶ್ರೀ ವಸಂತ ಕುಮಾರ್, ಕು. ಪಿಎಸ್ಐ, ಉಮಾ ಪಾಟೀಲ್, ಪಿಎಸ್ಐ ಮತ್ತು ಶ್ರೀ ದೇವರಾಜ್ ಸಾಳೇರ್, ಪಿಎಸ್ಐ, ದೊಡ್ಡಪೇಟೆ* ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ, *ರೂಟ್ ಮಾರ್ಚ್ (ಪಥಸಂಚಲನ)* ಹಮ್ಮಿಕೊಳ್ಳಲಾಗಿತ್ತು.
ಸದರಿ ಪಥಸಂಚಲನವನ್ನು ಶಿವಮೊಗ್ಗ ನಗರದ *ದೊಡ್ಡಪೇಟೆ ಪೊಲೀಸ್ ಠಾಣೆಯಿಂದ ಪ್ರಾರಂಭಿಸಿ, ಟೆಂಫೋ ಸ್ಟ್ಯಾಂಡ್, ಆರ್,ಎಂ,ಎಲ್ ನಗರ, ಬುದ್ದಾ ನಗರ, ಮಂಜುನಾಥ ಬಡಾವಣೆ, ಅಣ್ಣಾನಗರ ಚಾನಲ್, ಮಿಳ್ಳಘಟ್ಟದಿಂದ ದೊಡ್ಡಪೇಟೆ ಪೊಲೀಸ್* ಠಾಣೆಗೆ ಬಂದು ಮುಕ್ತಾಯ ಮಾಡಲಾಗಿರುತ್ತದೆ. *ಸದರಿ ರೂಟ್ ಮಾರ್ಚ್ ನಲ್ಲಿ CISF, KSRP ಮತ್ತು ದೊಡ್ಡಪೇಟೆ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂಧಿಗಳು ಭಾಗವಹಿಸಿದ್ದರು*
Leave a Comment