ಶಿವಮೊಗ್ಗ: CEIR ಪೋರ್ಟಲ್ ನ ಸಹಾಯದಿಂದ *ಒಟ್ಟು 101 ಮೊಬೈಲ್ ಫೋನ್ ಗಳ ಪತ್ತೆ

ಶಿವಮೊಗ್ಗ: ಮೊಬೈಲ್ ಫೊನ್ ಗಳು *ಕಳ್ಳತನ/ ದರೋಡೆ/ ಸುಲಿಗೆ/ ಕಳೆದು ಹೋದ* ಸಂದರ್ಭದಲ್ಲಿ,  *ಶೀಘ್ರವಾಗಿ ಪತ್ತೆ ಹಚ್ಚಿ ಮಾಲೀಕರಿಗೆ ಹಿಂದಿರುಗಿಸಲು ಮತ್ತು ಮೊಬೈಲ್ ಗಳು ದುರುಪಯೋಗವಾಗದಂತೆ ತಡೆಗಟ್ಟಲು* ಅನುಕೂಲವಾಗುವ ನಿಟ್ಟಿನಲ್ಲಿ CEIR  (Central Equipment Identity Register) Portal ಅನ್ನು ಅಭಿವೃದ್ಧಿ ಪಡಿಸಲಾಗಿರುತ್ತದೆ. *ಶ್ರೀ ಮಿಥುನ್ ಕುಮಾರ್ ಜಿ.ಕೆ, ಐಪಿಎಸ್* ಮಾನ್ಯ ಪೊಲೀಸ್ ಅಧಿಕ್ಷಕರು, ಶಿವಮೊಗ್ಗ ಜಿಲ್ಲೆ ಮತ್ತು *ಶ್ರೀ ಅನಿಲ್ ಕುಮಾರ್ ಭೂಮರಡ್ಡಿ* ಹೆಚ್ಚುವರಿ ಪೊಲೀಸ್ ಅಧಿಕ್ಷಕರು, ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ,  *ಶ್ರೀ ಪ್ರಭು ಡಿ.ಟಿ.* ಪೊಲೀಸ್  ಉಪಾಧಿಕ್ಷಕರು, ಜಿಲ್ಲಾ ಅಪರಾಧ ದಾಖಲಾತಿ ವಿಭಾಗ, ಶಿವಮೊಗ್ಗ ಜಿಲ್ಲೆ,  ರವರ ಮೇಲ್ವಿಚಾರಣೆಯಲ್ಲಿ, *ಶ್ರೀ, ಸಂತೋಷ ಪಾಟೀಲ* ಪೊಲೀಸ್ ನಿರೀಕ್ಷಕರು, ಸೈಬರ್ ಕ್ರೈಂ ಪೊಲೀಸ್ ಠಾಣೆ ರವರ ನೇತೃತ್ವದ ಸಿಬ್ಬಂದಿಗಳನ್ನೊಳಗೊಂಡ  ತಂಡವು  CEIR (Central Equipment Identity Register) ಪೋರ್ಟಲ್ ನ ಸಹಾಯದಿಂದ *ಒಟ್ಟು 101 ಮೊಬೈಲ್ ಫೋನ್ ಗಳನ್ನು* ಪತ್ತೆ ಮಾಡಿರುತ್ತಾರೆ.  ಈ ದಿನ ದಿನಾಂಕ: 14-04-2023 ರಂದು ಶಿವಮೊಗ್ಗ ನಗರದ ಡಿಎಆರ್  ಪೊಲೀಸ್ ಸಭಾಂಗಣದಲ್ಲಿ *ಮಾನ್ಯ ಪೊಲೀಸ್ ಅಧೀಕ್ಷಕರು* ಶಿವಮೊಗ್ಗ ಜಿಲ್ಲೆ ಮತ್ತು *ಹೆಚ್ಚುವರಿ ಪೊಲೀಸ್ ಅಧೀಕ್ಷಕರು,*  ಶಿವಮೊಗ್ಗ ಜಿಲ್ಲೆ ರವರು ಪತ್ತೆ ಮಾಡಲಾದ ಮೊಬೈಲ್  ಫೊನ್ ಗಳನ್ನು ಮಾಲೀಕರುಗಳಿಗೆ ಹಿಂದಿರುಗಿಸಿದರು. ಸದರಿ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.  *ಸಾರ್ವಜನಿಕರು ತಮ್ಮ ಮೊಬೈಲ್ ಫೋನ್ ಗಳು ಕಳವು/ ದರೋಡೆ/ ಸುಲಿಗೆ/ ಕಳೆದು ಹೋದ ಸಂದರ್ಭದಲ್ಲಿ, CEIR (Central Equipment Identity Register) Portal  ಗೆ ಲಾಗಿನ್ ಆಗಿ, ದೂರನ್ನು ದಾಖಲಿಸಿ ಸದರಿ ಪೋರ್ಟಲ್ ನ ಉಪಯೋಗವನ್ನು ಪಡೆದುಕೊಳ್ಳುವುದು.*

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.