ಶಿವಮೊಗ್ಗ ರಾಗಿಗುಡ್ಡದಲ್ಲಿ ಗಲಾಟೆ: ಮೂವರು ಮೆಗ್ಗಾನ್ ಆಸ್ಪತ್ರೆಗೆ ದಾಖಲು

ಶಿವಮೊಗ್ಗ: ರಾಗಿಗುಡ್ಡದಲ್ಲಿ ಕ್ರಿಕೆಟ್ ಆಟವಾಡುವ ವಿಚಾರದಲ್ಲಿ ಪಿಚ್ ನಲ್ಲಿ ಅನ್ಯಕೋಮಿನ ಯುವಕರು ಆಟವಾಡುತ್ತಿದ್ದು,ನಮಗೆ ಪಿಚ್ ಬಿಟ್ಟುಕೊಡಿ ಎಂದಿದ್ದಾರೆ. ಪಿಚ್ ಬಿಟ್ಟುಕೊಡದ ಹುಡುಗರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದ್ದು ಮೂವರು ಯುವಕರ ಮೇಲೆ ಹಲ್ಲೆ ನಡೆದಿದ್ದು ಮೂವರು ಮೆಗ್ಗಾನ್ ಗೆ ದಾಖಲಾದ ಘಟನೆ ಇಂದು ಸಂಜೆ ನಡೆದಿದೆ.
ಆದರೆ ಕ್ರಿಕೆಟ್ ಆಡುವಾಗ 50 ಕ್ಕೂ ಹೆಚ್ಚು ಜನ ಅನ್ಯಕೋಮಿನ ಯುವಕರು ಬಂದು ದಾಂಧಲೆ ನಡೆಸಿ ಹೊಡೆದಿದ್ದಾರೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.ಗಾಯಗೊಂಡ ಪ್ರದೀಪ್, ಪ್ರವೀಣ್ ಮತ್ತು ಶಬರೀಶ್ ರನ್ನ ಮೆಗ್ಗಾನ್ ಗೆ ದಾಖಲಿಸಲಾಗಿದೆ. ಮಾಹಿತಿ ತಿಳಿದ ಶಿವಮೊಗ್ಗ ನಗರದ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ ( ಚೆನ್ನಿ) ಮೆಗ್ಗಾನ್ ಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಗಾಯಾಳುಗಳ ಆರೋಗ್ಯ ಕ್ಷೇಮ ವಿಚಾರಿಸಿದ್ದಾರೆ.ಶಿವಮೊಗ್ಗ ರಾಗಿಗುಡ್ಡದಲ್ಲಿ ನ ಗಲಾಟೆ ವಿಚರಾದಲ್ಲಿ ಚನ್ನಬಸಪ್ಪ ಏನಂದ್ರು ಕ್ಲಿಕ್ ಮಾಡಿ ವಿಡಿಯೋ ನೋಡಿ

ಹಲ್ಲೆ ಮಾಡಿದವರ ವಿರುದ್ದ ಪೊಲೀಸ್‌ ಇಲಾಖೆ ಸೂಕ್ತವಾದ ಕ್ರಮ ಕೈಗೊಳ್ಳಬೇಕು, ಬಂಧಿಸಬೇಕು. ಮುಂದೇ ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದ್ದಾರೆ.ಗಾಯಳುಗಳ ಜೀವಕ್ಕೆ ಏನು ತೊಂದರೇ ಇಲ್ಲ ಎಂದು ತಿಳಿಸಿದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.