ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಲ್ಲಿ ಮೂವರ ಹೆಸರು ಹೈಕಮಾಂಡ್ ಅಂಗಳದಲ್ಲಿ.....ಯಾರು ಅಂತೀರಾ ನೋಡಿ....

ಶಿವಮೊಗ್ಗ: ಇದೀಗ  ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ  ಅಭ್ಯರ್ಥಿ ಯಾರಾಗ್ತಾರೆ ಎನ್ನುವುದು ತೀವ್ರ ಕುತೂಹಲ, ಶಿವಮೊಗ್ಗ ಬಿಜೆಪಿ ವಲಯದಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿರುವ ವಿಷಯವಾಗಿದೆ. 
ಇದೀಗ ರೇಸ್‌ನಲ್ಲಿ ಹಾಲಿ ಶಾಸಕ ಕೆ.ಎಸ್.ಈಶ್ವರಪ್ಪ ಮತ್ತು ಬಿಜೆಪಿ ಮುಖಂಡರಾದ ಎಸ್. ದತ್ತಾತ್ರಿ ಹಾಗೂ ಎಸ್.ಎಸ್. ಜ್ಯೂತಿಪ್ರಕಾಶ್ ರವರ ಹೆಸರು ಇದ್ದು, ಮೂವರ ಹೆಸರು ಹೈಕಮಾಂಡ್ ಅಂಗಳ ತಲುಪಿದೆ ಎನ್ನಲಾಗಿದೆ. ಮೂವರಲ್ಲಿ ಒಬ್ಬರಿಗೆ ಟಿಕೇಟ್ ಬರುವ 10 ನೇ ತಾರೀಖು ಫೈನಲ್ ಆಗುವ ಸಾದ್ಯತೆ ಇದೆ.
ಈಗಾಗಲೇ ಬಿಜೆಪಿಯ ಎಂಎಲ್ಸ್ಸಿ ಬಿಜೆಪಿ ಮುಖಂಡ ಆಯನೂರು ಮಂಜುನಾಥ್ 
ಬಿಜೆಪಿ ಮತ್ತು ಈಶ್ವರಪ್ಪ ವಿರುದ್ಧ ಬಂಡಾಯವೆದ್ದು,  ಬಿಜೆಪಿಯ ಶಾಸಕ ಕೆ ಎಸ್ ಈಶ್ವರಪ್ಪ ವಿರುದ್ಧ ತೊಡೆತಟ್ಟಿದ್ದಾರೆ. ನಾನು ಯುದ್ದಕ್ಕೆ ರೆಡಿ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಇದೀಗ ಆಗಲೇ ನೂತನ ಕಚೇರಿ ತೆರೆದು ಕೂತಿದ್ದಾರೆ.

 ಆದರೆ ಬಿಜೆಪಿಯ ಪಕ್ಷ ಕಟ್ಟಿ ಬೆಳೆಸುವಲ್ಲಿ ಈಶ್ವರಪ್ಪನವರ ಪಾತ್ರ ಮಹತ್ವದ್ದಾಗಿದೆ. ಯಡಿಯೂರಪ್ಪ,ಅನಂತ್ ಕುಮಾರ್ ಜೊತೆ ಈಶ್ವರಪ್ಪನವರ ಪಾತ್ರವು ದೊಡ್ಡದಿದೆ ಎನ್ನುವ ಕಾರಣದಿಂದ ಕೆಎಸ್ಈ ಗೆ ಕೊನೆಯ ಚುನಾವಣೆಗೆ ಅವಕಾಶ ನೀಡಬಹುದು ಎನ್ನಲಾಗುತ್ತಿದೆ.

ಶಿವಮೊಗ್ಗದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಟಿಕೇಟ್ ಕೊಡಿ ಎನ್ನುವ ಕೂಗು ಬಿಜೆಪಿಯಲ್ಲಿ RSS ವಲಯದಲ್ಲಿ ಕೇಳಿಬರುತ್ತಿದೆ. ಈಶ್ವರಪ್ಪನವರಿಗೆ ಟಿಕೇಟ್ ಮಿಸ್ ಆದರೆ ದತ್ತಾತ್ರಿಗೆ ಟಿಕೆಟ್ ಗ್ಯಾರಂಟಿ, ಎಂಬ ಮಾಹಿತಿ ಇದೀಗ ಹರಿದಾಡುತ್ತಿದೆ.

ಶಿಕಾರಿಪುರದಲ್ಲಿ ಈಗಾಗಲೇ ಲಿಂಗಾಯತ್ ಸಮುದಾಯಕ್ಕೆ ಸೇರಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ಬಿ ವೈ ವಿಜಯೇಂದ್ರ ಗೆ ಸೀಟು ಕೊಟ್ಟರೆ,  ಈ ಲೆಕ್ಕಾಚಾರದಲ್ಲಿ ಮತ್ತೆ ಶಿವಮೊಗ್ಗದಲ್ಲೂ ಕೂಡ ಲಿಂಗಾಯತ ಸಮುದಾಯಕ್ಕೆ ಸೀಟು ಕೊಡುವುದು ಕಷ್ಟ. ಶಿವಮೊಗ್ಗದಲ್ಲಿ ಇಲ್ಲಿಯವರೆಗೂ ಮುಂಚೆಯಿಂದಲೂ ಬ್ರಾಹ್ಮಣ ಸಮುದಾಯ ಪ್ರಬಲವಾಗಿರುವ ಕ್ಷೇತ್ರದಲ್ಲಿ ಹೆಚ್ಚಿನ ಪ್ರಾತಿನಿಧ್ಯ ಸಿಕ್ಕಿಲ್ಲ ಎನ್ನುವ ಕೂಗು ಕೇಳಿ ಬರುತ್ತಿದೆ.

ಆ ದೃಷ್ಟಿಯಿಂದ ಆ ಸಮುದಾಯವಾದ ಅಸಮಾಧಾನವನ್ನು ತಣ್ಣಗಾಗಿಸಲು ಹಲವಾರು ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ಕಾರ್ಯನಿರ್ವಹಿಸುತ್ತಾ 
ಹಲವಾರು ಜವಾಬ್ದಾರಿಗಳನ್ನು  ಸಾಮಾಜಿಕ ಕಾರ್ಯಗಳನ್ನು ನಿರ್ವಹಿಸಿ ವಿವಿಧ ಸಂಘ-ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಾ ಇಂದಿಗೂ ಸಕ್ರಿಯವಾಗಿ ಬಿಜೆಪಿಯ ಸಂಘಟನೆಯಲ್ಲಿ ತೊಡಗಿರುವ ಯುವ‌ಮುಖಂಡ ಎಸ್. 
ದತ್ತಾತ್ರಿರವರ ಹೆಸರನ್ನು ಹೈಕಮಾಂಡ್ ಅಂತಿಮಗೊಳಿಸಲು ಬಹುದು ಎಂಬ ಚರ್ಚೆ ಬಿಜೆಪಿಯ ವಲಯದಲ್ಲಿ ಕೇಳಿಬರುತ್ತಿದೆ. 

ಇದೀಗ ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿ  ಅಭ್ಯರ್ಥಿ ಯಾರು ಎಂಬುದು  ಭಾನುವಾರ ಅಂತಿಮವಾಗಲಿದೆ.ಕಾದುನೋಡುವ.... 

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.