ಬಹಳನೊಂದು ನಾನು ಕಾಂಗ್ರೆಸ್ ಮತ್ತು ವಕ್ತಾರರ ಹುದ್ದೆಗೆ ರಾಜಿನಾಮೆ ಸಲ್ಲಿಸುತ್ತಿದ್ದೆನೆ: ಹೆಚ್.ಎಸ್.ಶಾಂತವೀರಪ್ಪಗೌಡ
ಶಿವಮೊಗ್ಗ: ಬಹಳನೊಂದು ನಾನು ಕಾಂಗ್ರೆಸ್ ಪ್ರಾಥಮಿಕ ಸ್ಥಾನಕ್ಕೆ ಮತ್ತು ವಕ್ತಾರರ ಹುದ್ದೆಗೆ ನಾನು ರಾಜಿನಾಮೆ ಸಲ್ಲಿಸುತ್ತಿದ್ದೆನೆ.ಯಡಿಯೂರಪ್ಪ ಮಗ ವಿಜೇಂದ್ರನ ವಿರುದ್ದ ಗೆಲುವು ಸಾಧಿಸುವ ಅಭ್ಯರ್ಥಿ ಗೆ ನನ್ನ ಬೆಂಬಲ ಎಂದು ಹೆಚ್.ಎಸ್.ಶಾಂತವೀರಪ್ಪಗೌಡ ಹೇಳಿದರು.
ಇಂದು ಶಿವಮೊಗ್ಗ ನಗರದ ಮಥುರ ಹೊಟೆಲ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ಯಡಿಯೂರಪ್ಪ ಕುತಂತ್ರದಿಂದ ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ಮ್ಯಾಚ್ ಫಿಕ್ಸಿಂಗ್ ನಿಂದ ನಾಗರಾಜ್ ಗೌಡ ಗೆ ಕಾಂಗ್ರೆಸ್ ಟಿಕೇಟ್ ಕೈತಪ್ಪಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಶಿಕಾರಿಪುರ ತಾಲ್ಲೂಕಿನಲ್ಲಿ ನಮ್ಮ ಅಣ್ಣ ಜನಸಂಘದಲ್ಲಿ ಕೆಲಸ ಮಾಡಿದವರು.ಪ್ರಾಣಕ್ಕೆ ಪ್ರಾಣ ಕೊಟ್ಟು ನಾವು ಯಡಿಯೂರಪ್ಪ ರವರಿಗೆ ಬೆಳಿಸಿದ್ದಕ್ಕೆ ಅವರ ಕುತಂತ್ರದಿಂದ ನಮ್ಮ ಅಣ್ಣನ ಮಗ ನಾಗರಾಜ್ ಗೌಡರವರಿಗೆ ಕಾಂಗ್ರೆಸ್ ಟಿಕೇಟ್ ತಪ್ಪಿದೆ ಎಂದು ಅಸಮಾಧಾನ ಮತ್ತು ಆಕ್ರೋಶ ವ್ಯಕ್ತಪಡಿಸಿದರು.
ಇಡೀ ತಾಲ್ಲೂಕಿನ ಜನ ಅವರನ್ನು ಸೋಲಿಸಿ ಮಲೇಷಿಯಾಗೆ ಕಳಿಸಲಿದ್ದಾರೆ ಎಂದರು.
ಯಡಿಯೂರಪ್ಪ ರವರ ಸೋಲಿಸುವುದಕ್ಕೆ ತಾಲ್ಲೂಕಿನ ಜನ ಮತು ನಾನು ಇದೀಗ ಪಣತೊಟ್ಟಿದ್ದೆನೆ. ಯಡಿಯೂರಪ್ಪ ರವರಿಂದ ಬಿಜೆಪಿ ಮತ್ತು ಕಾಂಗ್ರೆಸ್ ಬಿಡುವ ಸಂದರ್ಬ ಬಂತು ಎಂದು ತಿಳಿಸಿದರು.ಯಡಿಯೂರಪ್ಪ ಒಂದು ರೀತಿಯಲ್ಲಿ ಘೋಮುಖ ವ್ಯಾಘ್ರ ನಾನು ಮಾನಸಿಕವಾಗಿ ಇದೀಗ ನೊಂದಿದ್ದೆನೆ ಎಂದರು.
Leave a Comment