ವಿಧಾನಪರಿಷತ್ ಸದಸ್ಯತ್ವ ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ತೊಡೆತಟ್ಟಿ ಶಿವಮೊಗ್ಗದಲ್ಲಿ ಅಖಾಡಕ್ಕೆ ಇಳಿಯುತ್ತಿದ್ದೆನೆ: ಈಶ್ವರಪ್ಪ ವಿರುದ್ದ ಗುಡುಗಿದ ಆಯನೂರು ಮಂಜುನಾಥ್
ಶಿವಮೊಗ್ಗ: ನನ್ನ ಪ್ರಯತ್ನಕ್ಕೆ ಪೂರಕವಾಗಿ ನನಗೆ ಟಿಕೇಟ್ ಸಿಗುವ ಲಕ್ಷಣ ಸಿಗುತ್ತಿಲ್ಲ. ಆದ್ದರಿಂದ ಒಂದು ನಿರ್ಧಾರಕ್ಕೆ ಬಂದಿದ್ದೆನೆ. ಈಶ್ವರಪ್ಪ ರವರ ಏಕವಚನದ ಮಾತು, ಅವರ ಮೇಲೆ ನಾಲಿಗೆ ಹಿಡಿತವಿಲ್ಲ.ಅವರ ಮಾತನ್ನು ಸವಾಲಾಗಿ ಸ್ವೀಕರಿಸಿದ್ದೆನೆ. ಮಗನಿಗೆ ಮತ್ತು ಅವರು ಟಿಕೇಟ್ ಗೆ ಕಸರತ್ತು ಮಾಡಿದ್ದಾರೆ.ಪುಕ್ಕಲರಂತೆ ಹಿಂದೇ ಸರಿ ಬೇಡಿ. ನಾನು ಅಖಾಡಕ್ಕೆ ರೆಡಿಯಾಗಿದ್ದೆನೆ. ವಿಧಾನಪರಿಷತ್ ಸದಸ್ಯ ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ತೊಡೆತಟ್ಟಿ ಬರುತ್ತಿದ್ದೆನೆ ಬನ್ನಿ. ಸೊಳ್ಳೆ ಓಡಿಸಲು ಸಾದ್ಯವಾಗದ, ಶಾಸಕ, ಸೊಳ್ಳೆಪರದೆ ಕೊಡುತ್ತಿದ್ದಾರೆ ಎಂದು ಕೆ.ಎಸ್.ಈಶ್ವರಪ್ಪ ರವರ ವಿರುದ್ದ ಆಯನೂರು ಮಂಜುನಾಥ್ ಆರೋಪದ ಸುರಿಮಳೆ ಗೈದು ಆಕ್ರೋಶ ವ್ಯಕ್ತಪಡಿಸಿದರು.
ಇಂದು ಮಥುರಾ ಪ್ಯಾರಾಡೈಸ್ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ರಾಜಕೀಯ ಲೆಕ್ಕಗಳನ್ನು ಕೊಡುತ್ತೆನೆ. ಆತರಹ ಲೆಕ್ಕಾಚಾರ ಕೊಡುತ್ತೆನೆ. ನೀವಿಬ್ಬರು ಬನ್ನಿ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೆನೆ.ನಿಮ್ಮ ಮಗನಿಗೆ ನಿಲ್ಲಿಸಿ ನಾನು ಸಹ ಸ್ಪರ್ಧೆ ಮಾಡುತ್ತೆನೆ. ನಿಮ್ಮ ನಾಯಕತ್ವ ತೋರಿಸಿ. ಇವರು ಬೇರೆ ಕಡೆ ಎಲ್ಲೂ ನಿಂತರು ಗೆಲ್ಲುವುದಿಲ್ಲ. ಅಧಿಕಾರ ಮದ ಈಶ್ವರಪ್ಪ ರವರಿಗೆ ಇದೆ ಎಂದರು.
ಮಂತ್ರಿಯಾದ ಮೇಲೆ ಯಡಿಯೂರಪ್ಪ ಸಿಎಂ ಆಗಿ ಶಿವಮೊಗ್ಗ ಕ್ಕೆ ಬರುವಾಗ ಯಾವಾತ್ತದಾರೂ ಹಾಜರಿದ್ದು ಸ್ವಾಗತ ಮಾಡದೇ , ಅಪಮಾನ ಮಾಡಿದ್ದೀರಾ.... ನಿಮ್ಮ ಮಗನನ್ನ ನಿಲ್ಲಿಸಿ ಗೆಲ್ಲಿಸಿ..ನಿಮ್ಮ ಮೇಲೆ ಸಾಕಷ್ಟು ಆಪಾದನೆಗಳು ಇದ್ದಾವೆ. ಆದರೆ ನನ್ನ ಮೇಲೆ ಯಾವುದೇ ಅಪಾದನೇ ಇಲ್ಲ...ಹಗುರವಾದ ಮಾತಿನಿಂದ ಸರ್ಕಾರಕ್ಕೆ ಪಕ್ಷಕ್ಕೆ ಮುಜುಗರ ತಂದಿದ್ದಿರಾ...ಕಾರ್ಪೊರೇಟ್ ರ್ ಗಳು ಸಹ ನೊಂದಿದ್ದಾರೆ... 4 ವರೇ ಕೋಟಿ ಸೀರೆ ಸಿಕ್ಕಿದೆ.ಅದು ಯಾರದು....ನಿಮ್ಮ ಹಣದ ಬಲದಿಂದ ಜನರನ್ನ ಖರೀದಿಸಲು ಸಾದ್ಯವಿಲ್ಲ ಎಂದರು.
ಈಶ್ವರಪ್ಪ ರವರು ಶಿವಮೊಗ್ಗ ಕ್ಕೆ ಮಾಡಿದ ಅಭಿವೃದ್ಧಿ ಕಾರ್ಯ ಏನು...ತಾವು ಮಾಡಿದ್ದು ಏನು..ಹೇಳಿ...ಪ್ರಚೋದನೆ ಮಾಡಿದರೇ ಫಲಿತಾಂಶ ನನ್ನ ಹತ್ತಿರ ಬರುತ್ತದೆ ಎಂದು ಕೊಂಡಿದ್ದಿರಾ? ಶಿವಮೊಗ್ಗದಲ್ಲಿ ನಡೆದ ಅನೇಕ ಘಟನೆಗಳಿಗೆ ಕಾರಣರಾಗಿದ್ದೀರಾ ನಾನು ಯುದ್ದದ ತಯಾರಿಯಲ್ಲಿ ಇದ್ದೆನೆ...ಎಂದರು.
ಶಿವಮೊಗ್ಗದಲ್ಲಿ ಪದೇ ಪದೇ ಗಲಾಟೆ ಯಾಗಿ, ಕೂಲಿ ಕಾರ್ಮಿಕರು ಬಲಿಪಶುಗಳಾಗುತ್ತಿದ್ದಾರೆ. ಗಲಭೆಯಾಗುವ ಷಡ್ಯಂತ್ರ ಸಹ ನಡೆಯುತ್ತಿದೆ. ಪೊಲೀಸ್ ಇಲಾಖೆ ಗಮನಿಸಬೇಕಾದ ಅವಶ್ಯಕತೆ ಇದೆ. ಹಿಂದುಗಳು ಮತ್ತು ಮುಸ್ಲಿಮರು ಶಾಂತಿಯಿಂದ ಇರಿ ಎಂದರು.ಪ್ರಚೋದನೆಗೆ ಒಳಗಾಗ ಬೇಡಿ ಎಂದರು.

Leave a Comment