ಪಾಲಿಕೆ ಬಿಜೆಪಿಯ ಆಡಳಿತ ಪಕ್ಷದ ನಾಯಕ ಜ್ಞಾನೇಶ್ವರ್ ಸಹೋದರ ಅನಿಲ್ ಆತ್ಮಹತ್ಯೆಗೆ ಶರಣು!
ಶಿವಮೊಗ್ಗ: ಪಾಲಿಕೆ ಬಿಜೆಪಿಯ ಆಡಳಿತ ಪಕ್ಷದ ನಾಯಕ ಜ್ಞಾನೇಶ್ವರ್ ಅವರ ಸಹೋದರ ಅನಿಲ್ ನಿನ್ನೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.ಘಟನೆ ಸಂಬಂಧಿಸಿದಂತೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೃಷಿ ನಗರದಲ್ಲಿರುವ ಮನೆಯಲ್ಲಿ ಫ್ಯಾನ್ ಗೆ ನೇಣು ಬಿಗಿದುಕೊಂಡು ಅನಿಲ್(52) ಡೆತ್ ನೋಟ್ ಬರೆದಿಟ್ಟು ಅನಿಲ್ ನೇಣಿಗೆ ಶರಣಾಗಿದ್ದಾರೆ. ಅನಾರೋಗ್ಯದ ಕಾರಣವನ್ನ ಉಲ್ಲೇಖಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಹಿಂದೆ ತಲೆ ಆಪರೇಷನ್ ಮಾಡಿಸಿಕೊಂಡಿದ್ದ ಅನಿಲ್ ಬಹಳ ನೋವಿನಿಂದ ಬಳಲಿದ್ದರು. ಸ್ಟ್ರೋಕ್ ಹೊಡೆಯಲಿರುವ ಭೀತಿಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಕುರುಬರ ಸೊಸೈಟಿಯಲ್ಲಿ ಅನಿಲ್ ಪಿಗ್ಮಿ ಸಂಗ್ರಹಕರಾಗಿದ್ದರು.
Leave a Comment