ಸಾಗರ: ದೋಷಪೂರಿತ ಸೈಲೆನ್ಸರ್ ಗಳನ್ನು ನಾಶ ಪಡಿಸಿದ ಪೋಲೀಸರು

ಸಾಗರ ಉಪ ವಿಭಾಗ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಳ್ಳಲಾದ *ಒಟ್ಟು 26 ದೋಷಪೂರಿತ ಸೈಲೆನ್ಸರ್  (Defective Silencer)* ಗಳನ್ನು ದಿನಾಂಕಃ-27-04-2023 ರ ಸಂಜೆ *ಶ್ರೀ ರೋಹನ್ ಜಗದೀಶ್, ಐಪಿಎಸ್,* ಹಿರಿಯ ಸಹಾಯ ಪೊಲೀಸ್ ಅಧೀಕ್ಷಕರು, ಸಾಗರ ಉಪ ವಿಭಾಗ ರವರ  ಸಮ್ಮುಖದಲ್ಲಿ  *ಸಾಗರ ನಗರದ ಬೆಳಲ ಮಕ್ಕಿ ಕ್ರಾಸ್* ನ ಹತ್ತಿರ ಬಿ. ಹೆಚ್ ರಸ್ತೆಯಲ್ಲಿ *ಬುಲ್ಡೋಜರ್ ಅನ್ನು ಬಳಸಿ ನಾಶ ಪಡಿಸಲಾಯಿತು. ಈ ಸಂದರ್ಭದಲ್ಲಿ *ಶ್ರೀ ಪ್ರವೀಣ್ ಕುಮಾರ್ ಪಿ.ಐ* ಸಾಗರ ಗ್ರಾಮಾಂತರ ಪೊಲೀಸ್ ಠಾಣೆ. ಸಾಗರ ಪೇಟೆ ಠಾಣೆಯ ಪಿಎಸ್ಐ ರವರುಗಳಾದ *ಶ್ರೀ ಹೊಳೆಬಸಪ್ಪ ಹೋಳಿ, ಶ್ರೀ ಶ್ರೀಪತಿ ಗಿನ್ನಿ, ಶ್ರೀ ಆರ್. ಕೆ.  ನಿಂಗಜ್ಜೆರ,  ಮತ್ತು ಶ್ರೀ ಎಸ್ .ಪಿ ಹೊಸಮನಿ, ಪಿಎಸ್ಐ* ಸಾಗರ ಗ್ರಾಮಾಂತರ ಠಾಣೆ ಮತ್ತು ಸಿಬ್ಬಂಧಿಗಳು ಉಪಸ್ಥಿತರಿದ್ದರು.ಮುಂದಿನ ದಿನಗಳಲ್ಲಿಯೂ ಸಹಾ *Defective Silencer ಗಳನ್ನು ಬಳಸುವ ಚಾಲಕ / ಮಾಲೀಕರುಗಳ* ವಿರುದ್ಧ ಇದೇ ರೀತಿಯ ಕಾರ್ಯಾಚರಣೆ ನಡೆಸಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.