ಕಳಂಕ ರಹಿತ ಪಕ್ಷ ಎಂದರೆ ಆಮ್ ಆದ್ಮಿ ಪಕ್ಷ -ಶಿವಮೊಗ್ಗದಲ್ಲಿ ಸಹ ಅಕೌಂಟ್ ಓಪನ್ ಮಾಡುತ್ತೆವೆ: ಸಾಗರ ಕ್ಷೇತ್ರದ ಅಭ್ಯರ್ಥಿ ಕೆ.ದಿವಾಕರ್
ಶಿವಮೊಗ್ಗ: ಕಳಂಕ ರಹಿತ ಪಕ್ಷ ಎಂದರೆ ಆಮ್ ಆದ್ಮಿ ಪಕ್ಷ, ನಮ್ಮ ಸಾಗರ ಕ್ಷೇತ್ರದಲ್ಲಿ ನಾನು ಆಮ್ ಆದ್ಮಿ ಪಾರ್ಟಿ ಸೇರಿದಾಗ 5 ರಿಂದ 6 ಜನ ಪತ್ರಕರ್ತರು ಇದ್ದರು. ಇದೀಗ ಎಲ್ಲಾ ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಇದ್ದಾರೆ.
213 ಕ್ಷೇತ್ರದಲ್ಲಿ ಆಮ್ ಆದ್ಮಿಪಕ್ಷ ಸ್ಪರ್ದಿಸಿದೆ. ಶಿವಮೊಗ್ಗದ ಎಲ್ಲಾ ಕ್ಷೇತ್ರದಲ್ಲಿ ಸ್ಪರ್ದಿಸಿದೆ. ಶಿವಮೊಗ್ಗದಲ್ಲಿ ಸಹ ಅಕೌಂಟ್ ಓಪನ್ ಮಾಡುತ್ತೆವೆ ಎಂದು ಸಾಗರ ಆಮ್ ಆದ್ಮಿಪಕ್ಷದ ಅಭ್ಯರ್ಥಿ ಕೆ.ದಿವಾಕರ್ ಹೇಳಿದರು.ಇಂದು ಶಿವಮೊಗ್ಗ ನಗರದ ಪತ್ರಿಕಾ ಭವನದಲ್ಲಿ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಮತ್ತು ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಪತ್ರಿಕಾಸಂವಾದ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಮಾತನಾಡಿದರು.
ಶಿವಮೊಗ್ಗದ ಅಭಿವೃದ್ಧಿ ವಿಚಾರದಲ್ಲಿ ಚರ್ಚೆಯಾಗುತ್ತಿಲ್ಲ. ಗ್ರಾಮಾಂತರ ಮಟ್ಟದಲ್ಲಿ ಆಗಿಲ್ಲ. ಬಿಜೆಪಿ ಪಕ್ಷ ನತ್ತು ಕಾಂಗ್ರೆಸ್ ಪಕ್ಷ ಹೊರತು ಪಡಿಸಿ ಬೇರೆ ಪಕ್ಷದ ಕಡೆ ಜನರ ಒಲವು ಇದೆ. ನಮ್ಮ ಪಕ್ಷ ಸುಮಾರು 20 ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ ಎಂದರು.
ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿ ಗೆಲ್ಲುವುದು ಒಂದು ಸ್ಥಾನ ಅದು ಶಿಕಾರಿಪುರ ಕ್ಷೇತ್ರ ಮಾತ್ರ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷ ಚುನಾವಣೆ ಗೆಲ್ಲುವ ಸಾಮರ್ಥ್ಯ ಕಳೆದುಕೊಂಡಿವೆ, ಹಣ ಹೆಂಡ ,ರೋಡ್ ಶೋ ಮಾಡಿ ಮತಯಾಚನೆ ಮಾಡುತ್ತಿದ್ದಾರೆ ಎಂದರು.
ಚುನಾವಣೆಯಲ್ಲಿ ಸ್ಪರ್ಧಿಸಿ ದ ಅಭ್ಯರ್ಥಿ ಗೆ ತಮ್ಮ ಕ್ಷೇತ್ರ ದ ಬಗ್ಗೆ ಮಾಹಿತಿ ಇರಬೇಕು.ಅಭ್ಯರ್ಥಿ ಗೆ 5 ವರ್ಷದ ಕಾರ್ಯಸೂಚಿ ಇರಬೇಕು. ಪಾರದರ್ಶಕ ಚುನಾವಣೆ ನಡೆಯಬೇಕು ಅಂದರೆ ಮದ್ಯಪಾನ 10 ದಿವಸ ಮುಂಚೆ ಬ್ಯಾನ್ ಮಾಡಬೇಕು. ಹಣ ಹೆಂಡ ಹಂಚಿ ಗೆಲ್ಲುವ ವ್ಯಕ್ತಿ ಗಳ ಬಣ್ಣ ಬಯಲಾಗುತ್ತದೆ.ಈ ಬಗ್ಗೆ ಚುನಾವಣಾ ಆಯೋಗಕ್ಕೆ ಸಹ ತಿಳಿಸಿದ್ದೆನೆ ಎಂದರು.
ಸಾಗರ ತಾಲ್ಲೂಕು ನಲ್ಲಿ ದೊಡ್ಡ ಸಮಸ್ಯೆ ಎಂದರೆ ನೆಟ್ ವರ್ಕ್ ಸಮಸ್ಯೆ, ಅತಿ ದೊಡ್ಡ ಟವರ್ ನಿರ್ಮಿಸಿ ಈ ಸಮಸ್ಯೆಗಳನ್ನು ಬಗೆಹರಿಸಲು ಶ್ರಮಿಸಲಾಗುವುದು ಎಂದರು.
ಕುಟುಂಬ ರಾಜಕಾರಣ ಬಗ್ಗೆ ಧ್ವನಿ ಎತ್ತಿದ್ದೆವೆ.ಕುಟುಂಬ ರಾಜಕಾರಣ ಅಂತ್ಯವಾಗಬೇಕು. ಇದು ಜನರ ಆಶಯವಾಗಿದೆ.ಸಾಗರ ಕ್ಷೇತ್ರದಲ್ಲಿ ನೇರ ಸ್ಪರ್ಧೆ ಇದೆ.ಸಾಗರ ಜನರ ಒಲವು ಆಮ್ ಆದ್ಮಿ ಪಕ್ಷದ ಕಡೆ ಇದೆ. ನಾನು ಈ ಬಾರಿಯ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತೆನೆ ಎಂದರು.
ಈ ಸಂದರ್ಭದಲ್ಲಿ ಪ್ರೆಸ್ ಟ್ರಸ್ಟ್ ಅದ್ಯಕ್ಷರಾದ ಮಂಜುನಾಥ್, ಕಾರ್ಯದರ್ಶಿ ನಾಗರಾಜ್ ನೇರಿಗೆ, ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾದ ಗೋಪಾಲ ಯಡಗೆರೆ ಉಪಸ್ಥಿತರಿದ್ದರು.
Leave a Comment