ಶಿವಮೊಗ್ಗ ಡಿಎಆರ್ ಮೈದಾನದಲ್ಲಿ ಪೊಲೀಸ್ ಧ್ವಜ ದಿನಾಚರಣೆ

ಶಿವಮೊಗ್ಗ: ಶಿವಮೊಗ್ಗ ಡಿಎಆರ್ ಪೊಲೀಸ್ ಕವಾಯತು ಮೈದಾನದಲ್ಲಿ ಇಂದು ಪೊಲೀಸ್ ಧ್ವಜ ದಿನಾಚರಣೆಯನ್ನು ಆಚರಿಸಲಾಯಿತು.ಮುಖ್ಯ ಅತಿಥಿಗಳಾಗಿ *ಶ್ರೀ ದಾನಂ  ನಿವೃತ್ತ ಎಸ್ಐ* ರವರು  ಆಗಮಿಸಿ, ಪೊಲೀಸ್ ತುಕಡಿಗಳಿಂದ ಗೌರವ ವಂದನೆಗಳನ್ನು ಸ್ವೀಕರಿಸಿದರು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು  *ಶ್ರೀ ಮಿಥುನ್ ಕುಮಾರ್. ಜಿ. ಕೆ. ಐಪಿಎಸ್,* ಮಾನ್ಯ ಪೋಲಿಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆಯವರು ವಹಿಸಿದ್ದರು.
ಶ್ರೀ ಶಿವಾನಂದ ಗುಣದಾಳ್, ಆರ್. ಪಿ. ಐ ರವರು ಪೆರೇಡ್ ಕಮಾಂಡರ್* ಆಗಿ  ನೇತೃತ್ವವನ್ನು ವಹಿಸಿದ್ದರು.
ದಿನಾಂಕ: 01-04-2022 ರಿಂದ ದಿನಾಂಕ: 31-03-2023 ರವರೆಗೆ *ಶಿವಮೊಗ್ಗ ಜಿಲ್ಲಾ ಪೊಲೀಸ್ ನಲ್ಲಿ ಕರ್ತವ್ಯ ನಿರ್ವಹಿಸಿದ ಒಟ್ಟು 24 ಜನ ಎಎಸ್‌ಐ, 05 ಜನ ಎ.ಆರ್.ಎಸ್.ಐ, 03 ಜನ ಸಿಹೆಚ್‌ಸಿ, 02 ಜನ ಎಹೆಚ್‌ಸಿ ಮತ್ತು 1 ಸಿಪಿಸಿ ಸೇರಿದಂತೆ ಒಟ್ಟು 35 ಜನ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳು ನಿವೃತ್ತಿ* ಹೊಂದಿದ್ದು, ಇವರುಗಳ ಸೇವೆಯನ್ನು ಸ್ಮರಿಸಲಾಯಿತು.ಕರ್ನಾಟಕ ಪೊಲೀಸ್ ಕಾಯ್ದೆ-1963 ಅಸ್ತಿತ್ವಕ್ಕೆ ಬಂದ ನಂತರ, ದಿನಾಂಕ: 02-04-1965 ರಂದು *ಪೊಲೀಸ್ ಇಲಾಖೆಗೆ ಪ್ರತ್ಯೇಕ ಧ್ವಜವನ್ನುರೂಪಿಸಿ ಪೊಲೀಸ್ ಇಲಾಖೆಗೆ ಹಸ್ತಾಂತರಗೊಳಿಸಿರುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷ ಏಪ್ರಿಲ್ 2ನೇ ತಾರೀಕಿನಂದು ಪೊಲೀಸ್‌ ಧ್ವಜ ದಿನಾಚರಣೆಯನ್ನಾಗಿ* ರಾಜ್ಯಾದ್ಯಂತ ಆಚರಿಸಲಾಗುತ್ತದೆ. ಈ ದಿನದಂದು *ಪೊಲೀಸ್‌ ಇಲಾಖೆಯಲ್ಲಿ ನಿವೃತ್ತರಾದ ಅಧಿಕಾರಿ/ಸಿಬ್ಬಂದಿಯವರು ತಮ್ಮ ಸೇವಾವಧಿಯಲ್ಲಿ ನಿರ್ವಹಿಸಿದ ಸೇವೆಯನ್ನು ಸ್ಮರಿಸಲಾಗುತ್ತದೆ.*
ಈ  ಸಂದರ್ಭದಲ್ಲಿ *ಶ್ರೀ ಅನಿಲ್ ಕುಮಾರ್ ಭೂಮರಡ್ಡಿ,* ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ, ಹಾಗೂ ಶಿವಮೊಗ್ಗ ಜಿಲ್ಲೆಯ ಎಲ್ಲಾ  *ಹಿರಿಯ ಸಹಾಯಕ ಪೊಲೀಸ್ ಅಧೀಕ್ಷಕರು, ಪೋಲಿಸ್ ಉಪಾಧೀಕ್ಷಕರುಗಳು, ಪೋಲಿಸ್ ವೃತ್ತ ನಿರೀಕ್ಷಕರು / ಪೋಲಿಸ್ ನಿರೀಕ್ಷಕರು, ಪೋಲಿಸ್ ಉಪ ನಿರೀಕ್ಷಕರು,    ನಿವೃತ್ತ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಗೂ ಕುಟುಂಬ ವರ್ಗದವರು* ಹಾಜರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.