ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಎನ್.ಚನ್ನಬಸಪ್ಪ (ಚೆನ್ನಿ) ನಾಳೆ ನಾಮಪತ್ರ ಸಲ್ಲಿಕೆ...

ಶಿವಮೊಗ್ಗ: ಬಾರಿ ಕುತೂಹಲ ಮೂಡಿಸಿದ್ದ ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಎಸ್.ಎನ್. ಚನ್ನಬಸಪ್ಪ ( ಚೆನ್ನಿ) ಇವರ ಹೆಸರನ್ನು ಬಿಜೆಪಿ ಹೈಕಮಾಂಡ್  ಫೈನಲ್‌ ಮಾಡಿದೆ ಎನ್ನಲಾಗಿದೆ.ಮಾಜಿ ಸೂಡ ಅಧ್ಯಕ್ಷ, ಮಾಜಿ ನಗರಸಭಾ ಅಧ್ಯಕ್ಷ ಮಾಜಿ ಮಹಾನಗರ ಪಾಲಿಕೆ ಆಡಳಿತ ಪಕ್ಷದ ನಾಯಕ,ಉಪಮೇಯರ್, ಬಿಜೆಪಿಯ ಯುವ ಮುಖಂಡ,RSS ಹಿನ್ನೆಲೆ ಹಿಂದೂ ಕಾರ್ಯಕರ್ತ,ಹಾಲಿ ಪಾಲಿಕೆ ಸದಸ್ಯ ಎಸ್ ಎನ್ ಚನ್ನಬಸಪ್ಪ ಆಯ್ಕೆ ಬಹುತೇಕ ಖಚಿತವಾಗಿದೆ. ನಾಳೆ ದಿನಾಂಕ:20/04/2023 ರ ಗುರುವಾರ ಬೆಳಿಗ್ಗೆ 11.30 ಕ್ಕೆ   ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮೆರವಣಿಗೆ ಮುಖಾಂತರ ನಾಮಪತ್ರ ಸಲ್ಲಿಸಲ್ಲಿದ್ದಾರೆ. 

ನಾಳೆ ಬೆಳಿಗ್ಗೆ ನಗರದ ಕೋಟೆ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಸಹಸ್ರಾರು ಸಂಖ್ಯೆಯ ಪಕ್ಷದ ಕಾರ್ಯಕರ್ತರು, ಹಿತೈಷಿಗಳು, ಅಭಿಮಾನಿಗಳು ಹಾಗೂ ಸಾರ್ವಜನಿಕರ ಜೊತೆಗೂಡಿ ಬೃಹತ್ ಮೆರವಣಿಗೆಯು ಎಸ್,ಪಿ.ಎಮ್ ರಸ್ತೆ, ಗಾಂಧಿ ಬಜಾರ್‌ ಮುಖಾಂತರ ಎನ್.ಡಿ.ವಿ ಹಾಸ್ಟೆಲ್ ಅವರಣ ತಲುಪಿ ನಂತರ ಮಹಾನಗರ ಪಾಲಿಕೆಯ ಕಛೇರಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ.

ಎನ್.ಡಿ.ವಿ ಹಾಸ್ಟೆಲ್ ಅವರಣದಲ್ಲಿ ಸಾರ್ವಜನಿಕರ ಸಭೆ ಏರ್ಪಡಿಸಲಾಗಿದೆ. 

ಈ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಮಾಜಿ ಉಪಮುಖ್ಯಮಂತ್ರಿಗಳಾದ ಕೆ.ಎಸ್. ಈಶ್ವರಪ್ಪ ಲೋಕಸಭಾ ಸದಸ್ಯರಾದ ಬಿ.ವೈ. ರಾಘವೇಂದ್ರ, ವಿಧಾನ ಪರಿಷತ್ ಸದಸ್ಯರಾದ ಎಸ್. ರುದ್ರೇಗೌಡ್ರು, ಬಿಜೆಪಿ ಜಿಲ್ಲಾಧ್ಯಕ್ಷರಾದ ಟಿ.ಡಿ. ಮೇಘಾರಾಜ್, ನಗರಾಧ್ಯಕ್ಷರಾದ ಜಗದೀಶ್ ಎನ್.ಕೆ, ಮಹಾನಗರ ಪಾಲಿಕೆಯ ಆಡಳಿತ ಪಕ್ಷದ ನಾಯಕರು ಹಾಗೂ ಶಿವಮೊಗ್ಗ ನಗರ ಕ್ಷೇತ್ರ ಸಂಚಾಲಕರಾದ ಎಸ್.ಜ್ಞಾನೇಶ್ವರ್, ಕ್ಷೇತ್ರ ಪ್ರಭಾರಿಗಳಾದ ಗಣೇಶ್ ಕಾರ್ನಿಕ್, ಸೂಡಾ ಅಧ್ಯಕ್ಷರಾದ ಎನ್. ಜಿ ನಾಗರಾಜ್, ಮಹಾನಗರ ಪಾಲಿಕೆಯ ಸದಸ್ಯರುಗಳು ನಿಗಮ ಮಂಡಳಿಯ ನಿರ್ದೇಶಕರುಗಳು ಶಿವಮೊಗ್ಗ ಜಿಲ್ಲಾ ನಗರ ಮಟ್ಟದ ಎಲ್ಲಾ ಜವಾಬ್ದಾರಿಯುತ ಬಿಜೆಪಿ ಕಾರ್ಯಕರ್ತರುಗಳು ಉಪಸ್ಥಿತರಿರುತ್ತಾರೆ ಎಂದು ತಿಳಿದುಬಂದಿದೆ.

 ಶಿವಮೊಗ್ಗ ವಿಧಾನಸಭಾ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಲಿಂಗಾಯತ ಅಭ್ಯರ್ಥಿ ಗಳದ್ದು ಮೇಲುಗೈ, ಕಾಂಗ್ರೆಸ್, ಬಿಜೆಪಿ,ಜೆಡಿಎಸ್ ಮೂವರು ಅಭ್ಯರ್ಥಿಗಳು ಲಿಂಗಾಯತ ಜಾತಿಯವರು. ಮೂವರ ಮದ್ಯೆ ಬಿಗ್ ಫೈಟ್ ನಡೆಯಲಿದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.