ಚೆಕ್ ಪೋಸ್ಟ್ ನಲ್ಲಿ ದಾಖಲೆಗಳು ಇಲ್ಲದ ಗ್ಯಾಸ್ ಸ್ಟೋವ್,ಇತರೇ ಲಕ್ಷಾಂತರ ಮೌಲ್ಯದ ವಸ್ತುಗಳ ವಶ

 ಕರ್ನಾಟಕ ರಾಜ್ಯ *ವಿಧಾನಸಭಾ ಸಾರ್ವತ್ರಿಕ ಚುನಾವಣೆಯ* ಹಿನ್ನೆಲೆಯಲ್ಲಿ, ಶಿವಮೊಗ್ಗ ಜಿಲ್ಲೆಯಾದ್ಯಂತ ಚೆಕ್ ಪೋಸ್ಟ್ ಗಳನ್ನು ತೆರೆದು, ವಾಹನಗಳ ತಪಾಸಣೆಯನ್ನು ನಡೆಸುತ್ತಿದ್ದು,  *ಸೂಕ್ತ ದಾಖಲೆಗಳಿಲ್ಲದೇ  ವಾಹನಗಳಲ್ಲಿ ಸಾಗಾಟ ಮಾಡುತ್ತಿದ್ದ, ಈ ಕೆಳಕಂಡ  ವಸ್ತುಗಳನ್ನು ಅಮಾನತ್ತು* ಪಡಿಸಿಕೊಂಡಿರುತ್ತದೆ. 1) ದಿನಾಂಕ: 13-04-2023 ರಂದು *ಶಿರಾಳಕೊಪ್ಪ ಪೊಲೀಸ್ ಠಾಣಾ* ವ್ಯಾಪ್ತಿಯಲ್ಲಿ ಸೂಕ್ತ ದಾಖಲೆಗಳಿಲ್ಲದೇ  ವಾಹನದಲ್ಲಿ ಸಾಗಾಟ ಮಾಡುತ್ತಿದ್ದ  *ಅಂದಾಜು ಮೌಲ್ಯ 3,90,000/- ರೂ ಗಳ 3 ಟನ್ ಒಣ ಅಡಿಕೆಯನ್ನು* ಅಮಾನತ್ತು  ಪಡಿಸಿಕೊಳ್ಳಲಾಗಿದೆ.2) ದಿನಾಂಕ: 13-04-2023 ರಂದು *ಶಿರಾಳಕೊಪ್ಪ ಪೊಲೀಸ್ ಠಾಣಾ* ವ್ಯಾಪ್ತಿಯಲ್ಲಿ ಸೂಕ್ತ ದಾಖಲೆಗಳಿಲ್ಲದೇ  ವಾಹನದಲ್ಲಿ ಸಾಗಾಟ ಮಾಡುತ್ತಿದ್ದ  *ಅಂದಾಜು ಮೌಲ್ಯ 31,000/- ರೂ ಗಳ 26 ಗ್ಯಾಸ್ ಸ್ಟವ್ ಗಳನ್ನು ಅಮಾನತ್ತು*  ಪಡಿಸಿಕೊಳ್ಳಲಾಗಿದೆ.3) ದಿನಾಂಕ: 14-04-2023 ರಂದು *ಸಾಗರ ಗ್ರಾಮಾಂತರ ಪೊಲೀಸ್ ಠಾಣಾ* ವ್ಯಾಪ್ತಿಯಲ್ಲಿ ಸೂಕ್ತ ದಾಖಲೆಗಳಿಲ್ಲದೇ  ವಾಹನದಲ್ಲಿ ಸಾಗಾಟ ಮಾಡುತ್ತಿದ್ದ  *ಅಂದಾಜು ಮೌಲ್ಯ 3,80,000/- ರೂ ಗಳ ಅಕ್ಕಿಯನ್ನು ಅಮಾನತ್ತು*  ಪಡಿಸಿಕೊಳ್ಳಲಾಗಿದೆ.4) ದಿನಾಂಕ: 14-04-2023 ರಂದು *ಶಿಕಾರಿಪುರ ಟೌನ್  ಪೊಲೀಸ್ ಠಾಣಾ* ವ್ಯಾಪ್ತಿಯಲ್ಲಿ ಸೂಕ್ತ ದಾಖಲೆಗಳಿಲ್ಲದೇ  ವಾಹನದಲ್ಲಿ ಸಾಗಾಟ ಮಾಡುತ್ತಿದ್ದ  *ಅಂದಾಜು ಮೌಲ್ಯ 42,00,000/- ರೂ ಗಳ ಬಟ್ಟೆಗಳು ತುಂಬಿದ್ದ ಒಟ್ಟು 42 ಬ್ಯಾಗ್ ಗಳನ್ನು ಅಮಾನತ್ತು*  ಪಡಿಸಿಕೊಳ್ಳಲಾಗಿದೆ.

5) ದಿನಾಂಕ: 14-04-2023 ರಂದು *ಸಾಗರ ಟೌನ್  ಪೊಲೀಸ್ ಠಾಣಾ* ವ್ಯಾಪ್ತಿಯಲ್ಲಿ ಸೂಕ್ತ ದಾಖಲೆಗಳಿಲ್ಲದೇ  ವಾಹನದಲ್ಲಿ ಸಾಗಾಟ ಮಾಡುತ್ತಿದ್ದ  *ಅಂದಾಜು ಮೌಲ್ಯ 9,00,000/- ರೂ ಗಳ ಫ್ಯಾನ್‌ ಮತ್ತು ಕಾಯ್ಲ್ ಗಳನ್ನು ಅಮಾನತ್ತು*  ಪಡಿಸಿಕೊಳ್ಳಲಾಗಿದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.