ಸಾರ್ವಜನಿಕ ಸ್ಥಳಗಳಲ್ಲಿ ಬಿತ್ತಿ ಪತ್ರಗಳನ್ನು ಅಂಟಿಸಿದ ಡೆಲ್ಲಿ ವರ್ಲ್ಡ್ ಸ್ಕೂಲ್ ಗೆ ಶಿವಮೊಗ್ಗ ಪಾಲಿಕೆಯಿಂದ 25 ಸಾವಿರ ದಂಡ!
ಶಿವಮೊಗ್ಗ: ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಬಿತ್ತಿ ಪತ್ರಗಳನ್ನು ಅಂಟಿಸಿದ ಡೆಲ್ಲಿ ವರ್ಲ್ಡ್ ಸ್ಕೂಲ್ ಗೆ ಪಾಲಿಕೆಯಿಂದ 25 ಸಾವಿರ ದಂಡ ವಿಧಿಸಿದ ಘಟನೆ ವರದಿಯಾಗಿದೆ.
ಮಹಾನಗರಪಾಲಿಕೆಯಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಬಿತ್ತಿ ಪತ್ರಗಳನ್ನು ಅಂಟಿಸಿ ನಗರದ ಸೌಂದರ್ಯವನ್ನು ವಿರೂಪಗೊಳಿಸಿರುವ ಬಗ್ಗೆ
1) ಕರ್ನಾಟಕ ಸಾರ್ವತ್ರಿಕ ಚುನಾವಣೆ-2023 ರ ಮಾದರಿ ನೀತಿ ಸಂಹಿತೆ
2) ಕರ್ನಾಟಕ ಬಹಿರಂಗ ಸ್ಥಳಗಳ ( ವಿರೂಪಗೊಳಿಸುವುದನ್ನು ಪ್ರತಿಬಂಧಿಸುವ ಅಧಿನಿಯಮ 1981)ಪ್ರಕಾರ ಪ್ರಾಂಶುಪಾಲರು ಡೆಲ್ಲಿ ವರ್ಲ್ಡ್ ಸ್ಕೂಲ್ ರಾಷ್ಟ್ರೀಯ ಹೆದ್ಮಾರಿ 206, ಸಾಗರ ರಸ್ತೆ, ಮಲ್ಲಿಗೇನ ಹಳ್ಳಿ ಶಿವಮೊಗ್ಗ ಇವರಿಗೆ ನೋಟಿಸ್ ಜಾರಿ ಮಾಡಲಾಗಿತ್ತು.
ಕೂಡಲೇ ಭಿತ್ತಿ ಪತ್ರ ತೆರವು ಗೋಳಿಸಿ ಮಹಾನಗರ ಪಾಲಿಕೆಗೆ ರೂ.25,000/-ದಂಡವನ್ನು ಪಾವತಿಸಲು ಸೂಚಿಸಿ, ತಪ್ಪಿದಲ್ಲಿ ಉಲ್ಲೇಖ (1) ಮತ್ತು (2) ರ ರೀತ್ಯಾ ತಮ್ಮ ವಿರುದ್ಧ ನಿಯಾಮಾನುಸಾರ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ (ಪ) ಮತ್ತು ಸಹಾಯಕ ಕಾರ್ಯಪಾಲಕ ಅಭಿಯಂತರರು (ಪರಿಸರ) ಶಿವಮೊಗ್ಗ ಮಹಾನಗರ ಪಾಲಿಕೆ, ಶಿವಮೊಗ್ಗ ಇವರು ಡೆಲ್ಲಿ ವರ್ಲ್ಡ್ ಸ್ಕೂಲ್ಗೆ ನೋಟಿಸ್ ನೀಡಿದ್ದರು.
ಇದೀಗ ಏಪ್ರಿಲ್ 27 ರಂದು ಡೆಲ್ಲಿವರ್ಡ್ ಸ್ಕೂಲ್ ರವರು ಪಾಲಿಕೆಗೆ 25 ಸಾವಿರ ದಂಡ ಪಾವತಿಸಿದ್ದಾರೆ.
ಪಾಲಿಕೆ ಅಧಿಕಾರಿಗಳ ಕೆಲಸಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ. ಇದೇ ರೀತಿ ಹಲವು ಸಂಸ್ಥೆಗಳು ಮತ್ತು ರಾಜಕಾರಣಿಗಳು ಕಾರ್ಯಕ್ರಮ ಸಂದರ್ಭದಲ್ಲಿ ಪ್ಲೆಕ್ಸ್ ಮತ್ತು ಕಟೌಟ್ ಹಾಕಿ ಶಿವಮೊಗ್ಗ ನಗರದ ಅಂದವನ್ನು ಹಾಳು ಮಾಡುತ್ತಿದ್ದಾರೆ. ಅಂತಹವರ ಮೇಲೆ ಸಹ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.
Leave a Comment