ಶಿವಮೊಗ್ಗ ಪೋಲಿಸರ ಬಿಗ್ ಕಾರ್ಯಾಚರಣೆ:ಆನ್‌ಲೈನ್‌ ಕ್ರಿಕೇಟ್ ಬೆಟ್ಟಿಂಗ್ ಜೂಜಾಟ ಆಡುತ್ತಿದ್ದ ಆರೋಪಿತರ ಬಂಧನ - 25 ಲಕ್ಷ ರೂ.ಹಣ ವಶಕ್ಕೆ


ಶಿವಮೊಗ್ಗ:ಇತ್ತೀಚಿನ ದಿನಗಳಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಕ್ರಿಕೇಟ್ ಬೆಟ್ಟಿಂಗ್ ಮಟ್ಕಾ ಇಸ್ಪೀಟ್ ಜೂಜಾಟ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ವಿಶೇಷ ತಂಡ ರಚಿಸಲಾಗಿತ್ತು,   ದಿನಾಂಕ:15-04-2023 ರಂದು ಸದರಿ ವಿಶೇಷ ತಂಡವು ಮಾಹಿತಿಯನ್ನು ಸಂಗ್ರಹಿಸಿ ಶಿವಮೊಗ್ಗ ನಗರದಲ್ಲಿ ಕ್ರಿಕೇಟ್ ಬೆಟ್ಟಿಂಗ್ ಜೂಜಾಟ ಆಡುತಿದ್ದವರ ಮೇಲೆ ದಾಳಿ ಮಾಡಿ ಶಿವಮೊಗ್ಗ ಮತ್ತು ಭದ್ರಾವತಿ ವ್ಯಾಪ್ತಿಯ ಕ್ರಿಕೆಟ್ ಬೆಟ್ಟಿಂಗ್ ಕಿಂಗ್ ಪಿನ್ ಸತೀಶ ಹಾಗು ಇತರೆ 03 ಜನ ಆರೋಪಿಗಳಿಂದ ಒಟ್ಟು ರೂ. 7,20,000/- ನಗದು ಹಣ, 03 ಮೊಬೈಲ್ ಫೋನ್ ಗಳು ಮತ್ತು 1 ಬೈಕ್ ಅನ್ನು ವಶ ಪಡಿಸಿಕೊಂಡು, ಆರೋಪಿತರ ವಿರುದ್ಧ ಗುನ್ನೆ ಸಂಖ್ಯೆ 34/2023 ಕಲಂ 78(1) (ಎ)(೧) ಕರ್ನಾಟಕ ಪೊಲೀಸ್ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಲಾಗಿರುತ್ತದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಹೇಳಿದರು.
ಇಂದು ಡಿಎಆರ್ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ಶ್ರೀ ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರವರ ಮಾರ್ಗದರ್ಶನದಲ್ಲಿ ಶ್ರೀ ಪ್ರಭು ಡಿ.ಟಿ, ಡಿ.ವೈ.ಎಸ್.ಪಿ. ಡಿ.ಸಿ.ಆರ್.ಜಿ ಮತ್ತು ಶ್ರೀ ಬಿ. ಬಾಲರಾಜು, ಡಿ.ವೈ.ಎಸ್.ಪಿ. ಶಿವಮೊಗ್ಗ-ವಿ, ಉಪವಿಭಾಗರವರ ಮೇಲ್ವಿಚಾರಣೆಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳನ್ನು ಪತ್ತೆಹಚ್ಚಿ ದಾಳಿ ಮಾಡಲು ಶ್ರೀ ಸಂತೋಷ್ ಪಾಟೀಲ್ ಪಿ.ಐ ಸಿ.ಇ.ಎನ್ ಪೊಲೀಸ್ ಠಾಣೆ ಶಿವಮೊಗ್ಗರವರ ನೇತೃತ್ವದ ವಿಶೇಷ ತಂಡವನ್ನು ರಚಿಸಲಾಗಿತ್ತು ಎಂದರು.
.          ‌‌‌‌‌‌‌‌‌ಆರೋಪಿ ಸತೀಶ್....
ನಂತರ ದಿನಾಂಕ:16-04-2023 ರಂದು ಶಿವಮೊಗ್ಗ ನಗರದ ವಾಸಿ ಶ್ರೀ ಕಾರ್ತಿಕ್ ರವರು ತನ್ನ ಸ್ನೇಹಿತನಾದ ಸತೀಶನು ಆನ್ ಲೈನ್ ವೆಬ್ ಸೈಟ್ / ಆಪ್‌ನಲ್ಲಿ ಕ್ರಿಕೆಟ್ ಬೆಟ್ಟಿಂಗ್ ಜೂಜಾಟ ಆಡಿಸುತ್ತಿದ್ದು, ಕಾರ್ತಿಕ್ ನಿಗೂ ಸಹಾ ಕ್ರಿಕೆಟ್ ಬೆಟ್ಟಿಂಗ್ ಜೂಜಾಟ ಆಡು ಹೆಚ್ಚಿನ ಹಣವನ್ನು ಗಳಿಸಿಕೊಡುತ್ತೇನೆಂದು ಹೇಳಿದ್ದರಿಂದ, 3 ರಿಂದ 4 ವರ್ಷಗಳಿಂದ ಸತೀಶನಿಗೆ ಹಣವನ್ನು ಕೊಡುತ್ತಾ ಬಂದಿದ್ದು, ಆದರೆ ಆತನು ನಾನು ಕೊಟ್ಟ ಹಣವನ್ನು ವಾಪಸ್ ಕೊಡದೇ ಬೆಟ್ಟಿಂಗ್‌ನಲ್ಲಿ ನಿಮ್ಮ ಹಣ ಹೋಯಿತು. ಅಂತ ಹೇಳಿ ಸುಮಾರು 'ರೂ. 3,00,000/- ಹಣವನ್ನು ಹಿಂದಿರುಗಿಸದೇ ನಂಬಿಸಿ ಮೋಸ ಮಾಡಿರುತ್ತಾನೆಂದು ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 36/2023 ಕಲಂ 78(1) (ಎ)(6) ಕರ್ನಾಟಕ ಪೊಲೀಸ್ ಕಾಯ್ದೆ ಮತ್ತು ಕಲಂ 420 ಐಪಿಸಿ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಲಾಗಿರುತ್ತದೆ ಎಂದರು.

ಆರೋಪಿತ ಸತೀಶ ವೈ ಈತನು ಆನ್ ಲೈನ್ ಬೆಟ್ಟಿಂಗ್ ಆಪ್ /ವೆಬ್ ಸೈಟ್ ಗಳಲ್ಲಿ ಹೂಡಿಕೆ ಮಾಡಿದ್ದ *ಒಟ್ಟು 18,26,336 ರೂ ಹಣವನ್ನು ಜಪ್ತಿ ಮಾಡಿ, 02 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿದ್ದು,” ಸದರಿ ಪ್ರಕರಣವೂ ಸೇರಿದಂತೆ ಎರಡೂ ಪ್ರಕರಣಗಳಿಗೆ ಸಂಬಂಧಿಸಿದ “ಒಟ್ಟು 25,46,336/- ರೂ. ಗಳನ್ನು ಜಪ್ತಿ ಮಾಡಿ, 05 ಮೊಬೈಲ್ ಫೋನ್ ಗಳು ಮತ್ತು 1 ಮೊಪೆಡ್ ಬೈಕ್ ಅನ್ನು ವಶ ಪಡಿಸಿಕೊಂಡು, ಆರೋಪಿ ಸತೀಶ್, 28 ವರ್ಷ, ಹೊಸಮನೆ, ಶಿವಮೊಗ್ಗ” ಈತನನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ ಎಂದರು.

ಸದರಿ ತಂಡದ ಉತ್ತಮವಾದ ಕಾರ್ಯವನ್ನು ಮಿಥುನ್ ಕುಮಾರ್ ಪೊಲೀಸ್ ಅಧೀಕ್ಷಕರು ಶಿವಮೊಗ್ಗಜಿಲ್ಲೆ ರವರು ಅಭಿನಂದಿಸಿ ಪ್ರಶಂಸಿದರು 

* ಸಾರ್ವಜನಿಕರ ಗಮನಕ್ಕೆ: ಜಿಲ್ಲಾ ಪೊಲೀಸ್ ಪ್ರಕಟಣೆ:
1. ಆನ್ ಲೈನ್ ಕ್ರಿಕೇಟ್ ಬೆಟ್ಟಿಂಗ್/ಮಟ್ಕಾ/ಜೂಜಾಟ ಮುಂತಾದವುಗಳು ಕಾನೂನು ಬಾಹಿರ ಚಟುವಟಿಕೆಗಳಾಗಿದ್ದು ಅವುಗಳಲ್ಲಿ ತೊಡಗಿದವರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು. 
2, ಆನ್ ಲೈನ್ ಕ್ರಿಕೇಟ್ ಬೆಟ್ಟಿಂಗ್ ಮಟ್ಕಾ ಜೂಜಾಟ ಮುಂತಾದವುಗಳಿಂದ ಆರ್ಥಿಕ ನಷ್ಟ, ಮಾನ ಹಾನಿ, ಪ್ರಾಣ ಹಾನಿ ಉಂಟಾಗುತ್ತದೆ ಆದ್ದರಿಂದ ಇಂತಹ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಬಾರದು. 
3. ಯಾರಾದರೂ 
ನಿಮ್ಮ ಸುತ್ತಮುತ್ತಲು ಕಾನೂನು ಬಾಹಿರ ಚಟುವಟಿಕೆಗಳಾದ ಆನ್ ಲೈನ್ ಕ್ರಿಕೇಟ್ ಬೆಟ್ಟಿಂಗ್ /ಮಟ್ಕಾ/ಜೂಜಾಟ ಮುಂತಾದವುಗಳಲ್ಲಿ ತೊಡಗಿರುವ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ತಕ್ಷಣ 112 ತುರ್ತು ಸಹಾಯವಾಣಿ : ಹತ್ತಿರದ ಪೊಲೀಸ್ ಠಾಣೆ / ಪೊಲೀಸ್ ಕಂಟ್ರೋಲ್ ರೂಂ ನಂ 9480803300/ 08182261413 ಗೆ ಮಾಹಿತಿ ನೀಡುವುದು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.