ಬಿಜೆಪಿಯ ಹಿರಿಯ 22 ಶಾಸಕರಿಗೆ ಟಿಕೆಟ್​​ ಇಲ್ಲ: ಹೈಕಮಾಂಡ್ ಸೂಚನೆ !! ಶಿವಮೊಗ್ಗದಿಂದ ಯಾರು ಅಂತೀರಾ ನೋಡಿ...

ನವದೆಹಲಿ:ಬಿಜೆಪಿಯ ಹಿರಿಯ 22 ಶಾಸಕರಿಗೆ ಟಿಕೆಟ್​​ ಇಲ್ಲ ಎಂದು ಹೈಕಮಾಂಡ್ ನಿಂದ ಸೂಚನೆ ಬಂದಿದ್ದು, ರಾಜೀನಾಮೆ ನೀಡಿ ಪಕ್ಷಕ್ಕೆ ಕೆಲಸಮಾಡಿ ಎಂಬ ಸೂಚನೆ ಮೇರೆಗೆ ಶಿವಮೊಗ್ಗ ಶಾಸಕರಾದ ಕೆ.ಎಸ್.ಈಶ್ವರಪ್ಪ ಸಹ ರಾಜಿನಾಮೆ ನೀಡಿದ್ದಾರೆ. ಅದೇ ರೀತಿ  ಹೈಕಮಾಂಡ್ ನಿಂದ ಕ್ಷೇತ್ರ ತ್ಯಾಗ ಮಾಡುವಂತೆ 22 BJP ಹಿರಿಯ ನಾಯಕರಿಗೆ ಕ್ಷೇತ್ರವನ್ನು ಬಿಟ್ಟುಕೊಡುವಂತೆ ದೂರವಾಣಿ ಕರೆ ಮೂಲಕ ಸೂಚನೆ ನೀಡಿದೆ ಎನ್ನಲಾಗುತ್ತಿದೆ. 

ಸ್ವತಃ ಮಾಜಿ ಸಿಎಂ ಜಗದೀಶ್ ಶೆಟ್ಟರ್  ತನಗೆ ದೂರವಾಣಿ ಕರೆ ಬಂದಿದ್ದು ನಿಜ, ಹೊಸಬರಿಗೆ ಅವಕಾಶ ನೀಡುವಂತೆ ಕೋರಿದ್ದಾರೆ ಎಂದು  ಹೇಳಿದ್ದಾರೆ. 

ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿಯ 22 ಹಾಲಿ ಶಾಸಕರಿಗೆ ಟಿಕೆಟ್​​ ಸಿಗುವುದು ಬಹುತೇಕ ಡೌಟ್ ಎಂದು ಬಿಜೆಪಿಯ  ಉನ್ನತ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ.

  ಇವರಲ್ಲದೆ, ಮಾಜಿ ಸಚಿವರಾದ ಎಸ್.ಸುರೇಶ್ ಕುಮಾರ್, ಆರ್.ಅಶೋಕ್, ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಎಸ್.ಎ.ರಾಮದಾಸ್, ಬಿ.ಸಿ.ನಾಗೇಶ್​​ಗೂ ವರಿಷ್ಠರು ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಒಟ್ಟಿನಲ್ಲಿ ಇದೀಗ ಅಮಿತ್ ಶಾ ರವರು ಪಟ್ಟಿಯನ್ನು ಪರಿಶೀಲನೆ ಮಾಡುತ್ತಿದ್ದಾರೆ ಇನ್ನೆರಡು ದಿನದಲ್ಲಿ ಫೈನಲ್ ಪಟ್ಟಿ ಬಿಡುಗಡೆ ಯಾಗುವ ಸಾದ್ಯತೆ ಇದೆ ಎನ್ನಲಾಗಿದೆ.

ಪಕ್ಷದ ಕಾರ್ಯಕರ್ತರು  ಬೇಸರಮಾಡಿ ಕೊಳ್ಳಬೇಡಿ: ಈಶ್ವರಪ್ಪ ಪುತ್ರ ಕಾಂತೇಶ್

ಶಿವಮೊಗ್ಗ: ನನ್ನ ತಂದೆ ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ್ದು ನಿಜ. ಪಕ್ಷದ ಯಾವ ಕಾರ್ಯಕರ್ತರು ಕೂಡ ಬೇಸರ ಮಾಡಿಕೊಳ್ಳ ಬೇಡಿ. ಯೋಚನೆ ಮಾಡಿಯೇ ನಮ್ಮ ತಂದೆ ತೀರ್ಮಾನ ತೆಗೆದುಕೊಂಡಿದ್ದಾರೆ. ಒತ್ತಡದಿಂದ ಈಶ್ವರಪ್ಪ ನಿವೃತ್ತಿ ಘೋಷಿಸಿಲ್ಲ ಎಂದು ಬಿಜೆಪಿ ಹಿರಿಯ ನಾಯಕ, ಮಾಜಿ ಸಚಿವ ಕೆ.ಎಸ್​​.ಈಶ್ವರಪ್ಪ ಪುತ್ರ ಕಾಂತೇಶ್ ಹೇಳಿಕೆ ನೀಡಿದ್ದಾರೆ.

  ಹೈಕಮಾಂಡ್ ತೀರ್ಮಾನಕ್ಕೆ ಬದ್ಧ: ಈಶ್ವರಪ್ಪ

ಶಿವಮೊಗ್ಗ: ಪ್ರತಿ ಕ್ಷೇತ್ರಕ್ಕೂ ಮೂವರ ಹೆಸರನ್ನು ನಾಯಕರು ಕಳಿಸಿದ್ದಾರೆ. ಅಂತಿಮವಾಗಿ ಅಭ್ಯರ್ಥಿ ಬಗ್ಗೆ ವರಿಷ್ಠರು ತೀರ್ಮಾನ ಮಾಡುತ್ತಾರೆ. ಈ ತೀರ್ಮಾನಕ್ಕೆ ಬದ್ಧನಾಗಿದ್ದೇನೆ. ಯಾವುದೇ ಕ್ಷೇತ್ರಕ್ಕೆ ನನ್ನ ಹೆಸರು ಪರಿಗಣಿಸದಂತೆ ಮನವಿ ಮಾಡಿದ್ದೇನೆ ಎಂದು ಕೆಎಸ್ ಈಶ್ವರಪ್ಪ ಹೇಳಿದ್ದಾರೆ.

ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಮೂವರ ಹೆಸರು ಮುಂಚೂಣಿಯಲ್ಲಿ....

 ಬಿಜೆಪಿ  ಹೈಕಮಾಂಡ್ ಇದೀಗ ಶಿವಮೊಗ್ಗದಲ್ಲಿ ಹೊಸಬರಿಗೆ ಮಣೆಯಾಕಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. 

 ಶಿವಮೊಗ್ಗ ಬಿಜೆಪಿ ಹಾಗೂ ಆರ್.ಎಸ್.ಎಸ್. ಮುಖಂಡ  ಭಾನುಪ್ರಕಾಶ್ ಮಗ ಹರಿಕೃಷ್ಣ ಹೆಸರು ಇದೀಗ ಮಂಚೂಣಿಯಲ್ಲಿದ್ದು, ಅವರಿಗೆ ಬಹುತೇಕ ಟಿಕೇಟ್ ಘೋಷಣೆ ಯಾಗುವ ಸಾದ್ಯತೆ ಇದೆ ಎನ್ನಲಾಗಿದೆ. 
ನಂತರ ಸ್ಥಾನದಲ್ಲಿ ಡಾಕ್ಟರ್ ಧನಂಜಯ ಸರ್ಜಿಯವರ ಹೆಸರು ಸಹ ಬಿಜೆಪಿಯ ವಲಯದಲ್ಲಿ ಕೇಳಿಬರುತ್ತಿದೆ. 
ಮೂರನೇ ಹೆಸರು.ಶಿವಮೊಗ್ಗ ಶಾಸಕ ಕೆ.ಎಸ್.ಈಶ್ವರಪ್ಪ ಮಗ ಕೆ.ಇ.ಕಾಂತೇಶ್ ಹೆಸರು ಕೇಳಿ ಬರುತ್ತಿದೆ.

ಒಟ್ಟಿನಲ್ಲಿ ಬಿಜೆಪಿಯ ಹೈಕಮಾಂಡ್ ತೀರ್ಮಾನ 22 ಬಿಜೆಪಿಯ ಹಿರಿಯರಿಗೆ ಗೇಟ್ ಪಾಸ್ ನೀಡಿ, ಹೊಸ ಮುಖಗಳು ಯುವಕರಿಗೆ ಟಿಕೇಟ್ ನೀಡಲು ನಿರ್ಧರಿಸಿದ್ದಾರೆ ಎಂದು ಸಾರ್ವಜನಿಕವಾಗಿ ಚರ್ಚಿತವಾಗುತ್ತಿರುವ ವಿಷಯವಾಗಿದೆ. 

ಒಟ್ಟಿನಲ್ಲಿ ಬಿಜೆಪಿಯ ಪಟ್ಟಿ ಬಿಡುಗಡೆ ಗೆ ಕೌಂಟ್ ಡೌನ್ ಶುರುವಾಗಿದೆ. ಮುಂದೇನಾಗುವುದು ಕಾದು ನೋಡುವ....

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.