ನೇರಪಾವತಿ ಪೌರಕಾರ್ಮಿಕರಿಗೆ ಖಾಯಂ ನೌಕರರು ಎಂದು ಸರ್ಕಾರದಿಂದ ಆದೇಶ:ಶಿವಮೊಗ್ಗ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಅಧ್ಯಕ್ಷ ಪೆಂಚಲಯ್ಯ ರಿಂದ ಅಭಿನಂದನೆ

ಶಿವಮೊಗ್ಗ: ನೇರಪಾವತಿ ಪೌರಕಾರ್ಮಿಕರು 20 ವರ್ಷಗಳಿಂದ ಹೊರಗುತ್ತಿಗೆಯಲ್ಲಿ ದುಡಿಯುತ್ತಿದ್ದರು ಇದೀಗ ಅಂತಹ ಪೌರಕಾರ್ಮಿಕರನ್ನು ಕರ್ನಾಟಕ ಸರ್ಕಾರ  ಇಷ್ಟು ದೊಡ್ಡ ಮಟ್ಟದಲ್ಲಿ ಖಾಯಂ ಮಾಡಿರುವುದು ಇತಿಹಾಸ. ಹಾಗೂ ಪೌರ ಕಾರ್ಮಿಕರನ್ನು ಇಲ್ಲಿಯವರೆಗೆ ಯಾವ ಸರ್ಕಾರಗಳೂ ಪರಿಗಣಿಸಿರಲಿಲ್ಲ.

ಇದೀಗ ಬಿಜೆಪಿ ಸರ್ಕಾರ ಮತ್ತು ಶಿವಮೊಗ್ಗ ಪಾಲಿಕೆ ಆಯುಕ್ತರು ಹಾಗೂ ಅಧಿಕಾರಿ ವರ್ಗ ದಲಿತ ಪೌರಕಾರ್ಮಿಕರ ಕಷ್ಟಗಳನ್ನು ಆಲಿಸಿ ,ಇದೀಗ ಪೌರ ಕಾರ್ಮಿಕರನ್ನು ಸರ್ಕಾರ ನೌಕರರೆಂದು ಘೋಷಣೆ ಮಾಡಿ ಸರ್ಕಾರ ಆದೇಶ ಮಾಡಿದೆ.ಸರ್ಕಾರದ ಅಧಿಸೂಚನೆ  ಆದೇಶಕ್ಕೆ  ಶಿವಮೊಗ್ಗ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಪೆಂಚಲಯ್ಯ ಹರ್ಷ ವ್ಯಕ್ತಪಡಿಸಿ ಹೋರಾಟಕ್ಕೆ ಬೆಂಬಲಿಸಿ ಶ್ರಮಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ್ದಾರೆ.
ರಾಜ್ಯದಲ್ಲೇ 1133 ಖಾಯಮಾತಿ ಆದೇಶವಾಗಿದ್ದು ಹಾಗೂ ಮಾರ್ಚ್ 14 ರ ಒಳಗೆ ಎಲ್ಲಾ ನೌಕರರಿಗೂ ಖಾಯಮಾತಿ ಮಾಡಲೇಬೇಕೆಂಬ ಸರ್ಕಾರದ ಆದೇಶ ಅಭಿನಂದನೀಯವಾದದ್ದು.
 ಪೆಂಚಲಯ್ಯ ರವರು ವಿಶೇಷವಾಗಿ ಪಾಲಿಕೆ ಆಯುಕ್ತರಾದ ಶ್ರೀಯುತ ಮಾಯಣ್ಣಗೌಡರವರನ್ನ ಹಾಡಿ ಹೋಗಳಿದ್ದಲ್ಲದೆ ಅವರ ಕಾರ್ಯವನ್ನು ಪ್ರಯತ್ನವನ್ನು ಶ್ಲಾಘಿಸಿದರು ಅನಂತ ಧನ್ಯವಾದಗಳನ್ನ ಮತ್ತು ಅಭಿನಂದನೆಗಳನ್ನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಚಿವರುಗಳಿಗೆ, ಕರ್ನಾಟಕ ಸರ್ಕಾರಕ್ಕೆ ಹಾಗೂ ಎಲ್ಲಾ ಪಾಲಿಕೆ ಅಧಿಕಾರಿವೃಂದದವರಿಗೆ ಮೇಯರ್‌ ರವರಿಗೆ ಹಾಗೂ ಜನಪ್ರತಿನಿಧಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
 
 ಇನ್ನೂ ನೇರಪಾವತಿಯಲ್ಲಿ ಉಳಿದಂತಹ ನೌಕರರಿಗೆ ಖಾಯಮಾತಿ ಆದೇಶ ಮಾಡಬೇಕು ಹಾಗೂ ಹೊರಗುತ್ತಿಗೆಯಲ್ಲಿ ಸುಮಾರು 20 ವರ್ಷಗಳಿಂದ ಕೆಲಸ ಮಾಡುತ್ತಿರುವ ಲೋಡರ್ ನೌಕರರು, ವಾಹನ ಚಾಲಕರು ಮತ್ತು ಕ್ಲೀನರ್, ಒಳಚರಂಡಿ ವಿಭಾಗದ ನೌಕರರುಗಳನ್ನು ಖಾಲಿ ಇರುವ ಖಾಯಂ ಹುದ್ದೆಗಳಿಗೆ ಭರ್ತಿ ಮಾಡಿ ಉಳಿದವರನ್ನು ನೇರಪಾವತಿ ಅಡಿಯಲ್ಲಿ ತಂದು ಮುಂದಿನ ದಿನಗಳಲ್ಲಿ ಅವರನ್ನೂ ಸಹ ಖಾಯಂ ಮಾಡಬೇಕೆಂದು   ಶಿವಮೊಗ್ಗ ಮಹಾನಗರಪಾಲಿಕೆ ನೇರಪಾವತಿ ಪೌರ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಅಧ್ಯಕ್ಷರಾದ ಪೆಂಚಲಯ್ಯ ಹಾಗೂ ಪಧಾದಿಕಾರಿಗಳಾದ   
ಜಿಲ್ಲಾ ಉಪಾಧ್ಯಕ್ಷರು 
ನಾಗರಾಜ್ ಸಿ 
ಜಿಲ್ಲಾ ಪ್ರಧಾನ ಕಾರ್ಯದರ್ಶಿ 
ರವೀಶ 
ಜಿಲ್ಲಾ ಖಜಾಂಚಿ 
ನರಸಿಂಹಮೂರ್ತಿ ವಿನಂತಿಸಿದ್ದಾರೆ.

ಸೇವೆ ಖಾಯಂ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಶಿವಮೊಗ್ಗ ದಲ್ಲಿ ಈ ಹಿಂದೆ ಬೃಹತ್ ಪ್ರತಿಭಟನೆ ನಡೆಸಲಾಗಿತ್ತು:

ಶಿವಮೊಗ್ಗದಲ್ಲಿ ಸೇವೆ ಖಾಯಂ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಶಿವಮೊಗ್ಗ ಮಹಾನಗರ ಪಾಲಿಕೆ ನೇರ ಪಾವತಿ ಪೌರ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘ ಮತ್ತು ಡಿಎಸ್ಎಸ್ ಸಂಘಟನೆಗಳ ಬೆಂಬಲದಿಂದ ಜಿ  ಲ್ಲಾಧಿಕಾರಿ ಕಚೇರಿ ಆವರಣದಲ್ಲಿ  ಪ್ರತಿಭಟನೆ ನಡೆಸಲಾಗಿತ್ತು.
ಮಹಾನಗರ ಪಾಲಿಕೆ ಆವರಣದ ಅಂಬೇಡ್ಕರ್ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಪೌರ ಕಾರ್ಮಿಕರು ಬೇಡಿಕೆ ಈಡೇರಿಸದಿದ್ದರೆ  ತಾಲ್ಲೂಕುವಾರು ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗುವುದು ಎಂದು ಸರ್ಕಾರ ವನ್ನು ಎಚ್ಚರಿಸಿದ್ದರು.
ನೇರಪಾವತಿ ಮತ್ತು  ಹೊರಗುತ್ತಿಗೆ ಪೌರ ಕಾರ್ಮಿಕರು, ಹೊರಗುತ್ತಿಗೆ ಕಸದ ವಾಹನ  ಚಾಲಕರು, ಒಳಚರಂಡಿ ಸ್ವಚ್ಛತಾ ಕಾರ್ಮಿಕರು, ಲೋಡರ್ಸ್, ಹೆಲ್ಪರ್ಸ್ ಹಾಗೂ ಮನೆಮನೆ ಕಸ ಸಂಗ್ರಹಿಸುವವರು ಸೇರಿ ಎಲ್ಲ ಸ್ವಚ್ಛತಾ ಕಾರ್ಮಿಕರನ್ನು ಏಕಕಾಲಕ್ಕೆ ಖಾಯಂಗೊಳಿಸಬೇಕು ಎಂದು ಒತ್ತಾಯಿಸಿದ್ದರು.

ನೇರಪಾವತಿ  ಪೌರ ಕಾರ್ಮಿಕರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಕಾರ್ಮಿಕರಿದ್ದು, ಮೂಲ ಸೌಲಭ್ಯಗಳಾದ ಶೌಚಾಲಯ, ಕುಡಿಯುವ ನೀರು, ಹೆರಿಗೆ ಭತ್ಯೆ, ವಿಶ್ರಾಂತಿ ಗೃಹ, ವೈದ್ಯಕೀಯ ಸೌಲಭ್ಯ ನೀಡುತ್ತಿಲ್ಲ ಎಂದು ದೂರಿದರಲ್ಲದೇ, ಈ ಸೌಲಭ್ಯಗಳನ್ನು ಸರ್ಕಾರ ತಕ್ಷಣ ಜಾರಿಗೊಳಿಸಬೇಕೆಂದು ಆಗ್ರಹಿಸಿದ್ದರು. 
ಇದೀಗ ಸರ್ಕಾರ ನೇರಪಾವತಿ ಪೌರಕಾರ್ಮಿಕರನ್ನ ಪಾಲಿಕೆ ನೌಕರರೆಂದು ಖಾಯಂ ಮಾಡಿ ತಾತ್ಕಾಲಿಕ ಪಟ್ಟಿಯ ಜೊತೆಯಲ್ಲಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಇದೀಗ ಪೌರ ಕಾರ್ಮಿಕರ ಹೋರಾಟಕ್ಕೆ ಜಯ ಸಿಕ್ಕಂತೆ ಆಗಿದೆ.

*ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ: ಆಕ್ಷೇಪಣೆಗಳ ಆಹ್ವಾನ*
 ಶಿವಮೊಗ್ಗ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಾದ ಭದ್ರಾವತಿ, ಸಾಗರ ನಗರಸಭೆ ಹಾಗೂ ಶಿಕಾರಿಪುರ, ಸೊರಬ, ಶಿರಾಳಕೊಪ್ಪ ಪುರಸಭೆ ಮತ್ತು ತೀರ್ಥಹಳ್ಳಿ, ಹೊಸನಗರ, ಜೋಗ್-ಕಾರ್ಗಲ್ ಪಟ್ಟಣ ಪಂಚಾಯಿತಿ ಇಲ್ಲಿ ಖಾಲಿ ಇರುವ ಪೌರಕಾರ್ಮಿಕ ಹುದ್ದೆಗಳನ್ನು ಕರ್ನಾಟಕ ಪೌರಸಭೆಗಳ (ರಾಜ್ಯದ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳಲ್ಲಿನ ಪೌರಕಾರ್ಮಿಕ ನೇಮಕಾತಿ) (ವಿಶೇಷ) ನಿಯಮಗಳು 2022 ರ ರೀತ್ಯಾ ಭರ್ತಿ ಮಾಡಲು ತಾತ್ಕಾಲಿಕ ಆಯ್ಕೆ ಪಟ್ಟಿಯ ಅಧಿಸೂಚನೆಯನ್ನು ಹೊರಡಿಸಲಾಗಿದೆ.
      ಈ ತಾತ್ಕಾಲಿಕ ಆಯ್ಕೆ ಪಟ್ಟಿಗೆ ಆಕ್ಷೇಪಗಳೇನಾದರು ಇದ್ದಲ್ಲಿ ಈ ಅಧಿಸೂಚನೆ ಹೊರಡಿಸಿದ 7 ದಿನಗಳೊಳಗಾಗಿ ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ ಶಿವಮೊಗ್ಗ ಇಲ್ಲಿ ಕಚೇರಿ ವೇಳೆಯಲ್ಲಿ ಲಿಖಿತ ರೂಪದಲ್ಲಿ ದಾಖಲೆಗಳೊಂದಿಗೆ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ.
      ಈ ಅಧಿಸೂಚನೆಯನ್ನು ಆಯಾ ನಗರ ಸ್ಥಳೀಯ ಸಂಸ್ಥೆಗಳ ವೆಬ್‍ಸೈಟ್‍ನಲ್ಲಿ ಹಾಗೂ ಜಿಲ್ಲಾ ನಗರಾಭಿವೃದ್ಧಿ ಕೋಶದ ವೆಬ್‍ಸೈಟ್ ಹಾಗೂ ಸಂಬಂಧಿಸಿದ ನಗರ ಸ್ಥಳೀಯ  ಸಂಸ್ಥೆಗಳ ಕಚೇರಿ ಹಾಗೂ ಜಿಲ್ಲಾ ನಗರಾಭಿವೃದ್ಧಿ ಕೋಶ, ಜಿಲ್ಲಾಧಿಕಾರಿಗಳ ಕಾರ್ಯಾಲಯ ಶಿವಮೊಗ್ಗ ಇಲ್ಲ್ಲಿ ಪ್ರಕಟಿಸಲಾಗಿರುತ್ತದೆಂದು ಶಿವಮೊಗ್ಗ ಪೌರಕಾರ್ಮಿಕ ನೇರ ನೇಮಕಾತಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳಾದ ಡಾ.ಆರ್.ಸೆಲ್ವಮಣಿ ತಿಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.