ವಿವಿಧ ಕ್ರೀಡೆಗಳಲ್ಲಿ ನೈರುತ್ಯ ರೈಲ್ವೆ ಕ್ರೀಡಾಪಟುಗಳ ಸಾಧನೆ:ಸಮರವೀರ್ ಸಾಹಿ ಗಾಲ್ಫ್ ಚಾಂಪಿಯನ್‌ಶಿಪ್

Shri  Jaiveer, Golf Player of SWR receiving Samarvir Sahi Golf Chamionship trophy.

*1 ಸಮರವೀರ್ ಸಾಹಿ ಗಾಲ್ಫ್ ಚಾಂಪಿಯನ್‌ಶಿಪ್:*
ನೈರುತ್ಯ ರೈಲ್ವೆ ಹುಬ್ಬಳ್ಳಿಯ ರೈಲ್ವೆ ವರ್ಕ್‌ ಶಾಪ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಜೈವೀರ್‌ ಅವರು ಇತ್ತೀಚಿಗೆ ಚಂಡೀಗಡದ ಗಾಲ್ಫ್‌ ಕ್ಲಬ್‌ನಲ್ಲಿ ನಡೆದ ಸಮರವೀರ್ ಸಾಹಿ ಗಾಲ್ಫ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಚಾಂಪಿಯನ್‌ ಆಗಿ ಹೊರ ಹೊಮ್ಮಿದ್ದಾರೆ. 
SWR's Cricket Team

*2 ಹಾಕಿ ತಂಡ ಚಾಂಪಿಯನ್‌:*
ಮಧ್ಯಪ್ರದೇಶದ ಗ್ವಾಲಿಯರ್‌ನ ಸ್ಪೋರ್ಟ್ಸ್ ಅಸೋಸಿಯೇಷನ್ ವತಿಯಿಂದ ಇತ್ತೀಚಿಗೆ ಆಯೋಜಿಸಿದ ಉತ್ತರ-ಮಧ್ಯ ರೈಲ್ವೆ ವಲಯದ 80ನೇ ಅಖಿಲ ಭಾರತ ರೈಲ್ವೆ ಹಾಕಿ (ಪುರುಷರು) ಚಾಂಪಿಯನ್‌ಶಿಪ್ (ಲೀಗ್‌ ಹಂತ) ದಲ್ಲಿ ನೈರುತ್ಯ ರೈಲ್ವೆ ವಲಯದ ಹಾಕಿ ತಂಡ ಭಾಗವಹಿಸಿ ಮೊದಲ ಬಾರಿಗೆ ಚಾಂಪಿಯನ್ ಆಗಿ, ಇತಿಹಾಸ ಸೃಷ್ಟಿಸಿದೆ. ಮಾರ್ಚ್‌ 28 ರಿಂದ ಕಪುರ್ತಲಾದ ರೈಲ್ ಕೋಚ್ ಫ್ಯಾಕ್ಟರಿಯಲ್ಲಿ ನಡೆಯುವ ನಾಕ್‌ ಔಟ್‌ ಹಂತದಲ್ಲಿ ಮುಂದಿನ ಪಂದ್ಯಾವಳಿಗಳನ್ನು ಆಡಲಿದೆ. 
SWR's Hockey Team

*3 ಕ್ರಿಕೆಟ್ ತಂಡ ಅಂತಿಮ ಸುತ್ತಿಗೆ ಪ್ರವೇಶ:*
ಕಪುರ್ತಲಾದ ರೈಲ್ ಕೋಚ್ ಫ್ಯಾಕ್ಟರಿಯಲ್ಲಿ ಇತ್ತೀಚಿಗೆ ನಡೆದ 66ನೇ ಅಖಿಲ ಭಾರತ ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ನೈರುತ್ಯ ರೈಲ್ವೆ ವಲಯದ ಪುರುಷರ ಕ್ರಿಕೆಟ್‌ ತಂಡವು ಅರ್ಹತಾ  ಹಂತದ 10 ಪಂದ್ಯಗಳಲ್ಲಿ ಉತ್ತಮ ಪ್ರದರ್ಶನದ ಮೂಲಕ 7 ಪಂದ್ಯಗಳಲ್ಲಿ ಜಯಶಾಲಿಯಾಗಿ  ನಾಕ್‌ ಔಟ್‌ ಹಂತ ಪ್ರವೇಶ ಮಾಡಿದೆ.  
ಈ ವಿವಿಧ ಕ್ರೀಡೆಗಳಲ್ಲಿ ಸಾಧನೆ ಮಾಡಿ, ಮುಂದಿನ ಹಂತದ ಪ್ರವೇಶಕ್ಕೆ ಅರ್ಹತೆ ಪಡೆದ ಎಲ್ಲಾ ಕ್ರೀಡಾಪಟುಗಳಿಗೆ ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಸಂಜೀವ್‌ ಕಿಶೋರ್‌ ಅವರು ಅಭಿನಂದಿಸಿದ್ದಾರೆ. 


                                                                  

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.