ಈಶ್ವರಪ್ಪ ತಮ್ಮ ಮಗನಿಗೆ ಟಿಕೇಟ್ ಕೇಳಿದ್ದು ಸರಿಯೇ...ನಾನು ಸಹ ಶಿವಮೊಗ್ಗ ವಿಧಾನ ಸಭಾ ಕ್ಷೇತ್ರದ ಪ್ರಬಲ ಆಕಾಂಕ್ಷಿ: ಆಯನೂರು ಮಂಜುನಾಥ್

ಶಿವಮೊಗ್ಗ:   32 ವರ್ಷಗಳ ಕಾಲ ನಾನು ಬಿಜೆಪಿಯಲ್ಲಿ ಇದ್ದು, ರಾಜಕಾರಣ ಮಾಡಿಕೊಂಡು ಬಂದಿದ್ದೆನೆ. ಯಾವುದೇ ಕಪ್ಪು ಚುಕ್ಕೆ ಇಲ್ಲ. ತನ್ನ ಮಗನಿಗೆ ಈಶ್ವರಪ್ಪ ಟಿಕೇಟ್ ಕೇಳಿದ ಕಾರಣ ನಾನು ಸಹ ಶಿವಮೊಗ್ಗ ವಿಧಾನ ಸಭಾ ಕ್ಷೇತ್ರ ಆಕಾಂಕ್ಷಿ ಎಂದು ಹೇಳಿದ್ದೆನೆ. ಲಜ್ಜೆಗೆಟ್ಟ ಕೆಲಸ ಮಾಡಿಲ್ಲ. ಯಾವುದೇ ಅಪಾದನೆ ಸಹ ಹೊಂದಿಲ್ಲ ಎಂದು ಆಯನೂರು ಮಂಜುನಾಥ್ ಹೇಳಿದರು.
ಅವರು ಇಂದು ಖಾಸಾಗಿ ಹೋಟೆಲ್ ಸಭಾಂಗಣದಲ್ಲಿ ಸುದ್ದಿಗೊಷ್ಟಿ ನಡೆಸಿ ಮಾತನಾಡಿದರು.
ನನಗೆ ಕೆಳಮಟ್ಟದ ಟೀಕೆಟಿಪ್ಪಣಿಗಳನ್ನ ಸಾಮಾಜಿಕ ಜಾಲತಾಣದಲ್ಲಿ ಮಾಡಲಾಗುತ್ತಿದೆ. ನನ್ನ ಬಗ್ಗೆ ಟೀಕೆ ಮಾಡುವರು ನನ್ನ ಇತಿಹಾಸ ನಾನು ನಡೆದುಕೊಂಡ ದಾರಿಗಳ ಬಗ್ಗೆ. ತಿಳಿದುಕೊಳ್ಳಬೇಕು‌.ಬಿಸ್ಕೆಟ್ ಗಾಗಿ ಬದುಕುವವರು ಅರ್ಥಮಾಡಿಕೊಳ್ಳಬೇಕು.ಸಾಮಾಜಿಕ ಜಾಲತಾಣದಲ್ಲಿ ಆಶ್ಲೀಲವಾಗಿ ನಿಂದಿಸುವುದನ್ನ ಬಿಡಿ ಎಂದರು.

ಮೋದಿ ಅನಿಸಿಕೆಗಳ ವಿರುದ್ದ ಮಾತನಾಡುವರು ಮೋದಿ ವಿರೋದಿಗಳು ಆಗುತ್ತಾರೆ‌ ಸರಸಂಚಾಲಕರು ಇಂದು ವಿವಿಧ ಸಮೂಹಗಳ‌ ಬೇಸಿಗೆ ಹಾಕಲು ಹೊರಟ ಸಂದರ್ಭದಲ್ಲಿ ಕೆಲವರು ಹರಕು ಬಾಯಿಂದ ಸಮಾಜದ ಸ್ವಾಸ್ಥ್ಯ ಕದಡಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭಾನುಪ್ರಕಾಶ್, ಸಿದ್ದರಾಮಣ್ಣ ಇನ್ನು ಮುಂತಾದವರು ಇದ್ದಾರೆ ಅವರಿಗೆ ಟಿಕೇಟ್ ಕೊಟ್ಟರೇ ಅಭ್ಯಂತರವಿಲ್ಲ. ನಾನು ಸರ್ಕಾರದ ಕೆಲಸವಾಗಬೇಕಾದರೇ ಸರ್ಕಾರ ವಿರುದ್ದ ಹೋರಾಟ ಮಾಡಿಕೊಂಡು ಬಂದಿದ್ದೆನೆ.ಅತ್ಯಂತ ಒಳ್ಳೆಯ ಸಂಸದ ಪಟು ಎಂಬ ಖ್ಯಾತಿ ಪಡೆದಿದ್ದೆನೆ. ಇವತ್ತು ಇರುವ ಹೈವೆಗಳನ್ನ ಮಂಜೂರು ಮಾಡಿ ತಂದವನು ನಾನು... ನಾನು ಕೇವಲ 13 ತಿಂಗಳ ಸಂಸದನಾಗಿದ್ದೆ. ಕಾರ್ಮಿಕರ ಪರವಾಗಿ ಹಲವಾರು ಹೋರಾಟ ಮಾಡಿದ್ದೆನೆ. ಉದಾ; ಶಿವಮೊಗ್ಗ ಶುಗರ್ ಪ್ಯಾಕ್ಟರಿ‌..ವಿಐಎಸ್ಎಲ್,... ಇತ್ಯಾದಿ..ಟಿಕೀಸುವವರು ನನ್ನ ಬಗ್ಗೆ ತಿಳಿದುಕೊಂಡು ಮಾತನಾಡಿದರೇ ಒಳ್ಳೆಯದು. ನನಗೆ ಶಿವಮೊಗ್ಗದಲ್ಲಿ ಟಿಕೇಟ್ ಸಿಗದಿದ್ದರೆ ನಂತರ  ನೋಡಿ ತೀರ್ಮಾನ‌ ಕೈಗೊಳ್ಳುತ್ತೆನೆ ಎಂದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.